ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಶಸ್ವಿ ಆಗಬೇಕು ಹಾಗೂ ಸಾಕಷ್ಟು ದೊಡ್ಡ ಮಟ್ಟದ ಸಂಪತ್ತನ್ನು ಸಂಪಾದಿಸಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಅದನ್ನು ಪಡೆಯಲು ಸಾಧ್ಯವಿಲ್ಲ. ಲಕ್ಷ್ಮೀದೇವಿ ಮೆಚ್ಚಿ ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಮಾಡಿದರೆ ಮಾತ್ರ ನೀವು ಸುಲಭವಾಗಿ ಸಂಪತ್ತನ್ನು ಸಂಪಾದಿಸಬಹುದಾಗಿದೆ. ಹಾಗಿದ್ದರೆ ಬನ್ನಿ, ಯಾವ ಕೆಲಸವನ್ನು ಪ್ರತಿದಿನ ಮಾಡಿದರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಪುರಾಣ ಶಾಸ್ತ್ರಗಳ ಪ್ರಕಾರ ತುಳಸಿ ಗಿಡದಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂಬ ಪ್ರತಿತಿಯಿದೆ. ಹೀಗಾಗಿ ನಿಮ್ಮ ಮನೆಯಲ್ಲಿ ತುಳಸಿ ಗಿಡ ಇರಬೇಕು. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚಿ ಪೂಜೆ ಮಾಡಬೇಕು. ಇದರಿಂದಾಗಿ ತಾಯಿ ಲಕ್ಷ್ಮಿ ದೇವಿ ಪ್ರಸನ್ನಳಾಗಿ ನಿಮ್ಮ ಮೇಲೆ ಅನುಗ್ರಹವನ್ನು ಬೀರುತ್ತಾಳೆ ಎಂಬ ನಂಬಿಕೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಯಾವಾಗಲೂ ಕೂಡ ಊಟ ಮಾಡಬೇಕಾದರೆ ಸೂರ್ಯ ಉಗಮವಾಗುವ ಪೂರ್ವ ದಿಕ್ಕಿಗೆ ನಿಮ್ಮ ಮುಖವನ್ನು ಮುಖ ಮಾಡಿ ಊಟ ಮಾಡಬೇಕು. ಇನ್ನು ಯಾವತ್ತೂ ಕೂಡ ಊಟ ಮಾಡಬೇಕಾದರೆ ಕಾಲಿಗೆ ಚಪ್ಪಲಿಯನ್ನು ಹಾಕಬೇಡಿ ಇದರಿಂದಾಗಿ ಅನ್ನಪೂರ್ಣೇಶ್ವರಿ ಕೋಪಗೊಳ್ಳುತ್ತಾಳೆ. ಈ ವಿಚಾರಗಳನ್ನು ಊಟ ಮಾಡುವ ಹೊತ್ತಿನಲ್ಲಿ ಗಮನ ವಹಿಸಬೇಕು.
ಮನೆಯ ಈಶಾನ್ಯ ದಿಕ್ಕನ್ನು ಅತ್ಯಂತ ಪವಿತ್ರ ಹಾಗೂ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಇರುವಂತಹ ಜಾಗ ಎಂಬುದಾಗಿ ನಂಬಲಾಗುತ್ತದೆ. ಈ ಸಂದರ್ಭದಲ್ಲಿ ನಕಾರಾತ್ಮಕ ಶಕ್ತಿಗಳು ಈ ಜಾಗವನ್ನು ತಮ್ಮ ವಶ ಮಾಡಲು ಪ್ರಯತ್ನಿಸುತ್ತವೆ. ಈ ಸಮಯದಲ್ಲಿ ನೀವು ಈಶಾನ್ಯ ದಿಕ್ಕಿಗೆ ಗಂಗಾಜಲವನ್ನು ಸಿಂಪಡಿಸಬೇಕು. ಇದರಿಂದಾಗಿ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಿಂದ ದೂರವಿರುತ್ತವೆ.
ಪ್ರತಿದಿನ ಬೆಳಗ್ಗೆ ಎದ್ದಾಗ ಮೊದಲಿಗೆ ಕಾರವನ್ನು ಉಜ್ಜಿ ಮುಖಕ್ಕೆ ಅಡ್ಡ ಹಿಡಿದು ಕರಾಗ್ರೇ ವಸತಿ ಕರ ಮಧ್ಯ ಸರಸ್ವತಿ ಮಂತ್ರವನ್ನು ದಿನಾಲು ಪಠಿಸಬೇಕು. ಇದರಿಂದಾಗಿ ಸಂಪತ್ತಿನ ದೇವಿ ಯಾಗಿರುವ ಲಕ್ಷ್ಮಿ ಹಾಗೂ ಜ್ಞಾನದ ದೇವಿಯಾಗಿರುವ ಸರಸ್ವತಿ ಇಬ್ಬರೂ ಕೂಡ ನಿಮಗೆ ಆಶೀರ್ವಾದವನ್ನು ಮಾಡುತ್ತಾರೆ ಹಾಗೂ ನೀವು ನಿಮ್ಮ ಜೀವನದಲ್ಲಿ ಅತ್ಯಂತ ಯಶಸ್ವಿಯಾಗಿ ಹಾಗೂ ಶ್ರೀಮಂತರಾಗಿ ಇರಲು ಆಶೀರ್ವಾದ ಮಾಡುತ್ತಾರೆ.