ದ್ವಾದಶ ರಾಶಿಚಕ್ರಗಳಲ್ಲಿ ಹನ್ನೊಂದನೇ ರಾಶಿ ಕುಂಭ ರಾಶಿ. ಎಲ್ಲದರ ವಿಶಿಷ್ಟತೆಯ ಸಂಕೇತವೇ ಈ ಕುಂಭ ರಾಶಿ. ಮಾನವೀಯತೆಯ ನಿಜವಾದ ಅರ್ಥವನ್ನು ಪ್ರತಿಬಿಂಬಿಸುವುದೇ ಈ ರಾಶಿ. ಇವರು ಆಧುನಿಕತೆ, ಸ್ವಾತಂತ್ರ್ಯವನ್ನು ಪ್ರೀತಿಸುವವರು.ಈ ಕುಂಭ ರಾಶಿಯವರು ಒಳ್ಳೆಯ ಹಾಸ್ಯಗಾರರು ಮತ್ತು ಸ್ವಭಾವತಃ ಹರ್ಷಚಿತ್ತದವರಾದ ಇವರು ನಿಮ್ಮನ್ನು ಮೋಡಿ ಮಾಡುವುದರಲ್ಲಿ ಯಾವ ಸಂದೇಹವೇ ಇಲ್ಲ.
ಕುಂಭ ರಾಶಿಯವರ ವಾರ್ಷಿಕ ಭವಿಷ್ಯದ ಬಗ್ಗೆ ಗುರೂಜಿ ಎನ್ ಆರ್ ಜ್ಯೋತಿ ಅವರ ಮೂಲಕ ತಿಳಿದು ಕೊಳ್ಳೋಣ ಬನ್ನಿ. ಕುಂಭ ರಾಶಿಯ ಅಧಿಪತಿ ಶನಿ ಆಗಿದ್ದು, ಈ ರಾಶಿಯವರಿಗೆ ಗುರುವಾರ ಶುಭವಾರವಾಗಿದ್ದು,ಹಳದಿ ಬಣ್ಣ ,ಪುಷ್ಪ ರಾಗ ರತ್ನವಾಗಿದ್ದು, ಅದೃಷ್ಟ ಸಂಖ್ಯೆ 12 ಇನ್ನು ಈ ಯುಗಾದಿಯ ಶುಭ ಕೃತ ಸಂವತ್ಸರದಲ್ಲಿ ಕುಂಭ ರಾಶಿ ಅವರಿಗೆ ಈ ವರ್ಷ ಮಿಶ್ರ ಫಲ ಲಭ್ಯ.
ವರ್ಷದ ಆರಂಭದಲ್ಲಿ ಗ್ರಹ ಬದಲಾವಣೆ ಜನ್ಮಸ್ತ್ಯ ಗುರು ಧನಲಾಭವಾಗಿದ್ದು, ಗುರುಬಲ ಪೂರ್ಣ ಪ್ರಭಾವದಲ್ಲಿದೆ.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿ ಉತ್ತಮ ಜನ ಮನ್ನಣೆ ಲಭಿಸುವುದು. ಸಾಮಾಜಿಕ ಸೇವೆ , ಅಧ್ಯಾಪಕ ವೃಂದ ಅವರಿಗೆ ಗೌರವ ಕೀರ್ತಿ ಸನ್ಮಾನ ಲಭಿಸುತ್ತವೆ. ವಿದ್ಯಾರ್ಥಿಗೆ ಉತ್ತಮ ಅವಕಾಶ ಆಗಿದ್ದು ಸಾಧನೆ ಮಾಡಲು ಒಳ್ಳೆ ಸುವರ್ಣ ಅವಕಾಶ. ಶನಿ ಮೇ ತಿಂಗಳಲ್ಲಿ ಜುಲೈ ತನಕ ಮಕರ ರಾಶಿಯಲ್ಲಿ ಉಳಿದು 2023 ಜನವರಿ ಪುನಃ ಕುಂಭ ರಾಶಿ ವಾಪಾಸ್ಸು ಬರುತ್ತಾನೆ. ಇದರಿಂದ ಕುಂಭ ರಾಶಿ ಯವರಿಗೆ ಶನಿ ದೋಷ ಶುರುವಾಗುತ್ತದೆ.
ಕುಂಭ ರಾಶಿ ಜನರು ಅಹಂಕಾರಿ ಇದ್ದು,ಸ್ವಾಭಿಮಾನಿಗಳು ಆಗಿದ್ದು ತಮ್ಮ ಅಹಂಕಾರ ಬುದ್ದಿಯಿಂದ ಜನರಿಂದ ನಿಂದನೆ ಪಡುವ ಪ್ರಸಂಗ ಬರುತ್ತೆ ಅದರಿಂದ ಜನರೊಂದಿಗೆ ಆದಷ್ಟು ಹಿತ ಮಿತ ಆಗಿರಬೇಕು ಇಲ್ಲವಾದಲ್ಲಿ ಜನರ ಅಪಹಾಸ್ಯಕ್ಕೆ ಗುರಿ ಆಗ್ಬೇಕು. ಇನ್ನೂ ಆರೋಗ್ಯ ಆಲಸ್ಯ, ಅಲರ್ಜಿ,ಹೀಗೆ ಸಣ್ಣ ಪುಟ್ಟ ತೊಂದರೆ ಆಗುವುದು. ಸಾಡೆ ಸಾಥ್ ಶನಿ ಪ್ರಭಾವದಿಂದ ಬಹಳಷ್ಟು ತೊಂದರೆ ಪಡಬೇಕಾದ ಸಂದರ್ಭ ಇದೆ ಹಾಗಾಗಿ ಚಿಂತಕರು, ಸಮಾಜ ಸೇವೆಯಲ್ಲಿ ಸೇವೆ ಸಲ್ಲಿಸುವವರು ತೊಂದರೆ ಪಡುವ ಸಂದಿಗ್ಧ ಸ್ಥಿತಿ ಸಾಧ್ಯತೆ ಇದ್ದು ಆದಷ್ಟು ಹೊಟ್ಟೆ ಕಿಚ್ಚಿನ ಜನರಿಂದ ಆದಷ್ಟು ದೂರ ಇದ್ದರೆ ಮಾನಸಿಕ ನೋವಿನಿಂದ ಸ್ವಲ್ಪ ಮುಕ್ತಿ ಹೊಂದಬಹುದು
ಇನ್ನು ಮೇ ತಿಂಗಳಲ್ಲಿ ಕೇತು 3 ಮನೆಗೂ, ರಾಹು 9 ನೇ ಮನೆಯಲ್ಲೂ ಇದ್ದು ಸ್ವಲ್ಪ ಒಳ್ಳೆಯ ಫಲವಿದ್ದು ತಮ್ಮ ಕೆಲಸ ಕಾರ್ಯ ಅಸಡ್ಡೆ ಇಲ್ಲದೆ ಹೋದಲ್ಲಿ ಒಳ್ಳೆಯ ಫಲಿತಂಶ ಪಡೆಯಬಹುದು.ಇನ್ನು ನಮ್ಮ ರೈತ ವ್ಯವಸಾಯ ಒಳ್ಳೆಯ ಬೆಳೆ ಕಾಣಬಹುದು. ಕನ್ನಡಿ ಒಳಗಡೆ ಗಂಟೆ ಹೇಗೆ ನಮ್ಮ ಕೈಗೆ ನಿಲುಕುವ ಸಾಧ್ಯತೆ ಕಮ್ಮಿಯ್ಯೋ ಹಾಗೆ ಕುಂಭ ರಾಶಿ ಅವರು ತಮ್ಮ ಅಹಂ ಪ್ರವೃತ್ತಿಯಿಂದ ಕಷ್ಟ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಇದುಕೆ ಉತ್ತಮ ಪರಿಹಾರ ಎಂದರೆ ಶನಿ ಶಾಂತಿ ಮಾಡಿಸುವುದು, ಮುಖ್ಯವಾಗಿ ತಮ್ಮ ಮನೆ ದೇವರ ಪ್ರಾರ್ಥನೆ ಅಗತ್ಯ. ಹಾಗೆ ಶನಿ ದೇವರ ಸ್ತೋತ್ರವನ್ನು ನಿರಂತರವಾಗಿ ಪಟನೆ ಮಾಡುವುದರಿಂದ ಆದಷ್ಟು ಒಳ್ಳೆಯದಾಗುವುದು..