ದ್ವಾದಶ ರಾಶಿಚಕ್ರಗಳಲ್ಲಿ ಮೊದಲ ರಾಶಿಯೇ ಮೇಷ ರಾಶಿ. ಉತ್ಸಾಹ, ಭಾವೋದ್ರೇಕ ಮತ್ತು ಹುಮ್ಮಸ್ಸು ಈ ರಾಶಿಯನ್ನು ಪ್ರತಿನಿಧಿಸುತ್ತದೆ. ಬೆಂಕಿಯ ಚಿಹ್ನೆಯನ್ನು ಹೊಂದಿರುವ ಈ ರಾಶಿಯನ್ನು ಮಂಗಳನು ಆಳುವನು. ಈ ರಾಶಿಯಡಿಯಲ್ಲಿ ಜನಿಸಿದವರು ಜೀವನದ ಎಲ್ಲಾ ಆಯಾಮದಲ್ಲೂ ತಾವೇ ಮೊದಲ ಸ್ಥಾನದಲ್ಲಿ ಇರುತ್ತೇವೆ ಎಂದು ಭಾವಿಸುತ್ತಾರೆ. ಎಂತಹ ಸಂಗತಿಗಳಲ್ಲಾದರೂ ತಮ್ಮದೊಂದು ಸ್ಥಾನವನ್ನು ಮಾಡಿಕೊಳ್ಳಲು ಸಾಕಷ್ಟು ಉತ್ಸಾಹವನ್ನು ತೋರುವರು.

ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ರಾಶಿಯವರು ನೋಡಲು ಆಕರ್ಷಕವಾಗಿರುವುದಲ್ಲದೆ, ಬಲಶಾಲಿಗಳಾಗಿರುತ್ತಾರೆ. ನೇತೃತ್ವದ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ಯಾವುದೇ ವಿಷಯವನ್ನು ಸರಿಯಾಗಿ ಯೋಚಿಸಿ ದೃಢ ನಿಶ್ಚಯದಿಂದ ನಿರ್ಣಯ ತೆಗೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ. ಹಾಗಾಗಿ ಈ ರಾಶಿಯವರ ವ್ಯಕ್ತಿತ್ವಕ್ಕೆ ಹಲವರು ಆಕರ್ಷಿತರಾಗುತ್ತಾರೆ. ಸ್ವತಂತ್ರ

ಸ್ವಭಾವದ ಈ ರಾಶಿಯವರು ಸಂಗಾತಿಯನ್ನು ತಾವೇ ಆಯ್ಕೆಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ಇವರ ಅದೃಷ್ಟವೂ ಸಾಥ್ ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ರಾಶಿಯವರ ಸ್ವಭಾವದಿಂದ ವಿವಾಹವಾದ ಮೊದಲು ಹೊಂದಾಣಿಕೆಯ ವಿಚಾರದಲ್ಲಿ ಕಷ್ಟವಾದರೂ ನಂತರ ಎಲ್ಲವೂ ಸರಿಯಾಗುತ್ತದೆ. ಮೊದಲ ರಾಶಿಚಕ್ರ ಚಿಹ್ನೆಯಾಗಿರುವುದರಿಂದ, ಮೇಷ ರಾಶಿಯು ಅತ್ಯಂತ ಸ್ವತಂತ್ರ ರಾಶಿಚಕ್ರಗಳಲ್ಲಿ ಒಂದಾಗಿದೆ. ಒಂದೆಡೆ, ಅವರು ತಮ್ಮ ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಆದರೆ ಮತ್ತೊಂದೆಡೆ, ಅವರು ನಿಯಂತ್ರಣದಲ್ಲಿರಲು ಇಷ್ಟಪಡುತ್ತಾರೆ. ಸಂಬಂಧದಲ್ಲಿ ಮೇಷ ರಾಶಿಯು ಸಾಕಷ್ಟು ರೋಮ್ಯಾಂಟಿಕ್ ಆಗಿರಬಹುದು. ಅವರು ತಮ್ಮ ಸಂಗಾತಿಯನ್ನು ನಿರಾಸೆಗೊಳಿಸಲು ಮತ್ತು ಅವರ ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳಲು ಬಲವಾದ ಬಂಧ ಮತ್ತು ವಿಶ್ವಾಸಾರ್ಹ ಸಂಬಂಧವನ್ನು ನಿರ್ಮಿಸುವ ಅಗತ್ಯವಿದೆ.

ಮೇಷ ರಾಶಿಯು ಸ್ವಯಂ ಚಿಹ್ನೆಯನ್ನು ಪ್ರತಿನಿಧಿಸುತ್ತದೆ ಮತ್ತು ಅವರು ತಮ್ಮ ಸಂಬಂಧಗಳಲ್ಲಿಯೂ ಈ ಲಕ್ಷಣವನ್ನು ಹೊಂದಿದ್ದಾರೆ. ಅವರು ತಮ್ಮ ಸಂಗಾತಿಗೆ ಪೂರಕವಾಗಿರಲು ಬಯಸುತ್ತಾರೆ ಹಾಗೆಯೇ ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತಾರೆ. ಮೇಷ ರಾಶಿಯವರು ಧನಸ್ಸು ಮತ್ತು ಕುಂಭ ರಾಶಿಯ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೇಷ ರಾಶಿಗೆ ಸೇರಿದ ಜನರು ಮಹತ್ವಾಕಾಂಕ್ಷೆಯವರು, ದೃಢಸಂಕಲ್ಪದವರು ಮತ್ತು ಚತುರರು. ಇವರು ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಮತ್ತು ಅವರ ಕನಸುಗಳನ್ನು ಈಡೇರಿಸುವ, ತಮ್ಮ ಗುರಿಗಳನ್ನು ಸಾಧಿಸುವ ಸಂದರ್ಭದಲ್ಲಿ ಯಾರೂ ಅವರನ್ನು ತಡೆಯಲಾಗದು. ಇವರು ರಿಸ್ಕ್ ತೆಗೆದುಕೊಳ್ಳುವವರು ಮತ್ತು ಸುರಕ್ಷಿತವಾಗಿ ಆಟವಾಡುವುದನ್ನು ನಂಬುವುದಿಲ್ಲ. ಮೇಷರಾಶಿಯಲ್ಲಿ ಜನಿಸಿದವರು ಯಾವುದಕ್ಕೂ ಹೆದರುವುದಿಲ್ಲ, ಧೈರ್ಯಶಾಲಿಗಳು. ಮೇಷ ರಾಶಿಯ ಮಂದಿ ಮೋಸ ಮಾಡುವುದು ಅಪರೂಪ. ಒಮ್ಮೆ ಪ್ರೀತಿಯನ್ನು ಕಂಡುಕೊಂಡರೆ ಅಂತರಂಗದಿಂದ ಪ್ರೀತಿಗೆ ಬದ್ಧರಾಗಿರುತ್ತಾರೆ. ನಿಮ್ಮ ಕಡೆಯಿಂದಲೂ ಸಿಗುವ ಪ್ರೀತಿ, ಬೆಂಬಲ ಮತ್ತು ಬದ್ಧತೆಯೇ ಮೇಷ ರಾಶಿಯವರು ನಿಮ್ಮತ್ತ ತಿರುಗುವಂತೆ ಮಾಡುತ್ತದೆ. ಬೆನ್ನಿನ ಹಿಂದೆ ಹೇಳುವುದಕ್ಕಿಂತ ಹೆಚ್ಚಾಗಿ ಇವರು ನೇರವಾಗಿ ಹೇಳಲು ಪ್ರಯತ್ನಿಸುತ್ತಾರೆ.

ಮೇಷ ರಾಶಿಯವರಲ್ಲಿ ಹೆಚ್ಚಿನವರು ಪ್ರೀತಿಯ ವಿಷಯದಲ್ಲಿ ಭಾಗಶಃ ಯಶಸ್ಸನ್ನು ಮಾತ್ರ ಆನಂದಿಸಬಹುದು. ಈ ರಾಶಿಯ ಸ್ತ್ರೀಯರು ಸಾಮಾನ್ಯ ಹಾಗೂ ನಿಯಮಿತ ಉಡುಗೊರೆಗಳಿಂದ ಆನಂದ ಹೊಂದಲು ಸಾಧ್ಯವಿಲ್ಲ. ಮೇಷ ರಾಶಿಯ ಪುರುಷರು ಯಾವಾಗಲೂ ತಮ್ಮ ಪತ್ನಿಯರು ಸಕ್ರಿಯ ಮತ್ತು ಆಕರ್ಷಕವಾಗಿರಬೇಕು ಎಂದು ಬಯಸುತ್ತಾರೆ. ಮೇಷ ರಾಶಿಯವರಿಗೆ ಪ್ರೀತಿಯಲ್ಲಿ ಸಾಕಷ್ಟು ಭರವಸೆ ಬೇಕು. ಗಂಡ ಮತ್ತು ಹೆಂಡತಿಯ ವೈಯಕ್ತಿಕ ಸಂಬಂಧಗಳ ವಿಷಯದಲ್ಲಿ ಮೇಷ ರಾಶಿಯ ಜನರು ತುಂಬಾ ಆದರ್ಶಪ್ರಾಯರಾಗಿದ್ದಾರೆ, ಈ ಕಾರಣದಿಂದಾಗಿ ಅವರ ಸಂಬಂಧದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಮೇಷ ರಾಶಿಯವರನ್ನು ಸಮಾಜದಲ್ಲಿ ಗೌರವದಿಂದ ಕಾಣಲಾಗುತ್ತದೆ.

ಶ್ರದ್ಧಾಪೂರ್ವಕವಾಗಿ ಹೇಳುವುದಾದರೆ ಇವರು ಪ್ರೀತಿಯ, ಜವಾಬ್ದಾರಿಯುತ, ಆದರೆ ಕಟ್ಟುನಿಟ್ಟಾದ ಪರಿಪೂರ್ಣ ಪೋಷಕರಾಗಿರುತ್ತಾರೆ. ತಮ್ಮ ಮಕ್ಕಳನ್ನು ಉತ್ತಮ ನಡತೆ, ನೈತಿಕ ಮೌಲ್ಯಗಳು ಹಾಗೂ ನಂಬಿಕೆಗಳೊಂದಿಗೆ ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸುತ್ತಾರೆ. ಕುಟುಂಬಕ್ಕೆ ಉತ್ತಮ ಜೀವನವನ್ನು ಒದಗಿಸಲು ತಮ್ಮ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತಾರೆ.

ಒಟ್ಟಾರೆ ಮೇಷ ರಾಶಿಯವರ ದಾಂಪತ್ಯ ಜೀವನ ಗಟ್ಟಿಯಾಗಿರುತ್ತದೆ. ಪ್ರೀತಿಸಿ ಮದುವೆಯಾದವರಲ್ಲಿ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ಆದಾಗ್ಯೂ ಆಗಾಗ ಸಣ್ಣ ಪುಟ್ಟ ಕೌಟುಂಬಿಕ ಕಲಹಗಳು ಕಂಡುಬಂದಾಗ ತಮ್ಮ ಹೊಂದಾಣಿಕೆ ಗುಣದಿಂದ ಸುಖಕರ ದಾಂಪತ್ಯ ಜೀವನ ನಿಮ್ಮದಾಗತ್ತದೆ. ಒಂದು ವೇಳೆ ಇಂತಹ ಯಾವುದೇ ಕಲಹಗಳು ಕಂಡುಬಂದಾಗ ಮೇಷ ರಾಶಿಯವರು ಅಥವಾ ಅವರನ್ನ ಮದುವೆ ಆದವರು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿದರೆ ವೈವಾಹಿಕ ಜೀವನದಲ್ಲೀ ಮೂಡುವ ಕೆಲವು ಕಿರಿಕಿರಿಗಳಿಂದ ಮುಕ್ತಿ ಪಡೆಯಬಹುದಾಗಿದೆ.ಜೊತೆಗೆ ದಾಂಪತ್ಯದಲ್ಲಿ ಅತಿ ಹೆಚ್ಚಿನ ಸಮಸ್ಯೆಗಳಿದ್ದರೆ ಉತ್ತಮ ಜೋತಿಷ್ಯರ ಬಳಿ ಪತಿ ಪತ್ನಿ ಇಬ್ಬರ ಜಾತಕ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!