ಕರ್ನಾಟಕ ರಾಜ್ಯದ ರೈತರಿಗೆ ಕೃಷಿಗೆ ಸಹಾಯವಾಗಲೆಂದು ಅನೇಕ ಕೃಷಿ ಸಂಬಂಧಿತ ಉಪಕರಣಗಳು ಸಬ್ಸಿಡಿ ರೂಪದಲ್ಲಿ ಸಿಗುತ್ತವೆ. ಅವುಗಳಲ್ಲಿ ಟ್ರಾಕ್ಟರ್, ಟಿಲ್ಲರ್ ಪೈಪ್ ಗಳು ಮತ್ತು ಸ್ಪ್ರಿಂಕ್ಲರ್ ಗಳು ಮುಂತಾದವು ಬಹಳ ಕಡಿಮೆ ಹಣದಲ್ಲಿ ಸಿಗುತ್ತವೆ ಎಂದು ಹೇಳಬಹುದು.
ಕಳೆದ ಎರಡ್ಮೂರು ವರ್ಷಗಳಿಂದ ತಾಲೂಕಿನಲ್ಲಿ ಕೊಳವೆಬಾವಿ, ಕೃಷಿ ಹೊಂಡಗಳು ತಾಲೂಕಿನಲ್ಲಿ ಹೆಚ್ಚಾಗಿದ್ದು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚಾಗಿದ್ದರಿಂದ ರೈತರು ಹನಿ ನೀರಾವರಿಗೆ ಆಸಕ್ತಿ ವಹಿಸಿ, ಸ್ಟ್ರಿಂಕ್ಲರ್ ಪೈಪ್ ಮೊರೆ ಹೋಗುತ್ತಿದ್ದಾರೆ.
ಕೃಷಿ ಹೊಂಡದ ನೀರನ್ನು ರೈತರು ತುಂತುರು ನೀರಾವರಿ ಮೂಲಕ ಜಮೀನಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಸ್ಟ್ರಿಂಕ್ಲರ್ ಪೈಪ್ ಬಳಕೆಯಿಂದ ಇಳುವರಿ ಹೆಚ್ಚಳ, ನೀರು ಉಳಿತಾಯ ಹಾಗೂ ಶ್ರಮ ಕಡಿಮೆಯಾಗಲಿದೆ. ಹಾಗಾಗಿ ಸ್ಟ್ರಿಂಕ್ಲರ್ ಪೈಪ್‌ಗೆ ಬಾರಿ ಬೇಡಿಕೆ ಬಂದಿದೆ. ಬೇಸಿಗೆಯಲ್ಲಿ ಹರಿ ಮೂಲಕ ನೀರು ಹರಿಸುವುದರಿಂದ ನೀರು ಸಾಕಾಗುವುದಿಲ್ಲ. ಅದೇ ನೀರನ್ನು ಸ್ಟ್ರಿಂಕರ್ ಪೈಪ್ ಮೂಲಕ ತುಂತುರು ಪದ್ಧತಿಯಲ್ಲಿ ಹರಿಸುವುದರಿಂದ ನೀರು ಉಳಿತಾಯವಾಗಿ ಇಳುವರಿ ಚೆನ್ನಾಗಿ ಬರುತ್ತದೆ. ರೈತರ ಶ್ರಮವೂ ಕಡಿಮೆಯಾಗುತ್ತದೆ.
ಅಲ್ಪ-ಸ್ವಲ್ಪ ನೀರಾವರಿ ಮೂಲಕ ಬಯಲು ಸೀಮೆಯ ರೈತರು ಹೆಚ್ಚಾಗಿ ತರಕಾರಿ, ಆಹಾರ ಬೆಳೆ ಬೆಳೆಯುವುದು ವಾಡಿಕೆ. ಕೃಷಿ ಭಾಗ್ಯ ಯೋಜನೆಯಡಿ ಫಲಾನುಭವಿಗಳು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ನೀರಾವರಿ ಅವಲಂಬಿತ ಅನ್ನದಾತರು ಕಡಲೆ, ಜೋಳ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳನ್ನು ಬೆಳೆದಿದ್ದು, ಬೆಳೆಗೆ ಮಿತವಾಗಿ ನೀರು ಬಳಸಲು ವಿನೂತನ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಶೇ.80ರ ಸಬ್ಸಿಡಿಯಲ್ಲಿ ಪೈಪ್ ಸೆಟ್ ಲಭಿಸುತ್ತಿದ್ದು, 2 ಇಂಚಿನ ಸ್ಟ್ರಿಂಕ್ಲರ್‌ಗೆ 1,932 ರೂ., 2.5 ಇಂಚಿನ ಪೈಪ್‌ಗೆ 2,070 ರೂ. ರೈತರು ಪಾವತಿಸಬೇಕಾಗಿದೆ.
ಕೆಲವು ಉಪಕರಣಗಳನ್ನು ನೀವು ಶೇ.20 ರಷ್ಟು ವಂತಿಗೆ ಕಟ್ಟಿದರೆ ಉಳಿದ ಶೇ. 80 ರಷ್ಟು ಸರಕಾರವೇ ಭರಿಸಲಿದೆ. ಕೃಷಿ ಇಲಾಖೆಯಿಂದ ದೊರೆಯುವ ಪೈಪ್ ಮತ್ತು ಸ್ಪ್ರಿಂಕ್ಲೇರ್ ಗಳನ್ನ ಸಬ್ಸಿಡಿ ರೂಪದಲ್ಲಿ ಪಡೆಯಲು ಬೇಕಾಗುವ ದಾಖಲೆಗಳು ಆಧಾರ್ ಕಾರ್ಡ್, ಮುಚ್ಚಳಿಕೆ ಪತ್ರ, ನೀರು ಬಳಕೆ ಪ್ರಮಾಣ ಪತ್ರ, ಪಹಣಿ, ರೈತ ಸಂಖ್ಯೆ , ಬ್ಯಾಂಕ್ ಪಾಸ್ ಬುಕ್.
ಈ ಮೇಲೆ ಉಲ್ಲೇಖಿಸಿದ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ತಾವು ಕೊಟ್ಟಿರುವ ಬಗ್ಗೆ ರಶೀದಿ ಪಡೆಯಬೇಕು. ಒಮ್ಮೆ ಈ ಸೌಲಭ್ಯ ಪಡೆದರೆ 5 ವರ್ಷ ಈ ಸೌಲಭ್ಯ ಮತ್ತೆ ಸಿಗುವುದಿಲ್ಲ. 30 ಜೊತೆ ಪೈಪ್ ಮತ್ತು 5 ಜೊತೆ ಸ್ಪ್ರಿಂಕ್ಲರ್ಸ್ ಇರುತ್ತದೆ. ಇದು ಸಣ್ಣ ರೈತರಿಗೆ ನೀಡುವ ಪೂರ್ಣ ಪ್ರಮಾಣದ ಘಟಕವಾಗಿದೆ.