ಈ ನಾಲ್ಕು ರಾಶಿಯವರು ನಾವು ಆಯ್ತು ನಮ್ಮ ಕೆಲಸ ಆಯ್ತು ಅಂತ ಏಕಾಂತವಾಗಿ ಇರ್ತಾರೆ

0 6,193

ಕೆಲವರು ಎಲ್ಲರೊಂದಿಗೂ ಸ್ನೇಹದಿಂದ ಮಾತನಾಡಿಕೊಂಡು ಜೊತೆಯಲ್ಲಿ ಇರುತ್ತಾರೆ. ಕೆಲವರು ಮಾತ್ರ ಹಾಗಲ್ಲ ಏಕಾಂಗಿಯಾಗಿ ಇರಲು ಇಷ್ಟಪಡುತ್ತಾರೆ. ಅವರನ್ನು ಬೇರೆಯವರು ಇಷ್ಟಪಡುತ್ತಾರೆ ಆದರೆ ಅವರು ಮಾತ್ರ ಯಾವಾಗಲೂ ಒಬ್ಬರೆ ಇರಲು ಇಷ್ಟಪಡುತ್ತಾರೆ. ಈ ರೀತಿಯ ಸ್ವಭಾವ ಅವರು ಜನಿಸಿದ ರಾಶಿಯ ಆಧಾರದಲ್ಲಿ ಇರುತ್ತದೆ. ಏಕಾಂತವಾಗಿರುವುದನ್ನು ಇಷ್ಟಪಡುವ ರಾಶಿ ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ವ್ಯಕ್ತಿಯ ಸ್ವಭಾವ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ, ಒಬ್ಬರು ಇದ್ದಹಾಗೆ ಇನ್ನೊಬ್ಬರು ಇರುವುದಿಲ್ಲ, ಎಲ್ಲದರಲ್ಲಿಯೂ ಕೂಡ ಭಿನ್ನತೆ ಇರುತ್ತದೆ. ಇದಕ್ಕೆ ಕಾರಣ ಗ್ರಹಗತಿಗಳು, ರಾಶಿಗಳು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು, ರಾಶಿಗಳು, ನಕ್ಷತ್ರಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಕ್ತಿಗಳು ವಿಭಿನ್ನವಾದಂತಹ ವ್ಯಕ್ತಿತ್ವವನ್ನು, ಗುಣ ಸ್ವಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅದೆ ರೀತಿಯಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 4 ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೂಡ ಇತರರಿಗಿಂತ ಭಿನ್ನವಾದಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.

ಈ ರಾಶಿಯವರು ಯಾವಾಗಲೂ ಏಕಾಂತವಾಗಿ ಇರಲು ಇಷ್ಟಪಡುತ್ತಾರೆ, ಇವರು ಏಕಾಂತದಲ್ಲಿ ಹೆಚ್ಚು ಸಂತೋಷವನ್ನು ಪಡುತ್ತಾರೆ ಎಂದು ಹೇಳಲಾಗುತ್ತದೆ, ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ 4 ರಾಶಿಯ ವ್ಯಕ್ತಿಗಳು ಹೆಚ್ಚು ಏಕಾಂತವಾಗಿ ಇರಲು ಇಷ್ಟಪಡುತ್ತಾರೆ ಇವರ ಗುಣ ಯಾವ ರೀತಿ ಇರುತ್ತದೆ ಎಂದು ನೋಡುವುದಾದರೆ. ಮೊದಲನೆಯದಾಗಿ ಸಿಂಹರಾಶಿ, ಸಿಂಹ ರಾಶಿಯವರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂದರೆ ಇವರು ಜನರಗುಂಪಿನಲ್ಲಿ ಇದ್ದರೂ ಕೂಡ ಇವರು ಎಲ್ಲರನ್ನು ತನ್ನತ್ತ ಆಕರ್ಷಣೆಯನ್ನು ಮಾಡುವಂತಹ ಗುಣ ಇರುತ್ತದೆ ಆದರೂ ಕೂಡ ಇವರು ಸ್ವಾಭಾವಿಕವಾಗಿ ಹೆಚ್ಚು ಏಕಾಂತದಲ್ಲಿರಲು ಇಷ್ಟಪಡುತ್ತಾರೆ, ಇವರು ಏಕಾಂತವಾಗಿ ಇದ್ದಾಗಲೆ ಜೀವನದ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಾರೆ, ಕೆಲಸ ಕಾರ್ಯಗಳ ಬಗ್ಗೆ ಯೋಚನೆ ಮಾಡುತ್ತಾರೆ, ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಏಕಾಂತವೆ ಒಳ್ಳೆಯದು ಎಂದು ಬಯಸುತ್ತಾರೆ. ಇವರ ಒಂದು ಉತ್ತಮ ನಿರ್ಧಾರಕ್ಕೆ ಏಕಾಂತವು ಕೂಡ ಕಾರಣವಾಗಿರುತ್ತದೆ.

ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೂಡ ಏಕಾಂತವಾಗಿ ಇರಲು ಇಷ್ಟಪಡುತ್ತಾರೆ. ತನಗೆ ತಾನು ಇದ್ದರೆ ಸಾಕು ಎನ್ನುವ ಮನೋಭಾವನೆ ಇರುತ್ತದೆ, ಇವರು ಹೆಚ್ಚಾಗಿ ಯಾರ ಸ್ನೇಹವನ್ನು ಕೂಡ ಬಯಸುವುದಿಲ್ಲ, ಆದರೆ ಜೀವನದ ಸಂಗಾತಿ ಸಿಕ್ಕಮೇಲೆ ಇವರಿಬ್ಬರ ಏಕಾಂತವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಸಂಬಂಧಿಕರೊಡನೆ ಕೂಡ ಇವರು ಮಾತನಾಡಲು ಇಷ್ಟಪಡುವುದಿಲ್ಲ ಹೆಚ್ಚು ಏಕಾಂತವಾಗಿ ವ್ಯವಹಾರ ಮಾಡಲು ಬಯಸುತ್ತಾರೆ. ಇನ್ನು ಮೂರನೆಯದಾಗಿ ಕಟಕ ರಾಶಿ, ಕಟಕ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೂಡಾ ಏಕಾಂತವನ್ನು ಹೆಚ್ಚು ಇಷ್ಟಪಡುತ್ತಾರೆ, ಇವರು ಓಡಾಡುವಾಗಲು ಕೂಡ ಒಬ್ಬರೆ ಓಡಾಡಲು ಸಿದ್ದರಾಗಿರುತ್ತಾರೆ, ಅದೆ ರೀತಿಯಾಗಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಒಬ್ಬರೆ ಹೋಗಲು ಬಯಸುತ್ತಾರೆ, ಏಕಾಂತ ಇವರಿಗೆ ಹೆಚ್ಚಿನ ಖುಷಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ತುಲಾ ರಾಶಿ, ತುಲಾ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಕೂಡ ಏಕಾಂತವನ್ನು ಬಹಳ ಇಷ್ಟಪಡುತ್ತಾರೆ, ಇವರು ಒಬ್ಬರೆ ಟ್ರಿಕ್ಕಿಂಗ್ ಹೋಗಲು ಇಷ್ಟಪಡುತ್ತಾರೆ ಯಾವುದೇ ಡಿಸ್ಟರ್ಬೆನ್ಸ್ ಇವರಿಗೆ ಇಷ್ಟವಾಗುವುದಿಲ್ಲ. ಇವರಿಗೆ ಇವರೆ ಸಾಟಿ ಎಂಬಂತೆ ಇರುತ್ತಾರೆ. ನಿಮ್ಮ ರಾಶಿ ಯಾವುದು ಎಂಬುದನ್ನು ನೋಡಿಕೊಳ್ಳಿ, ಜೊತೆಗೆ ನಿಮ್ಮ ಪರಿಚಯ, ಸಂಬಂಧಿಕರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.

Leave A Reply

Your email address will not be published.