ಮಕರ ರಾಶಿಯನ್ನು ಶನಿ ಗ್ರಹವು ಆಳುತ್ತದೆ. ಶನಿಯ ಆಡಳಿತದ ಅಡಿಯಲ್ಲಿ ಬರುವ ಕಾರಣ, ಮಕರ ರಾಶಿಯವರು ಸಾಕಷ್ಟು ಶಿಸ್ತಿನಿಂದ ಇರುತ್ತಾರೆ. ಮಕರ ರಾಶಿಯನ್ನು ಪ್ರತಿನಿಧಿಸುವ ಚಿಹ್ನೆ ಮಕರ ಅಥವಾ ಕೊಂಬಿನ ಮೇಕೆ. ಹಿಂದೂ ಪುರಾಣಗಳ ಪ್ರಕಾರ, ಇದನ್ನು ಸಮುದ್ರ ಜೀವಿ ಎಂದು ಪರಿಗಣಿಸಲಾಗಿದೆ.

ಹನ್ನೆರಡು ರಾಶಿಚಕ್ರಗಳಲ್ಲಿ 10ನೇ ರಾಶಿಯಾದ ಮಕರ ರಾಶಿಯು ಮೇಲಕ್ಕೆ ಹತ್ತುವ, ಮುಂದಕ್ಕೆ ಚಲಿಸುವ ಮೇಕೆಯ ಸಂಕೇತವನ್ನು ಹೊಂದಿದೆ. ಜವಾಬ್ದಾರಿಗಳಿಗೆ ಸದಾ ಬದ್ಧರಾಗಿರುವ ಈ ರಾಶಿಯವರು ಜೀವನದ ಕೆಲಸದ ಭಾಗವನ್ನು ಪ್ರತಿನಿಧಿಸುತ್ತಾರೆ. ಆಗಾಗ ಶಾಂತವಾಗಿ, ಕೂಲ್‌ ಆಗಿ ಕಾಣುವ ಈ ರಾಶಿಯವರು ನೋಡಲು ತಟಸ್ಥರಾಗಿ, ಶಾಂತ ಮತ್ತು ಸರಳವಾಗಿ ಇರುತ್ತಾರೆ. ಇವರು ಪ್ರಾಯೋಗಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ ಹೊರತು ಸೌಂದರ್ಯಕ್ಕೆ ಅಲ್ಲ.

ಶನಿ ಗ್ರಹವೆಂದರೆ ಅದೊಂದು ತೊಂದರೆ ಕೊಡುವ ಗ್ರಹ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಶನಿಯು ತಾಮಸ ಗ್ರಹವೆಂಬುದು ನಿಜವೇ ಆದರೂ ಎಲ್ಲರಿಗೂ ತೊಂದರೆ ಕೊಡುವುದಿಲ್ಲ. ಕೆಲವು ಗ್ರಹಗಳಿಗೆ ಹೇಗೆ ಶನಿದೇವ ಶುಭ ಮತ್ತು ಅಶುಭ ಫಲಗಳನ್ನು ಕೊಡುತ್ತಾನೆಯೋ ಹಾಗೇಯೆ ರಾಶಿಗಳ ಮೇಲೂ ಶುಭಾಶುಭ ಫಲಗಳನ್ನು ನೀಡುವ ನ್ಯಾಯದೇವನಾಗಿದ್ದಾನೆ.

ಅಧರ್ಮ ಮಾರ್ಗದಲ್ಲಿ ನಡೆಯುವವರನ್ನು, ತಪ್ಪು ಮಾಡಿದವರನ್ನು ಶನಿ ಬಿಡದೇ ಕಾಡುತ್ತಾನೆ ಎನ್ನುತ್ತಾರೆ. ಶಿಸ್ತಿನಿಂದ ನಡೆದವರಿಗೆ ಉತ್ತಮ ಫಲ ನೀಡುತ್ತಾನೆ. ಹಾಗಂತ ಶನಿ ಕಾಟ ಹಿಡಿದವರೆಲ್ಲ ಅಧರ್ಮ ಮಾರ್ಗ ತುಳಿದಿದ್ದಾರೆಂದಲ್ಲ. ಕೆಲವು ಗ್ರಹಗತಿಗಳೂ ಇಲ್ಲಿ ಪಾತ್ರವಹಿಸುತ್ತದೆ. ನಿಮ್ಮ ಜಾತಕದಲ್ಲಿ ಶನಿಯು ಯಾವ ರಾಶಿಯಲ್ಲಿದ್ದರೆ, ಯಾವ ರೀತಿಯ ಫಲವನ್ನು ನೀಡುತ್ತಾನೆ ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ರಾಶಿಗಳಿಗೆ ಲಾಭದಾಯಕನಾಗಿದ್ದರೆ, ಇನ್ನು ಕೆಲವು ರಾಶಿಯವರಿಗೆ ಹಾನಿಯನ್ನುಂಟು ಮಾಡುತ್ತಾನೆ.

ಮಕರ ರಾಶಿಯ ಅಧಿಪತಿ ಶನಿ ದೇವರು. ಈ ರಾಶಿಯವರು ಶನಿಯನ್ನು ಆರಾಧಿಸಬೇಕು. ಪ್ರತಿ ಶನಿವಾರ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು ಮತ್ತು ಕಪ್ಪು ಉದ್ದನ್ನು ದಾನ ಮಾಡಬೇಕು. ಮಕರ ರಾಶಿಯಲ್ಲಿ ಶನಿ ಇದ್ದರೆ ಇಂತವರು ಪರಿಶ್ರಮಿಗಳಾಗಿರುತ್ತಾರೆ. ದೇವರಲ್ಲಿ ಹೆಚ್ಚು ಭಕ್ತಿಯನ್ನು ಹೊಂದುತ್ತಾರೆ. ವ್ಯವಹಾರದಲ್ಲಿ ಏಳಿಗೆಯನ್ನು ಕಾಣುತ್ತಾರೆ. ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆಸ್ತಿ-ಭೂಮಿಯ ಲಾಭವನ್ನು ಶನಿ ತಂದುಕೊಡುತ್ತಾನೆ. ನವಗ್ರಹಗಳಲ್ಲೊಬ್ಬನಾಗಿ ಶನಿಯು ಭೂಮಿ ಮೇಲಿನ ಜೀವಿಗಳ ಮೇಲೆ ಬಹಳ ಪ್ರಭಾವ ಬೀರುತ್ತಾನೆ. ಶನಿಯು ಬಹಳ ನಿಧಾನಗತಿಯ ಗ್ರಹ. ಆತ ಕೆಟ್ಟವನಲ್ಲ. ಆದರೆ ವ್ಯಕ್ತಿಯ ಕರ್ಮಗಳಿಗನುಸಾರ ಅವರನ್ನು ಶಿಕ್ಷಿಸುತ್ತಾನೆ. ಒಳ್ಳೆಯ ಕರ್ಮಗಳನ್ನೇ ಮಾಡುವವರಿಗೆ ಆಶೀರ್ವಾದವನ್ನೂ ಅನುಗ್ರಹಿಸುತ್ತಾನೆ. ಕೆಟ್ಟದ್ದನ್ನು ತೆಗೆಯುವ ಸಾಮರ್ಥ್ಯ ಅವನಿಗಿದೆ.

ಕುಂಭ ರಾಶಿಯಲ್ಲಿ ಶನಿಯ ಸಂಚಾರವು ಮಕರ ರಾಶಿಯ ಜನರ ಗೌರವವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಜನರು ನಿಮ್ಮ ಮಾತನ್ನು ಕೇಳುತ್ತಾರೆ ಮತ್ತು ನಿಮ್ಮ ಮಾತನ್ನು ಗೌರವಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಹೆತ್ತವರು ನಿಮಗೆ ಆಸ್ತಿಯಲ್ಲಿ ಪಾಲು ನೀಡಬಹುದು. ಈ ಸಮಯದಲ್ಲಿ ನೀವು ಮಾಡುವ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಹಿರಿಯರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ, ನೀವು ಅವರ ಆಶೀರ್ವಾದವನ್ನು ಪಡೆಯಬಹುದು.
2022 ರಿಂದ 2027 ಮಕರ ರಾಶಿಯ ಮಂದಿಗೆ ಹೆಚ್ಚು ಮಹತ್ವದ ವರ್ಷ ಎಂದು ಹೇಳಬಹುದು. ಮಕರ ರಾಶಿಗೆ ಅದೃಷ್ಟ ಖುಲಾಯಿಸುತ್ತೆ ಈ ಅವಧಿಯಲ್ಲಿ ನಿಮಗೆ. ನಿಮ್ಮ ರಾಶಿಯಲ್ಲಿ ಶನಿಯ ಸಂಚಾರದಿಂದ ನೀವು ರಾಜರಾಗುವ ಸಮಯವಿದು ಅದಕ್ಕೆ ನಿಮ್ಮ ಪರಿಶ್ರಮ ಕೂಡ ಅಷ್ಟೇ ಮುಖ್ಯ. ಈ ಐದು ವರ್ಷದಲ್ಲಿ ಶನಿಯ ಪೂರ್ಣ ಕೃಪೆಯಿಂದ ನೆಮ್ಮದಿ ದೊರೆಯಲಿದೆ. ಇಷ್ಟು ದಿನ ಇದ್ದ ಏರಿಳಿತ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದರೆ ಅದು ಏಕಾಏಕಿ ಸಾಧ್ಯ ಇಲ್ಲ. ಅದು ಫಲ ಕೊಡಲು ಸಮಯಬೇಕು. ನನ್ನಿಂದ ಏನೂ ಆಗಲ್ಲ ಅಂತ ಹೆದರಿಕೆ ಅಂಜಿಕೆಯಿಂದ ಕೂತರೆ ಇದ್ದಲ್ಲೇ ಇರಬೇಕು ಅದಕ್ಕಾಗಿ ನೀವು ಹೆದರದೆ ಮುಂದುವರೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಮಕರ ರಾಶಿಯಡಿಯಲ್ಲಿ ಜನಿಸಿದವರು ವೃತ್ತಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಅವರಿಗೆ ಏಣಿಯ ಕೆಳ ಹಂತದಿಂದ ಮೇಲಕ್ಕೆ ಏರಬೇಕೆನ್ನುವ ಗುರಿ ಇರುತ್ತದೆ. ಒಮ್ಮೆ ಯಶಸ್ಸಿನ ಏಣಿಯನ್ನು ಹತ್ತಲಾರಂಭಿಸಿದರೆ ಹಿಂತಿರುಗಿ ನೋಡುವುದು ವಿರಳ. ಅಗತ್ಯವಿರುವಷ್ಟು ಶ್ರಮಿಸುತ್ತಾರೆ.

ವಾಸ್ತವವಾಗಿ ತಮ್ಮ ಗುರಿಗಳನ್ನು ಸಾಧಿಸಲು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಹಾಗೂ ಹೆಚ್ಚು ತೃಪ್ತರಾಗುತ್ತಾರೆ ಕೂಡಾ. ತಮ್ಮ ಸಮಯ ಹಾಗೂ ಹಣವನ್ನು ಹೇಗೆ ಬಳಸಬೇಕೆಂದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇವರ ವಿಶ್ಲೇಷಣಾತ್ಮಕ ಮನಸ್ಸು ಮತ್ತು ನಿರ್ವಹಣಾ ಕೌಶಲ್ಯದಿಂದಾಗಿ ಹಣಕಾಸು, ನಿರ್ವಹಣೆ, ಬ್ಯಾಂಕಿಂಗ್‌, ಕಾನೂನು ಮತ್ತು ಆಡಳಿತವು ವೃತ್ತಿಜೀವನಕ್ಕೆ ಸೂಕ್ತವಾಗಿದೆ. ವಿಜ್ಞಾನ ಮತ್ತು ಔಷಧ ಕ್ಷೇತ್ರದಲ್ಲಿ ಉಜ್ವಲ ವೃತ್ತಿಜೀವನವನ್ನು ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸೃಜನಶೀಲ ಕ್ಷೇತ್ರಗಳಾದ ಮಾಧ್ಯಮ, ಜಾಹೀರಾತು, ಪ್ರೊಡಕ್ಷನ್ಸ್ ಮತ್ತು ಆರ್ಟ್ಸ್‌ ಇವರ ವ್ಯಕ್ತಿತ್ವಕ್ಕೆ ಸರಿಹೊಂದುತ್ತವೆ. ಒಟ್ಟಾರೆ ನಿಮ್ಮ ಮುಂದಿನ ದಿನಗಳ ಬಗ್ಗೆ ವೈಯಕ್ತಿಕವಾಗಿ ತಿಳಿದುಕೊಳ್ಳಲು ಉತ್ತಮ ಪಂಡಿತರ ಬಳಿ ಜಾತಕ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!