ಜ್ಯೋತಿಷ್ಯಶಾಸ್ತ್ರವನ್ನು ಸಮುದ್ರ ಎನ್ನುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಜನ್ಮ ರಾಶಿ, ನಕ್ಷತ್ರದ ಆಧಾರದ ಮೇಲೆ ಮುಂದಿನ ಜೀವನದ ಬಗ್ಗೆ ಹೇಳಲಾಗುತ್ತದೆ. ಇದರ ಜೊತೆಗೆ ಹೆಸರು ಪ್ರಾರಂಭವಾಗುವ ಅಕ್ಷರದ ಆಧಾರದ ಮೇಲೆ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ ರಾಶಿಚಕ್ರದ ಚಿಹ್ನೆಗಳ ಸಹಾಯದಿಂದ ವ್ಯಕ್ತಿಯ ಭವಿಷ್ಯ ಹೇಗಿರುತ್ತದೆ ಎಂದು ಹೇಳಲಾಗುತ್ತದೆ. ಅದೆ ರೀತಿ ಹೆಸರಿನ ಮೊದಲ ಅಕ್ಷರ ಕೂಡಾ ವ್ಯಕ್ತಿಯ ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಹುಟ್ಟಿದಾಗ ನಮ್ಮ ಜನ್ಮ ನಕ್ಷತ್ರ, ರಾಶಿಯ ಆಧಾರದ ಮೇಲೆ ಬಂದ ಅಕ್ಷರದಿಂದ ಹೆಸರನ್ನು ಇಡಲಾಗುತ್ತದೆ. ಹೆಸರು ವ್ಯಕ್ತಿಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವ ಜನರು ಸಣ್ಣ ವಯಸ್ಸಿನಲ್ಲಿಯೆ ಅಪಾರ ಸಂಪತ್ತನ್ನು ಹೊಂದುತ್ತಾರೆ. 

ಬಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ಬಹಳ ಶ್ರಮಜೀವಿಗಳು ಮತ್ತು ಅದೃಷ್ಟವಂತರಾಗಿರುತ್ತಾರೆ ಮಾತ್ರವಲ್ಲದೆ ಇವರು ಬಹಳ ಬುದ್ಧಿವಂತರು ಕೂಡಾ ಆಗಿರುತ್ತಾರೆ. ಅವರು ಚಿಕ್ಕ ವಯಸ್ಸಿನಲ್ಲಿಯೆ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಅಂತಹ ಜನರು ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಬಹಳ ಅದೃಷ್ಟವಂತರಾಗಿರುತ್ತಾರೆ.

ಡಿ ಅಕ್ಷರದಿಂದ ಪ್ರಾರಂಭವಾದ ಹೆಸರಿನವರು ಅದೃಷ್ಟವನ್ನು ಪಡೆದಿರುತ್ತಾರೆ. ಈ ಹೆಸರಿನ ಜನರ ಜೊತೆ ಪ್ರತಿ ಕ್ಷಣವೂ ಅದೃಷ್ಟವಿರುತ್ತದೆ ಅಲ್ಲದೆ ಅವರು ಯಾವುದೆ ಕೆಲಸದಲ್ಲಿಯೂ ಸಂಪೂರ್ಣವಾಗಿ ಶ್ರಮವಹಿಸುತ್ತಾರೆ. ಅವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಎಲ್ಲವನ್ನೂ ಪಡೆಯುತ್ತಾರೆ. ತಮ್ಮ ತೀಕ್ಷ್ಣ ಬುದ್ಧಿಶಕ್ತಿಯ ಸಹಾಯದಿಂದ ಚಿಕ್ಕ ವಯಸ್ಸಿನಲ್ಲಿಯೆ ಸಾಕಷ್ಟು ಸಾಧನೆ ಮಾಡುತ್ತಾರೆ. 

ಎಚ್ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಅದೃಷ್ಟವನ್ನು ಪಡೆದಿರುತ್ತಾರೆ. ಈ ಅಕ್ಷರದಿಂದ ಆರಂಭವಾಗುವ ಹೆಸರು ಇದ್ದರೆ ಅವರನ್ನು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರು ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಏನು ಮಾಡಬೇಕು ಎಂಬುದನ್ನು ಇವರು ಚಿಕ್ಕ ವಯಸ್ಸಿನಲ್ಲಿಯೆ ನಿರ್ಧರಿಸಿ ಅದರಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಎಲ್ ಅಕ್ಷರದಿಂದ ಪ್ರಾರಂಭವಾದ ಹೆಸರಿನವರು ಅದೃಷ್ಟವಂತರಾಗಿರುತ್ತಾರೆ. ಈ ಅಕ್ಷರದಿಂದ ಹೆಸರು ಆರಂಭವಾಗುವವರು ಬಹಳ ಕಠಿಣ ಪರಿಶ್ರಮಪಡುತ್ತಾರೆ.

ಇವರು ಬಹಳ ಬುದ್ಧಿವಂತರಾಗಿರುತ್ತಾರೆ. ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವೂ ಸಿಗುತ್ತದೆ. ಅದೆ ಸಮಯದಲ್ಲಿ ಅವರು ತಮ್ಮ ಜೀವನದುದ್ದಕ್ಕೂ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ. ಇದಲ್ಲದೆ ಅವರು ಚಿಕ್ಕ ವಯಸ್ಸಿನಲ್ಲಿಯೆ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಈ ಮೇಲೆ ಹೇಳಿದ ಅಕ್ಷರದಿಂದ ಆರಂಭವಾಗುವ ಹೆಸರಿನವರು ಚಿಕ್ಕ ವಯಸ್ಸಿನಲ್ಲಿ ಸಾಧನೆಯನ್ನು ಮಾಡುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ಬಿ, ಡಿ, ಎಚ್, ಎಲ್ ಅಕ್ಷರದಿಂದ ಆರಂಭವಾಗುವ ಹೆಸರಿನವರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!