ರಾಕುಲ್ಪ್ರೀತ್ ಸಿಂಗ್ ಅವರು ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರು ನೋಡಲು ಸುಂದರವಾಗಿದ್ದು ಪಿಟ್ ನೆಸ್ ಕಾಪಾಡಿಕೊಂಡಿದ್ದಾರೆ. ಅವರ ಪಿಟ್ ನೆಸ್ ಗುಟ್ಟನ್ನು ಈ ಲೇಖನದಲ್ಲಿ ನೋಡೋಣ.
ರಾಕುಲ್ಪ್ರೀತ್ ಸಿಂಗ್ ಅವರು ಚಟಾಕು ಹುಡುಗಿ ಎಂದೆ ಖ್ಯಾತಿ ಪಡೆದಿದ್ದಾರೆ. ಇನ್ ಸ್ಟಾಗ್ರಾಮ್ನಲ್ಲಿ 80 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರಿಗೆ ರಾಕುಲ್ ಹಾಕುವ ಫಿಟ್ನೆಸ್ ಫೋಟೋಗಳ ಮೇಲೆ ಕ್ರೇಜ್. ತಾನು ಹೇಗೆ ಆ ಪರಿ ಫಿಟ್ನೆಸ್ ಮೆಂಟೇನ್ ಮಾಡಿದ್ದೀನಿ ಎನ್ನುವುದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರು ಜೀರ್ಣಆಗುವ ಆಹಾರವನ್ನು ಮಾತ್ರ ತಿಂತಿದ್ದೆ ಎಂದು ಹೇಳುತ್ತಾ ನಿಟ್ಟುಸಿರು ಬಿಡುತ್ತಾರೆ. ಒಂದೊಂದು ಸಲ ಡಯಟ್ ಚೀಟ್ ಮಾಡಿ ಜಂಕ್ಫುಡ್, ಸ್ವೀಟ್ ತಿಂದರೆ ತೂಕ ಏರಿಬಿಡುತ್ತದೆ. ಮತ್ತೆ ಇಳಿಸಲಿಕ್ಕೆ ಇನ್ನಿಲ್ಲದ ಪಾಡು ಪಡಬೇಕು ಎಂದು ಹೇಳಿಕೊಂಡಿದ್ದಾರೆ.
ರಾಕುಲ್ ಬೆಳಗ್ಗೆ ಎದ್ದು 2 ಗ್ಲಾಸ್ ಬಿಸಿನೀರು, ಆಮೇಲೆ ತುಪ್ಪದ ಕಾಫಿ ಕುಡೀತಾರೆ. ಬ್ಲಾಕ್ ಕಾಫಿಗೆ 3 ಗ್ರಾಮ್ ತುಪ್ಪ ಹಾಕಿ ಕುಡಿಯುವುದನ್ನು ತುಪ್ಪದ ಕಾಫಿ ಎನ್ನುತ್ತಾರೆ. ಇದು ಶಕ್ತಿಗೆ, ಜೀರ್ಣಕ್ರಿಯೆಗೆ ಹಾಗೂ ಮೈಂಡ್ಗೆ ಬಹಳ ಒಳ್ಳೆಯದು. ಮೊಟ್ಟೆ, ಜೋಳದ ರೊಟ್ಟಿ ಉಪಹಾರ, ಮಧ್ಯಾಹ್ನಕ್ಕೆ ಬ್ರೌನ್ ರೈಸ್, ಚಿಕನ್ ಇತ್ಯಾದಿ ಅವರ ದಿನನಿತ್ಯದ ಆಹಾರದಲ್ಲಿ ಇರುತ್ತದೆ. ಅವರು ಸಂಜೆ 5 ಗಂಟೆ ಮೇಲೆ ಯಾವುದೆ ಕಾರಣಕ್ಕೂ ಕಾರ್ಬೊಹೈಡ್ರೇಟ್ ತಿನಿಸು ತಿನ್ನುವುದಿಲ್ಲ. ರಾಕುಲ್ ಅವರು ಸುಂದರವಾಗಿ ತಮ್ಮ ಪಿಟ್ ನೆಸ್ ಕಾಪಾಡಿಕೊಳ್ಳಲು ಪ್ರತಿದಿನ ಕ್ರಮಬದ್ಧ ಆಹಾರವನ್ನು ಮಾತ್ರ ಸೇವಿಸುತ್ತಾರೆ.
ರಾಕುಲ್ಪ್ರೀತ್ ಸಿಂಗ್ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರು ಅಭಿಮಾನಿಗಳೊಂದಿಗೆ ತಮ್ಮ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ ಜೊತೆಗೆ ದಿನನಿತ್ಯ ಪಿಟ್ ನೆಸ್ ಕಾಪಾಡಲು ತಾವು ಸೇವಿಸುವ ಆಹಾರ ಪದ್ಧತಿಯ ಬಗ್ಗೆಯೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರು ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಅನುಸರಿಸುವುದರಿಂದ ತಮ್ಮ ಪಿಟ್ ನೆಸ್ ಕಾಪಾಡಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಅವರ ಅಭಿಮಾನಿಗಳಿಗೆ ತಿಳಿಸಿ ಜೊತೆಗೆ ನೀವು ಕೂಡ ನಿಮ್ಮ ಪಿಟ್ ನೆಸ್ ಕಾಪಾಡಿಕೊಳ್ಳಿ.