ನಾಯಿಯನ್ನು ಪ್ರೀತಿಸುವವರು ಬಹಳ ಕಡಿಮೆ ಜನ, ಬಹುತೇಕ ಎಲ್ಲರೂ ನಾಯಿಯನ್ನು ಇಷ್ಟಪಟ್ಟು ಸಾಕುತ್ತಾರೆ. ಇದೀಗ ಬಹು ನಿರೀಕ್ಷೆಯ ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನೆಮಾದಲ್ಲಿ ಕೇಂದ್ರಬಿಂದುವಾಗಿರುವ ಚಾರ್ಲಿ ಎಂಬ ನಾಯಿ ಪಡೆಯುವ ಸಂಭಾವನೆ ಬಗ್ಗೆ ಹಲವರಲ್ಲಿ ಕುತೂಹಲವಿದೆ. ಹಾಗಾದರೆ ಚಾರ್ಲಿ ಪಡೆದುಕೊಂಡ ಸಂಭಾವನೆ ಎಷ್ಟು ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ.

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಕನ್ನಡದ ಮತ್ತೊಂದು ಪ್ಯಾನ್ ಸಿನಿಮಾ ಆಗಿ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಶ್ವಾನ ಮತ್ತು ಮಾನವನ ಸಂಬಂಧವನ್ನು ಈ ಸಿನಿಮಾದಲ್ಲಿ ಉತ್ತಮವಾಗಿ ಬಿಂಬಿಸಲಾಗಿದೆ. ಚಾರ್ಲಿಯ ತುಂಟಾಟ, ರಕ್ಷಿತ್ ಶೆಟ್ಟಿಯ ಪರದಾಟದ ಸನ್ನಿವೇಶಗಳು, ನಾಯಿಯೊಂದಿಗಿನ ಭಾವನಾತ್ಮಕ ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ಒದ್ದೆ ಮಾಡಿವುದಂತು ಹೌದು. ಶ್ವಾನ ಪ್ರಿಯರಿಗೆ ಚಾರ್ಲಿ ಇಷ್ಟ ಆಗುತ್ತಿದ್ದಾಳೆ. ಈ ಸಿನಿಮಾ ಬಗ್ಗೆ ಮೌತ್ ಟಾಕ್ ಪಾಸಿಟಿವ್ ಆಗಿದೆ. ಕನ್ನಡದಲ್ಲಿ ಈ ಸಿನಿಮಾಗೆ ಪ್ರೇಕ್ಷಕರು ಭಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಫಸ್ಟ್ ಡೆ ಸಿನಿಮಾ ಕಲೆಕ್ಷನ್ ಸಾಧಾರಣ ಅಂತ ಅನಿಸಿದ್ದರೂ ಸಹ ಎರಡು ಹಾಗೂ ಮೂರನೆ ದಿನಕ್ಕೆ ಕಲೆಕ್ಷನ್ ಹೆಚ್ಚಾಗಿದೆ. ಮಲ್ಟಿಪ್ಲೆಕ್ಸ್‌ನಲ್ಲಿ 777 ಚಾರ್ಲಿ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿದೆ. ನಗರ ಪ್ರದೇಶಗಳಲ್ಲಿ ಅದರಲ್ಲೂ ವೀಕೆಂಡ್‌ನಲ್ಲಿ ಚಾರ್ಲಿ ಸಿನಿಮಾ ಮೋಡಿ ಮಾಡಿದೆ. ರಕ್ಷಿತ್ ಶೆಟ್ಟಿಯಂತೆಯೆ ಚಾರ್ಲಿ ಕೂಡ ಪ್ರೇಕ್ಷಕರ ಫೇವರಿಟ್ ಆಗಿದೆ. ಚಾರ್ಲಿ ಸಿನಿಮಾದ ಕೇಂದ್ರ ಬಿಂದು ನಾಯಿ ಪಡೆದ ಸಂಭಾವನೆ ಬಗ್ಗೆ ಕುತೂಹಲ ಸಹಜ. ರಕ್ಷಿತ್ ಶೆಟ್ಟಿ ಅವರೆ 777 ಚಾರ್ಲಿ ಸಿನಿಮಾ ಹೀರೊ ಅನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ರಕ್ಷಿತ್ ಅವರೆ ಚಾರ್ಲಿನೆ ಈ ಸಿನಿಮಾದ ಹೀರೊ ಎಂದು ಹೇಳಿದ್ದಾರೆ.

ಚಾರ್ಲಿ ಇಲ್ಲಾ ಅಂದರೆ ಧರ್ಮ ಇಲ್ಲ. ಧರ್ಮ ಇಲ್ಲ ಅಂದರೆ ಚಾರ್ಲಿ ಇಲ್ಲ. ಈ ಕಾರಣಕ್ಕೆ ಚಾರ್ಲಿನೆ ರಿಯಲ್ ಹೀರೊ ಅಂದಮೇಲೆ ಅದಕ್ಕೆ ಕೊಟ್ಟಿರುವ ಸಂಭಾವನೆ ಎಷ್ಟಿರಬಹುದು ಎನ್ನುವುದು ಎಲ್ಲರ ಕುತೂಹಲವಾಗಿದೆ. ಈ ಪ್ರಶ್ನೆಗೆ ರಕ್ಷಿತ್ ಶೆಟ್ಟಿ ಅವರೆ ಉತ್ತರ ಕೊಟ್ಟಿದ್ದಾರೆ, ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ರಕ್ಷಿತ್ ರಿವೀಲ್ ಮಾಡಿದ್ದಾರೆ. ಚಾರ್ಲಿ ಸಂಭಾವನೆ ಒಂದಷ್ಟಾಗಿದೆ. ಅದು ಕೋಟಿ ಮೊತ್ತದಲ್ಲಿದೆ ಎಂದು ಹೇಳಿದ್ದಾರೆ.

777 ಚಾರ್ಲಿ ಸಿನಿಮಾ ನೋಡಿ ಶ್ವಾನ ಪ್ರಿಯರು ಮತ್ತಷ್ಟು ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಾರೆ ಆದರೆ ರಕ್ಷಿತ್ ಶೆಟ್ಟಿ ಮಾತ್ರ ಚಾರ್ಲಿ ಅಭಿಮಾನಿಗಳಿಗೆ ಬೇಸರ ಪಡಿಸಿದ್ದಾರೆ ಹೌದು ರಕ್ಷಿತ್ ಇದು ಚಾರ್ಲಿಯ ಮೊದಲ ಹಾಗೂ ಕೊನೆಯ ಸಿನಿಮಾ ಎಂದು ಹೇಳಿದ್ದಾರೆ, ಚಾರ್ಲಿ ರಿಟೈರ್ ಆಗಿದ್ದಾನೆ ಎಂದು ಹೇಳಿದ್ದಾರೆ. ಈ ಮೂಲಕ ಚಾರ್ಲಿ ಇನ್ನುಮುಂದೆ ಯಾವುದೆ ಸಿನಿಮಾಗಳಲ್ಲಿ ಕಾಣಿಸುವುದಿಲ್ಲ. ಚಾರ್ಲಿ ಸಿನಿಮಾ ಬಿಡುಗಡೆಯಾಗಲು ತಡವಾಯಿತು ಇದರ ಬಗ್ಗೆಯೂ ಕೆಲವರಲ್ಲಿ ಪ್ರಶ್ನೆಯಿದೆ. ಚಾರ್ಲಿ 777 ಸಿನಿಮಾ ಮೇಕಿಂಗ್ ಮಾಡುವಾಗ ಸಾಕಷ್ಟು ಸಮಯ ಹಿಡಿದಿದೆ. ಹೆಚ್ಚು ಕಡಿಮೆ ಮೂರು ವರ್ಷ ಈ ಸಿನಿಮಾವನ್ನು ಮಾಡಲಾಗಿದೆ. ಕೊರೋನ, ಲಾಕ್‌ಡೌನ್ ಎಂದು ಶೂಟಿಂಗ್ ಸ್ಥಗಿತಗೊಂಡಿತ್ತು.

ಇನ್ನೊಂದು ಕಡೆ ಶ್ವಾನದ ಮೂಡ್ ಕೂಡ ಬಹಳ ಮುಖ್ಯ ಆಗಿತ್ತು. ಈ ಕಾರಣಕ್ಕೆ ಸಿನಿಮಾ ಕೊಂಚ ತಡವಾಯಿತು ಆದರೂ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ. ಮೂರು ದಿನಗಳಲ್ಲಿ ಸುಮಾರು 23.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈಗಾಗಲೆ ಮೊದಲ ಮೂರು ದಿನಗಳ ಬಳಿಕವೂ ಕಲೆಕ್ಷನ್ ಜೋರಾಗಿಯೆ ಇದೆ. ಇನ್ನು ಮುಂದಿನ ದಿನಗಳಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತದೆ ಎನ್ನುವ ಕುತೂಹಲ ಸ್ಯಾಂಡಲ್‌ವುಡ್‌ನಲ್ಲಿ ಹುಟ್ಟಿಕೊಂಡಿದೆ. ಚಾರ್ಲಿ ಸಿನಿಮಾ ಇನ್ನು ಹೆಚ್ಚಿನ ಕಲೆಕ್ಷನ್ ಪಡೆಯಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ಸಿನಿಪ್ರಿಯರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *