ಗ್ರಹಗತಿಗಳು ಬದಲಾದಂತೆಲ್ಲ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇವು ಕೆಲವೊಮ್ಮೆ ಶುಭ ಸಂದೇಶಗಳನ್ನು ತರಬಹುದು. ಇನ್ನೂ ಕೆಲವೊಮ್ಮೆ ಸಮಸ್ಯೆಗಳನ್ನು ಕಷ್ಟದ ದಿನಗಳನ್ನು ತರಬಹುದು. ಮುಂದಿನ ವಾರ ದ್ವಾದಶಿ ರಾಶಿಗಳ ಭವಿಷ್ಯವೂ ಬದಲಾಗುತ್ತದೆ. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಜೀವನದಲ್ಲಿ ಕೆಲ ಏಳು ಬೀಳುಗಳಾಗುವುದು ಸಹಜ ಪ್ರಕ್ರಿಯೆಯಾಗಿದೆ. ಮತ್ತೊಂದು ವಿಚಾರವೆಂದರೆ ಗ್ರಹಗತಿಗಳ ಬದಲಾವಣೆಯಿಂದಾಗಿ ಮನುಷ್ಯನ ಆತ್ಮವಿಶ್ವಾಸ ಕೊರತೆ, ಚಿಂತೆ, ಹಾಗೂ ಗೊಂದಲಗಳಿಗೂ ಕಾರಣವಾಗಬಹುದು. ಕೆಲ ರಾಶಿ ಚಕ್ರಗಳಿಗೆ ಉತ್ತಮ ಸಂದೇಶವನ್ನು ನೀಡಿದರೆ ಇನ್ನೂ ಕೆಲ ರಾಶಿ ಚಕ್ರಗಳ ಮೇಲೆ ಕೆಲ ವಿಚಾರದಲ್ಲಿ ಕೆಟ್ಟ ಪರಿಣಾಮಗಳು ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಯಾವ ರಾಶಿಯವರ ಜೀವನದಲ್ಲಿ ಜೂ. 19ರಿಂದ ಜೂ. 25ರವರೆಗಿನ ಉತ್ತಮ ಲಾಭ ಪಡೆಯಲಿದ್ದಾರೆ. ಯಾವ ರಾಶಿಯವರು ದುರಾದೃಷ್ಟ ಹೊಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ ರಾಶಿಯವರಿಗೆ ಈ ವಾರ ಹೊಸದಾಗಿ ಆರಂಭಿಸಿರುವ ಉದ್ಯಮವು ನಿಧಾನವಾಗಿ ಪ್ರಗತಿಯತ್ತ ಸಾಗುತ್ತದೆ. ಆಸಕ್ತ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅನವಶ್ಯಕ ಮಾತುಗಳನ್ನಾಡಿ ಜನರ ನಡುವೆ ನಿಷ್ಟೂರಕ್ಕೆ ಒಳಗಾಗುವ ಸಾಧ್ಯತೆಯಿದೆ, ಎಚ್ಚರವಹಿಸಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡದಿರುವುದು ಒಳ್ಳೆಯದು. ಸಂಗಾತಿಯ ಮನೆಯ ಕಡೆಯವರಿಂದ ಯಾವುದೋ ಒಂದು ರೀತಿಯ ಪ್ರತಿರೋಧ ಎದುರಾಗುತ್ತದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಹಿರಿಯರ ಸಕಾಲಿಕ ನೆರವಿನಿಂದ ಆಪತ್ತುಗಳು ದೂರವಾಗುತ್ತವೆ. ಕೃಷಿಯಲ್ಲಿ ಹೆಚ್ಚು ಲಾಭವನ್ನು ಕಾಣಬಹುದು.

ವೃಷಭ ರಾಶಿಯವರಿಗೆ ಈ ವಾರ ಕೃಷಿ ಕಾರ್ಮಿಕರಿಗೆ ಅನಿರೀಕ್ಷಿತ ಬಿಡುವು ದೊರೆಯುತ್ತದೆ. ಹಣ್ಣು ಮತ್ತು ಹೂವಿನ ವ್ಯಾಪಾರಿಗಳಿಗೆ ಧನಲಾಭ ಹೆಚ್ಚುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಸರ್ಕಾರದಿಂದ ಆಗುವ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು. ಉದ್ಯೋಗದಲ್ಲಿ ಒಳ ಶತ್ರುಗಳು ಇರುತ್ತಾರೆ ಎಚ್ಚರವಹಿಸಿರಿ. ಇಚ್ಛಿಸಿದ ನಿವೇಶನವನ್ನು ಕೊಳ್ಳಲು ಸಾಲ ಸೌಲಭ್ಯಗಳು ಅಥವಾ ಹಣಕಾಸಿನ ನೆರವು ದೊರೆತು ಸಂತಸವಾಗುತ್ತದೆ. ರಾಜಕೀಯ ನಾಯಕರುಗಳಿಗೆ ಸಾರ್ವಜನಿಕರಿಂದ ಪುರಸ್ಕಾರದ ಜೊತೆಗೆ ಬೇಡಿಕೆಯ ಪಟ್ಟಿಯು ದೊರೆಯುತ್ತದೆ. ಸರ್ಕಾರಿ ಸಂಸ್ಥೆಗಳಿಗೆ ಆಹಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ಆದಾಯವೂ ಹೆಚ್ಚುತ್ತದೆ.

ಮಿಥುನ ರಾಶಿಯವರು ಈ ವಾರ ಸೌಂದರ್ಯ ಹಾಗೂ ಪ್ರೀತಿಗೆ ಅಧಿಕ ಮಹತ್ವ
ಪ್ರೀತಿ ಮತ್ತು ಸೌಂದರ್ಯದ ಪ್ರತೀಕವಾದ ಶುಕ್ರ ಗ್ರಹವು ಜೂನ್ 22 ರಂದು ನಿಮ್ಮ ರಾಶಿಯನ್ನು ಪ್ರವೇಶಿಸುತ್ತದೆ. ಈ ವಾರಾಂತ್ಯದಲ್ಲಿ ನಿಮ್ಮ ಕರ್ಕಾಟಕ ರಾಶಿಯ ಸ್ನೇಹಿತರ ಹುಟ್ಟು ಹಬ್ಬದಲ್ಲಿ ಭಾಗಿಯಾಗುವಿರಿ. ಅಲ್ಲಿ ಎಲ್ಲರ ಗಮನವನ್ನು ನೀವು ಸೆಳೆಯುವಿರಿ. ಪ್ರೀತಿ ಮತ್ತು ಸೌಂದರ್ಯದ ಪ್ರತೀಕವಾದ ಶುಕ್ರ ಗ್ರಹವು ನಿಮ್ಮ ಗ್ರಹದಲ್ಲಿ ಪ್ರವೇಶ ಮಾಡುವ ಕಾರಣದಿಂದಾಗಿ ಈ ವಾರ ನೀವು ಸೌಂದರ್ಯ ಹಾಗೂ ಪ್ರೀತಿಗೆ ಅಧಿಕ ಮಹತ್ವ ನೀಡುವಿರಿ. ಅದರಲ್ಲೂ ಯುವಕರು ಈ ವಾರ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಣಯ ಕಾಲ ಕಳೆಯುವಿರಿ.

ಕರ್ಕಾಟಕ ರಾಶಿಯವರ ಪಾಲಿಗೆ: ಈ ವಾರ ನಿಮ್ಮದೇ ಕಾಲವಾಗಲಿದೆ. ಜೂನ್ 21 ರಂದು ಸೂರ್ಯನು ನಿಮ್ಮ ರಾಶಿಗೆ ಪ್ರವೇಶ ಮಾಡಲಿದೆ. ಈ ವಾರದಲ್ಲಿ ಕರ್ಕಾಟಕ ನಿಮ್ಮ ಜನ್ಮ ದಿನ ಇರಲಿದೆ. ಎಲ್ಲರೂ ನೀವು ಕೊಂಚ ದೊಡ್ಡವರಂತೆ ವರ್ತನೆ ಮಾಡಬೇಕು ಎಂದು ಭಾವಿಸುತ್ತಾರೆ. ಆದರೆ ನಿಮ್ಮಲ್ಲಿ ಇರುವ ಬಾಲ್ಯ ಮನಸ್ಸು ನಿಮ್ಮನ್ನು ಇನ್ನೂ ಬಾಲ್ಯರನ್ನಾಗಿಸುತ್ತದೆ. ನಿಮ್ಮ ಸ್ನೇಹಿತರು ನೀವು ಮನೆಯಲ್ಲೇ ಔತಣಕೂಟ ಮಾಡಬೇಕೆಂದು ಬಯಸುತ್ತಾರೆ. ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ಪ್ರವಾಸಕ್ಕೆ ತೆರಳಲು ಸಿದ್ಧರಾಗುತ್ತಾರೆ. ಆದರೆ ನೀವು ಏಕಾಂಗಿಯಾಗಿ ಅಥವಾ ನಿಮ್ಮ ಸ್ನೇಹಿತರೊಂದಿಗೆ ಸರಳವಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತೀರಿ. ಬೇರೊಬ್ಬರ ಮಾತಿನಂತೆ ನಡೆಯುವ ಮೊದಲು ನಿಮಗೆ ಏನು ಬೇಕು ಎಂದು ಅರ್ಥ ಮಾಡಿಕೊಳ್ಳಿ.

ಸಿಂಹ ರಾಶಿಯವರಿಗೆ ಈ ವಾರ ಕ್ರೀಡಾಪಟುಗಳಿಗೆ ಕ್ರೀಡಾಸ್ಪರ್ಧೆಯಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ವಿಜ್ಞಾನಿಗಳಿಗೆ ಅವರ ಆವಿಷ್ಕಾರದಲ್ಲಿ ಮೇಲುಗೈ ಇರುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ಕುಟುಂಬದಲ್ಲಿರುವ ಹಿರಿಯರ ಕೆಲವು ಆಕಾಂಕ್ಷೆಗಳು ಈಡೇರುವ ಸಾಧ್ಯತೆ ಇದೆ. ರಕ್ಷಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಗೌರವ ದೊರೆಯುತ್ತದೆ. ನೃತ್ಯ ಕಲಾವಿದರಿಗೆ ಸಮಾಧಾನಕರ ದಿನವಾಗಿರುತ್ತದೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ಮಕ್ಕಳ ನಡವಳಿಕೆ ಬಗ್ಗೆ ವಿಶೇಷ ಗಮನವನ್ನು ಕೊಡಲೇಬೇಕಾದ ಪರಿಸ್ಥಿತಿ ಇದೆ. ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸಗಳು ನಿಧಾನವಾದರೂ ನಿಲ್ಲುವುದಿಲ್ಲ. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು.

ಕನ್ಯಾ ರಾಶಿಯವರಿಗೆ ಈ ವಾರ ಕುಟುಂಬದಲ್ಲಿ ಹೊಂದಾಣಿಕೆಗಾಗಿ ಸಾಕಷ್ಟು ಪ್ರಯತ್ನ ಪಡುವಿರಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರುಗಳನ್ನು ಕಾಣಬಹುದು. ಕೋರ್ಟ್‌ ಸಂಬಂಧಿ ಕಲಹಗಳಲ್ಲಿ ಅಲ್ಪಮಟ್ಟಿನ ಮುನ್ನಡೆಯನ್ನು ಕಂಡು ನಿರಾಳರಾಗುವಿರಿ. ವ್ಯವಹಾರದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು. ಹೊಸ ಉದ್ಯೋಗಕ್ಕೆ ಸೇರುವ ವಿಚಾರದಲ್ಲಿ ಸ್ನೇಹಿತರಿಂದ ಸಲಹೆಗಳನ್ನು ಪಡೆದು ಮುನ್ನಡೆಯುವುದು ಒಳ್ಳೆಯದು. ರೈತರಿಗೆ ಉತ್ತಮ ಧನಾದಾಯದ ಸುಳಿವು ಇದೆ. ಒಡವೆಗಳನ್ನು ಖರೀದಿ ಮಾಡಲು ಆಲೋಚನೆ ಮಾಡುವಿರಿ. ಸಂಗಾತಿಯನ್ನು ಅರಸುತ್ತಿರುವವರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ರಂಗ ಕಲಾವಿದರುಗಳಿಗೆ ಹೆಚ್ಚಿನ ಮಾನ್ಯತೆ ದೊರೆಯುವ ಲಕ್ಷಣಗಳಿವೆ.

ತುಲಾ ರಾಶಿಯವರಿಗೆ ಅರ್ಹವಾದ ಮನ್ನಣೆ ದೊರೆಯಲಿದೆ.
ಜೂನ್ 21ನೇ ತಾರೀಖಿನಂದು ಕರ್ಕಾಟಕ ರಾಶಿಯ ಕಾಲ ಆರಂಭವಾಗಲಿದೆ. ಇದು ನೀವು ಹೆಚ್ಚು ಸಾಧನೆ ಮಾಡಿದ್ದೀರಿ ಎಂದು ನೀವು ಭಾವಿಸುವ ಕಾಲವಾಗಿದೆ. ನೀವು ವೃತ್ತಿಜೀವನದ ಗುರಿಯಲ್ಲಿ ಮುನ್ನಡೆಯುವಿರಿ. ನೀವು ತಾಯಿಯಾಗುವ ಅಥವಾ ನಿಮ್ಮ ಪತ್ನಿ ತಾಯಿಯಾಗುವ ಸಂತೋಷ ನಿಮ್ಮದಾಗಲಿದೆ. ಸಾಹಿತ್ಯ ಸಭೆಯಲ್ಲಿ ನಿಮಗೆ ಮನ್ನಣೆ ದೊರೆಯಲಿದೆ. ಮುಂದಿನ ಕೆಲವು ವಾರಗಳು ಕೆಲವು ಅರ್ಹವಾದ ಮನ್ನಣೆ ನಿಮಗಿದೆ. ನೀವು ಹೊರ ದೇಶದ ಚಿತ್ರವನ್ನು ನೋಡುವ ಆಸಕ್ತಿಯನ್ನು ಬೆಳೆಸಿಕೊಳ್ಳುವಿರಿ. ಹೊಸ ಭಾಷೆಯನ್ನು ಕಳೆಯುವ ಪ್ರಯತ್ನವನ್ನು ಮಾಡುವಿರಿ.

ವೃಶ್ಚಿಕ ರಾಶಿಯವರು ಹೊಸತನದಿಂದ ಹತಾಶರಾಗದಿರಿ
ಜೂನ್ 21ನೇ ತಾರೀಖಿನಂದು ಕರ್ಕಾಟಕ ರಾಶಿಗೆ ಸೂರ್ಯ ಪ್ರವೇಶ ಮಾಡಲಿದೆ. ಈ ಸಂದರ್ಭದಲ್ಲಿ ನಿಮ್ಮ ಪ್ರಯಾಣ ಜೀವನದಲ್ಲಿ ಕೊಂಚ ತೊಡಗು, ಕಷ್ಟ ಉಂಟಾಗಲಿದೆ. ನೀವು ಕೆಲಸದ ನಿಮಿತ್ತ ಹಲವೆಡೆ ಅಲೆದಾಡಬೇಕಾಗುತ್ತದೆ. ನೀವು ಹೊಸತನದಿಂದ ಹತಾಶರಾಗದಿರಿ. ಆದರೆ, ಶುಕ್ರವು ಮಿಥುನ ರಾಶಿ ಮತ್ತು ನಿಮ್ಮ ಸಂಪನ್ಮೂಲಗಳ ವಲಯವನ್ನು ಏಕಕಾಲದಲ್ಲಿ ಪ್ರವೇಶಿಸುವುದರಿಂದ, ಎರಡೂ ರಾಶಿಯವರು ಸಂತೋಷವಾಗಿರಲಿದ್ದೀರಿ. ನಿಮ್ಮ ಸಂಗಾತಿಗೆ ಮನವರಿಕೆ ಮಾಡಲು ನೀವು ಸಿಹಿ ಮಾತನ್ನಾಡಬೇಕಾಗುತ್ತದೆ. ನೀವು ಪ್ರಣಯ ಜೀವನಕ್ಕಾಗಿ ನಿಮ್ಮ ಸಂಗಾತಿಯ ಮನವೊಲಿಸುವಲ್ಲಿ ಸಫಲರಾಗುವಿರಿ.

ಧನು ರಾಶಿಯವರು ಈ ವಾರ ಉದ್ಯೋಗದಲ್ಲಿ ಯಶಸ್ಸನ್ನು ಕಾಣಬಹುದು. ಕುಟುಂಬದಲ್ಲಿ ಕಲಹ ಇದ್ದವರಿಗೆ ಅದರಿಂದ ಮುಕ್ತಿ ಸಿಗುತ್ತದೆ. ಮಹಿಳಾ ಉದ್ಯೋಗಿಗಳಿಗೆ ಪದೋನ್ನತಿ ಸಿಗುವ ಸಾಧ್ಯತೆಗಳಿವೆ. ಶುಭಸಮಾರಂಭಗಳಲ್ಲಿ ಭಾಗಿಯಾಗುವ ಅವಕಾಶಗಳಿವೆ. ಆದಾಯಗಳಿಸಲು ಹೊಸ ಯಂತ್ರವೊಂದನ್ನು ಖರೀದಿ ಮಾಡುವಿರಿ. ರೈತಾಪಿ ವರ್ಗದವರಿಗೆ ಆಶಾದಾಯಕ ಕಾಲವಾಗಿರುತ್ತದೆ. ಔಷಧಿ ಗಿಡಮೂಲಿಕೆಗಳನ್ನು ಬೆಳೆಯುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಶೃಂಗಾರ ಸಾಮಗ್ರಿಗಳ ವಹಿವಾಟು ಮಾಡುವವರಿಗೆ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಭಿನ್ನಾಭಿಪ್ರಾಯದಿಂದ ಈ ಹಿಂದೆ ನಿಂತುಹೋಗಿದ್ದ ಕೆಲಸಗಳು ಒಮ್ಮತದಿಂದ ಆರಂಭಗೊಳ್ಳುತ್ತವೆ. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು.

ಈ ವಾರ ಮಕರ ರಾಶಿಯ ಕೆಲವು ಬರಹಗಾರರಿಗೆ ಪ್ರಕಾಶಕರು ಮುಂಗಡ ಹಣ ಕೊಡುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಖರ್ಚಿಗೆ ಸಾಕಷ್ಟು ಕಡಿವಾಣ ಹಾಕುವುದು ಅತಿ ಅಗತ್ಯ. ವಿಷಯಾಧಾರಿತ ಚರ್ಚೆಗಳಿಂದ ಜ್ಞಾನ ಅಭಿವೃದ್ಧಿ ಆಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ಆಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ವಾಹನ ಮಾರಾಟಗಾರರಿಗೆ ಅಭಿವೃದ್ಧಿಯ ಗತಿಯನ್ನು ಕಾಣಬಹುದು. ಕುಟುಂಬ ಸಮೇತ ಸಮೀಪದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿಬರುವ ಸಾಧ್ಯತೆ ಇದೆ. ಸೈನಿಕರಿಗೆ ಏನೋ ಒಂದು ಸಾಧನೆಯನ್ನು ಮಾಡಿದ ತೃಪ್ತಿ ಇರುತ್ತದೆ. ಕೆಲವು ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಸಿಗುವ ಕಾಲ.

ಕುಂಭ ರಾಶಿಯವರು ಈ ವಾರ ದೈನಂದಿನ ಜಂಜಾಟವನ್ನು ಪ್ರೀತಿಸಲು ಕಲಿಯುವಿರಿ
ಜೂನ್ 21ನೇ ತಾರೀಖಿನಂದು ಕರ್ಕಾಟಕ ರಾಶಿಯ ಕಾಲ ಆರಂಭವಾಗಲಿದೆ. ನೀವು ನಿಮಗಾಗಿ ಶಿಸ್ತು ಮತ್ತು ದಿನಚರಿಯಲ್ಲಿ ತೊಡಗಿಸಿಕೊಳ್ಳಲು ಇದು ವರ್ಷದ ಅತ್ಯುತ್ತಮ ಸಮಯವಾಗಿದೆ. ನಿಮ್ಮ ಫಿಟ್‌ನೆಸ್ ಕಾರ್ಯ, ನಿಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದಾಗಲಿ, ಯಾವುದೇ ದೈನಂದಿನ ಜಂಜಾಟವನ್ನು ಪ್ರೀತಿಸಲು ಕಲಿಯುವಿರಿ. ಜೂನ್ 22 ರಂದು, ಶುಕ್ರವು ಮಿಥುನ ಮತ್ತು ನಿಮ್ಮ ಪ್ರಣಯ ವಲಯವನ್ನು ಪ್ರವೇಶ ಮಾಡಲಿದೆ. ಇದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನು ಹೆಚ್ಚು ಸೃಜನಶೀಲ ಮತ್ತು ಚೆಲ್ಲಾಟದ ಮನಸ್ಥಿತಿಯಲ್ಲಿ ಇರಿಸುತ್ತದೆ. ನಿಮ್ಮ ದಿನವನ್ನು ಸಂತೋಷವಾಗಿರಿಸಲು ನಿಮ್ಮೊಂದಿಗೆ ಇರುವವರನ್ನೂ ನೀವು ಸಂತಸಪಡಿಸಿ.

ಮೀನ ರಾಶಿಯವರಿಗೆ ಈ ವರ್ಷದ ಬಹುನಿರೀಕ್ಷಿತ ಸಮಯ
ಜೂನ್ 21ನೇ ತಾರೀಖಿನಂದು ಸೂರ್ಯ ಕರ್ಕಾಟಕ ಮತ್ತು ನಿಮ್ಮ ಸಂತೋಷ ವಲಯಕ್ಕೆ ಪ್ರವೇಶ ಮಾಡಲಿದೆ. ಇದರಿಂದಾಗಿ ಈ ವಾರ ನೀವು ಸ್ಪೂರ್ತಿಯಿಂದ ಇರುವಿರಿ. ಇದು ವರ್ಷದ ಬಹುನಿರೀಕ್ಷಿತ ಸಮಯವಾಗಿದ್ದು, ನೀವು ಸೃಜನಶೀಲತೆಗೆ ಮೊದಲ ಸ್ಥಾನವನ್ನು ನೀಡಬಹುದು. ನಿಮ್ಮ ಹೆಚ್ಚು ಪ್ರಣಯ ಕಾಲವನ್ನು ಕಳೆಯುವಿರಿ. ನಿಮಗೆ ಮಕ್ಕಳಿದ್ದರೆ ಅವರೇ ಈಗ ಪ್ರಮುಖ ಆದ್ಯತೆಯಾಗುತ್ತಾರೆ. ಮಕ್ಕಳೊಂದಿಗೆ ಅಧಿಕ ಸಮಯ ಕಳೆಯಿರಿ. ಇದು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಸಂತಸವನ್ನು ಉಂಟು ಮಾಡಲಿದೆ. ನಿಮ್ಮ ಜೀವನ ಸಂಗಾತಿಯೂ ಇದರಿಂದಾಗಿ ಸಂತಸಪಡುತ್ತಾರೆ. ಮಕ್ಕಳ ಮಾನಸಿಕ ಸ್ಥಿತಿ ಸುಧಾರಿಸಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!