ನಾವು ನೀವು ತುಂಬಾ ವಿಶೇಷವಾದ ದೇವಾಲಯಗಳನ್ನು ಕಂಡಿದ್ದೇವೆ ಹಾಗೂ ಅವುಗಳ ಬಗ್ಗೆ ಕೇಳಿದ್ದೇವೆ. ನಮ್ಮ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಭಿನ್ನವಾದ ಮತ್ತು ಅಚ್ಚರಿಗೊಳಗಾದ ದೇವಾಲಯಗಳು ಇವೆ. ಆದರೆ ಇಲ್ಲಿ ಒಂದು ದೇವಾಲಯದಲ್ಲಿ ಎಲ್ಲರನ್ನೂ ಅಚ್ಚರಿಪಡಿಸುವಂತಹ ಸಂಗತಿ ಒಂದಿದೆ. ಅದೇ ಶಿವ ಹಾಗೂ ವಿಷ್ಣು ಒಂದೇ ಎಂದು ಹೇಳುವ ಹಾಗೂ ಸಾರುವ ದೇವಾಲಯ ಇದೆ. ಆ ದೇವಾಲಯದ ವಿಶೇಷವೇ ವಿಭಿನ್ನವಾಗಿದೆ ಹಾಗೂ ನೋಡುಗರಿಗೂ , ಕೇಳುಗರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ.
ಹಾಗಾದ್ರೆ ಆ ದೇವಾಲಯದಲ್ಲಿ ಇರುವ ಅಚ್ಚರಿಯ ಸಂಗತಿಯಾದರೂ ಏನಪ್ಪಾ ಅಂದ್ರೆ ಮೂರ್ತಿ ವಿಷ್ಣುವಿನದಾದರೂ ಅದರ ರೂಪ ಮತ್ತು ನೆರಳು ಶಿವನ ಹಾಗೆ ಕಾಣುತ್ತದೆ.ಅಷ್ಟೇ ಅಲ್ಲದೆ ಅದು ಸರೋವರದ ಮಧ್ಯ ಭಾಗದಲ್ಲಿ ತೇಲುತ್ತದೆ. ನಾವು ಹೆಚ್ಚಾಗಿ ಕಂಡಿರುವುದು ಕೂತಿರುವ ಹಾಗೂ ನಿಂತಿರುವ ದೇವರುಗಳನ್ನು ಮಾತ್ರ. ಹಾಗಾದ್ರೆ ಇಂತಹ ವಿಭಿನ್ನವಾದ ವಿಶಿಷ್ಟವಾದ ಸರೋವರದ ಮಧ್ಯಭಾಗದಲ್ಲಿ ತೇಲುವ ದೇವಾಲಯ ಇರುವುದೆಲ್ಲಿ ಅನ್ನೋದನ್ನ ನಮ್ಮ ಈ ಲೇಖನದಲ್ಲಿ ನೋಡೋಣ.
ಈ ವಿಭಿನ್ನವಾದ ವಿಸ್ಮಯಕರವಾದ ಮೂರ್ತಿಯ ದೇವಾಲಯ ಇರುವುದು ನಮ್ಮ ನೆರೆಯ ದೇಶವಾದ ನೇಪಾಳದಲ್ಲಿ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ವಿಶ್ವದಲ್ಲಿ ನೇಪಾಳ ಒಂದೇ ಹಿಂದೂ ದೇಶವೆಂದು ಕರೆಯಲ್ಪಟ್ಟಿದೆ. ಈ ದೇವಾಲಯವನ್ನು ಬುಧನೀಲಕಂಠ ದೇವಾಲಯ ಎಂದು ಕರೆಯುತ್ತಾರೆ. ತೆರೆದ ಪ್ರದೇಶದಲ್ಲಿ ವಿಷ್ಣುವಿನ ವಿಗ್ರಹ ಇರುವ ಈ ದೇವಾಲಯವು ತುಂಬಾ ವಿಶೇಷವಾಗಿದೆ. ಈ ದೇವಾಲಯ ಕಾಟ್ಮಂಡು ಕಣಿವೆಯ ಶಿವಪುರಿಯ ಉತ್ತರಭಾಗದಲ್ಲಿದೆ. ಈ ದೇವಾಲಯದ ಹುಟ್ಟಿನ ಹಿಂದೆ ಒಂದು ರೋಚಕ ಸಂಗತಿ ಅಡಗಿದೆ.
ಅದೇನೆಂದು ನೋಡುವುದಾದರೆ, ಹಲವು ವರ್ಷಗಳ ಹಿಂದೆ ಒಬ್ಬ ರೈತ ಉಳುಮೆ ಮಾಡುವಾಗ ನೇಗಿಲು ಭೂಮಿಗೆ ಸಿಲುಕಿಕೊಂಡಂತಾಗಿ ಅದನ್ನು ತೆಗೆಯಲು ನೋಡಿದಾಗ , ಸಿಲುಕಿಕೊಂಡ ಜಾಗದಲ್ಲಿ ರಕ್ತಸ್ರಾವ ಆಗುತ್ತಿದ್ದದ್ದನ್ನು ಕಂಡ ಅಲ್ಲಿನ ಜನ ಭಯಭೀತರಾಗಿ ಅಗೆದು ನೋಡಲು ಅಲ್ಲಿ ವಿಷ್ಣುವಿನ ಮೂರ್ತಿಯನ್ನು ಹಾಗೂ ಅದರ ಕೆಳಗೆ ಹರಿಯುತ್ತಿದ್ದ ಸಮುದ್ರವನ್ನು ಕಂಡು ಚಕಿತಗೊಂಡಿದ್ದರು. ಹಾಗೆ ಸಿಕ್ಕ ಮೂರ್ತಿಯೇ ಬುದನೀಲಕಂಠ. ಹಾಗೆ ಸಿಕ್ಕ ವಿಗ್ರಹ ಆ ಸರೋವರದಲ್ಲಿ ಮುಳುಗದೆ ತೇಲುತ್ತಿದ್ದದ್ದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿತ್ತು.
ಸರೋವರದ ಮಧ್ಯಭಾಗದಲ್ಲಿ ತೇಲುವ ಈ ವಿಗ್ರಹ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು ವಿಷ್ಣು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿರುವ ಹಾಗೆ ಕಾಣುತ್ತದೆ. ಈ ಮೂರ್ತಿಯೂ 13 ಮೀ ಸರೋವರದಲ್ಲಿ 6 ಮೀ ಉದ್ದವಿದೆ. ಇದಷ್ಟೇ ಅಲ್ಲದೇ ಈ ವಿಗ್ರಹದಲ್ಲಿ ಒಂದು ರಹಸ್ಯ ಕೂಡ ಅಡಗಿದೆ. ಅದೇನೆಂದರೆ, ನೀಲಕಂಠ ಎಂದು ಕರೆಯುವುದು ಶಿವನನ್ನು ,ಆದ್ರೆ ಅಲ್ಲಿರುವುದು ವಿಷ್ಣು ಆದರೂ ಕೂಡ ಅದನ್ನು ಕರೆಯುವುದು ಬುದನೀಲಕಂಠ ಎಂದು ಅದಕ್ಕೆ ಕಾರಣ ಇಲ್ಲಿದೆ.
ಶಿವರಾತ್ರಿಯ ದಿನದಂದು ಈ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಪೂಜಿಸುವ ಸಂದರ್ಭದಲ್ಲಿ ಆ ಸರೋವರದಲ್ಲಿ ಉಂಟಾಗುವ ನೆರಳಿಗು ಕೂಡ ಪೂಜೆ ಸಲ್ಲಿಸಲಾಗುತ್ತದೆ.ಯಾಕೆಂದ್ರೆ ಆ ನೆರಳಿನಲ್ಲಿ ಗೋಚರಿಸುವುದು ಶಿವನ ರೂಪ. ವಿಗ್ರಹ ವಿಷ್ಣುವಿನದಾದರು ಅದರ ನೆರಳು ಹಾಗೂ ರೂಪ ಶಿವನದ್ದು. ಇದೇ ಈ ದೇವಾಲಯದ ವಿಸ್ಮಯಕಾರಿ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ.
ಈ ನೆರಳು ಹೇಗೆ ಗೋಚರಿಸುತ್ತದೆ, ಯಾವ ಕಾರಣದಿಂದ ಹಾಗೆ ಕಾಣಿಸುತ್ತದೆ ಎಂಬುದನ್ನು ಯಾರಿಗೂ ಇಲ್ಲಿಯವರೆಗೂ ಕಂಡು ಹಿಡಿಯಲು ಸಾಧ್ಯವೇ ಆಗಿಲ್ಲ. ವಿಚಿತ್ರವೆಂದರೆ ಈ ವಿಗ್ರಹ ಸಂಪೂರ್ಣವಾಗಿ ತೇಲುತ್ತದೆ. ಪುರಾಣದ ಪ್ರಕಾರ ಹಾಗೂ ಅಲ್ಲಿನ ಪೂಜಾರಿಗಳ ಪ್ರಕಾರ ಆ ವಿಗ್ರಹದ ಕೆಳಗಡೆ ಶಿವನ ಮೂರ್ತಿಯೂ ಇದೆ ಎಂದು ನಂಬಲಾಗಿದೆ ಅಷ್ಟೇ. ಆದ್ರೆ ಅದನ್ನು ಇಲ್ಲಿವರೆಗೂ ಸಾಭೀತು ಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ.