ನವೆಂಬರ್ ಒಂದರಿಂದ ಹೊಸ ನಿಯಮಗಳು ಈಗಾಗಲೇ ಜಾರಿಗೆ ಆಗುತ್ತಿರುವ ಕುರಿತಂತೆ ಮಾಹಿತಿಗಳು ದೊರಕುತ್ತಿವೆ. ಹೌದು ಮಿತ್ರರೇ ಈ ಹೊಸ ನಿಯಮ ಜಾರಿಗೆ ಆಗುತ್ತಿರುವುದು ಸಾರಿಗೆ ನಿಯಮಗಳಲ್ಲಿ ಎಂಬುದು ಗಮನಿಸಬೇಕಾಗಿರುವಂತಹ ವಿಚಾರ. ಸೀಟ್ ಬೆಲ್ಟ್ ಅನ್ನು ಎಲ್ಲರೂ ಕಡ್ಡಾಯವಾಗಿ ಧರಿಸಬೇಕು ಎನ್ನುವುದು ಈಗಾಗಲೇ ನಿಮಗೆ ತಿಳಿದಿರುವ ನಿಯಮವಾಗಿದೆ. ಆದರೆ ಈಗ ಅದಕ್ಕೆ ಮತ್ತೊಂದು ನಿಯಮವು ಕೂಡ ಸೇರ್ಪಡೆಯಾಗಿದೆ.
ಹೌದು ಮಿತ್ರರೇ, ಕೇವಲ ಮುಂಭಾಗದಲ್ಲಿ ಕುಳಿತುಕೊಂಡಿರುವ ಡ್ರೈವರ್ ಮಾತ್ರವಲ್ಲದೆ ಅವರ ಜೊತೆಗೆ ಕುಳಿತುಕೊಂಡಿರುವ ಪ್ರಯಾಣಿಕರು ಹಾಗೂ ಹಿಂಬದಿಯಲ್ಲಿ ಕುಳಿತುಕೊಂಡಿರುವ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಅನ್ನು ಧರಿಸಬೇಕು. ಹಾಗಿದ್ದರೆ ನವೆಂಬರ್ ಒಂದರಿಂದ ಅಂದರೆ ಇಂದಿನಿಂದ ಜಾರಿಗೆ ಬರುತ್ತಿರುವ ನಿಯಮಗಳು ಅದು ಮುಂಬೈ ನಗರದಲ್ಲಿ. ಅವುಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಸೀಟ್ ಬೆಲ್ಟ್ ಅನ್ನು ಧರಿಸದೆ ವಾಹನ ಚಲಾವಣೆ ಮಾಡುವುದು ಗಂಭೀರ ಅಪರಾಧ ಆಗಿರುತ್ತದೆ. ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಅನ್ನು ಧರಿಸಬೇಕು ಇಲ್ಲವಾದಲ್ಲಿ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಇಂದಿನ ಒಳಗೆ ಸೀಟ್ ಬೆಲ್ಟ್ ಇಲ್ಲದ ವಾಹನಗಳಿಗೆ ಸೀಟ್ ಬೆಲ್ಟ್ ಅಳವಡಿಸಿಕೊಳ್ಳಲು ಸಮಯ ಅವಕಾಶವನ್ನು ನೀಡಲಾಗಿದ್ದು ಇನ್ನು ಮುಂದೆ ಯಾವುದೇ ಸಬುಬನ್ನು ಹೇಳಲು ಸಾಧ್ಯವಿಲ್ಲ.
ಇಂದಿನಿಂದ ಮುಂಬೈ ರಸ್ತೆಯ ಮೇಲೆ ಇಳಿಯುವಂತಹ ಪ್ರತಿಯೊಂದು ವಾಹನದ ಚಾಲಕರು ಹಾಗೂ ಪ್ರಯಾಣಿಕರು ಸೀಟ್ ಬೆಲ್ಟ್ ಅನ್ನು ಧರಿಸಲೇಬೇಕು ಇದು ಕಡ್ಡಾಯವಾಗಿ ನಿರ್ಧರಿಸುವ ಕಾನೂನಾಗಿದ್ದು ಇದನ್ನು ಉಲ್ಲಂಘಿಸುವ ಪ್ರತಿಯೊಬ್ಬರೂ ಕೂಡ ಅದಕ್ಕೆ ಅನ್ವಯ ಆಗುವಂತಹ ಕಾನೂನಾತ್ಮಕ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
ಹೀಗಾಗಿ ನವೆಂಬರ್ ಒಂದರಿಂದ ಮುಂಬೈ ರಸ್ತೆಯ ಮೇಲೆ ಇಳಿಯುವಂತಹ ಪ್ರತಿಯೊಂದು ವಾಹನಗಳು ಕೂಡ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲವಾದಲ್ಲಿ 2019ರ ಸೆಕ್ಷನ್ 194 ಬಿ 1ರ ಅನ್ವಯ ಕಾನೂನಾತ್ಮಕ ಕ್ರಮಕ್ಕೆ ಅನ್ವಯ ಆಗುವಂಥ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.