ನಮ್ಮ ಸಮಾಜದಲ್ಲಿ ಮುಟ್ಟಾದ ಸ್ತ್ರೀಯರನ್ನು ನೋಡುವ ದೃಷ್ಟಿಯೆ ಬೇರೆ. ಮುಟ್ಟಾದ ಸ್ತ್ರೀಯರು ಮನೆಯ ಆಚೆ ಇರಬೇಕು, ಅವಳನ್ನು ಯಾರೂ ಮುಟ್ಟಿಸಿಕೊಳ್ಳಬಾರದು, ದೇವಾಲಯಗಳಿಗೆ ಹೋಗಬಾರದು, ನದಿ ಸ್ನಾನ ಮಾಡಬಾರದು ಅವಳನ್ನು ದೂರ ಇಡುತ್ತಾರೆ. ಈ ಎಲ್ಲ ಆಚರಣೆಯ ಹಿಂದೆ ಯಾವ ಉದ್ದೇಶವಿದೆ ಎಂಬುದನ್ನು ಸವಿಸ್ತಾರವಾಗಿ ಈ ಲೇಖನದಲ್ಲಿ ನೋಡೋಣ.

ಒಂದು ಕಾಲದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿತ್ತು ಹೆಣ್ಣನ್ನು ಹೊಗಳುತ್ತಿದ್ದರು ಆದರೆ ಈಗ ಸ್ವಾತಂತ್ರ್ಯ ಮತ್ತು ಸ್ವೆಚ್ಚೆಯ ಭ್ರಮೆಯಲ್ಲಿ ಬದುಕುವ ಸ್ತ್ರೀಯರು ಹೆಚ್ಚಾಗಿದ್ದಾರೆ. ಹೆಣ್ಣು ಋತುಮತಿ ಆಗುವುದನ್ನು ಪುಷ್ಪಮತಿ ಆಗುವುದು ಎಂದು ಹೇಳುತ್ತಾರೆ ಆ ಸಮಯದಿಂದ ಪ್ರತಿ ತಿಂಗಳು ಕೆಲವು ದಿನಗಳ ಕಾಲ ಹೆಣ್ಣು ತನ್ನ ದೇಹದಿಂದ ರಕ್ತವನ್ನು ಸ್ರವಿಸುವ ಕ್ರಿಯೆಯಾಗಿದೆ ಈ ಕ್ರಿಯೆ ಸರ್ವೆ ಸಾಮಾನ್ಯವಾಗಿದೆ. ಆ ಸಮಯದಲ್ಲಿ ಹೆಣ್ಣುಮಕ್ಕಳನ್ನು ದೂರ ಇಡಬೇಕು, ಯಾರೂ ಮುಟ್ಟಿಸಿಕೊಳ್ಳಬಾರದು, ಪೂಜೆ, ದೇವಸ್ಥಾನಗಳಿಗೆ ಪ್ರವೇಶ ಮಾಡಬಾರದು, ಮನೆಯಿಂದ ಹೊರಗೆ ಹಾಕುವುದು, ಆಕೆಯನ್ನು ಹೀನವಾಗಿ ನಡೆಸಿಕೊಳ್ಳಬೇಕು ಎಂಬ ಪದ್ಧತಿ ಶಾಸ್ತ್ರಗಳಲ್ಲಿ ಎಲ್ಲಿಯೂ ಇಲ್ಲ.

ಕೆಲವು ಕಾರಣಗಳಿಂದ ಅಂದಿನ ಕಾಲದಲ್ಲಿ ಈ ರೀತಿ ಮಾಡಲಾಗುತಿತ್ತು. ಅಂದಿನ ಕಾಲದಲ್ಲಿ ಸ್ಯಾನಿಟರಿ ಪ್ಯಾಡ್ ಇರಲಿಲ್ಲ ಶುಚಿತ್ವದ ಕೊರತೆ ಇತ್ತು ಅಲ್ಲದೆ ಕೂಡು ಕುಟುಂಬವಾಗಿತ್ತು ಆ ಕುಟುಂಬದಲ್ಲಿ ಹೆಣ್ಣು ಹೆಚ್ಚಿನ ಜವಾಬ್ದಾರಿ ಹೊತ್ತುಕೊಂಡು ಕೆಲಸ ಮಾಡುತ್ತಿದ್ದಳು, ಮನೆಯವರ ಊಟ ಉಪಚಾರ ಎಲ್ಲ ಕೆಲಸವನ್ನು ಆಕೆಯೆ ಮಾಡುತ್ತಿದ್ದಳು. ಹೆಣ್ಣು ಋತುಮತಿಯಾದಾಗ ಆಕೆಯ ದೇಹದ ಮೇಲೆ ಕಂಟ್ರೋಲ್ ಇರುವುದಿಲ್ಲ ಜೊತೆಗೆ ಮೈಂಡ್ ಇಮ್ ಬ್ಯಾಲೆನ್ಸ್ ಆಗುತ್ತದೆ. ದೇಹದಲ್ಲಿ ಅತ್ಯಧಿಕವಾದ ನೋವು, ಯಾತನೆ ಅನುಭವಿಸುತ್ತಾಳೆ ಜೊತೆಗೆ ಹೇಳಿಕೊಳ್ಳಲು ಆಗದೆ ಇರುವ ಕ್ರಿಯೆಗಳು ದೇಹದ ಒಳಗೆ ನಡೆಯುತ್ತಿರುತ್ತದೆ. ಅವಳ ಕಷ್ಟದ ಸಮಯದಲ್ಲಿ ಮನೆ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಯಾರೂ ಅವಳನ್ನು ಮಾತನಾಡಿಸಬಾರದು, ಅವಳನ್ನು ಹೊರಗೆ ಇಡಬೇಕು ಎಂಬ ಸಂಪ್ರದಾಯವನ್ನು ತಂದರು.

ಅಂದಿನ ಕಾಲದಲ್ಲಿ ಶುಚಿತ್ವದ ಕೊರತೆ ಇತ್ತು ಇದರಿಂದ ಬ್ಯಾಕ್ಟೀರಿಯಾ ಬಹಳ ಬೇಗ ಹರಡುವ ಸಾಧ್ಯತೆ ಇತ್ತು. ಕೂಡು ಕುಟುಂಬದಲ್ಲಿ ಈಗಿನ ಹಾಗೆ ವ್ಯವಸ್ಥೆ ಇರುತ್ತಿರಲಿಲ್ಲ, ಕೆಲವು ನಿಬಂಧನೆಗಳು ಇರುತ್ತಿದ್ದವು ಈ ಕಾರಣಕ್ಕೆ ಅವಳಿಗೆ ಯಾರೂ ತೊಂದರೆ ಕೊಡಬಾರದು ಎಂಬ ಉದ್ದೇಶಕ್ಕೆ ದೂರ ಇಟ್ಟರು. ದೈಹಿಕ ಮತ್ತು ಮಾನಸಿಕ ಅಸಮತೋಲನದ ಸಮಯದಲ್ಲಿ ಅವಳಿಗೆ ಬೇರೆ ವಿಷಯಗಳು ತೊಂದರೆ ಕೊಡಬಾರದು ಎಂಬ ಉದ್ದೇಶಕ್ಕೆ ಅವಳನ್ನು ದೂರ ಇಟ್ಟರು. ಈಗ ಮುಟ್ಟಿನ ಸಮಯದಲ್ಲಿ ಹೆಣ್ಣು ಅಪವಿತ್ರಳು ಎನ್ನುವಂತೆ ಅವಳನ್ನು ದೂಷಿಸುತ್ತಾರೆ ಮುಟ್ಟಾದ ಸ್ತ್ರೀಯನ್ನು ಮುಟ್ಟಿಸಿಕೊಳ್ಳಬಾರದು, ಪೂಜೆ ಮಾಡಬಾರದು ಎನ್ನುವುದು ಮುಠಾಳದ ಮಾತುಗಳು. ಮುಟ್ಟಾದ ಸಮಯದಲ್ಲಿ ನದಿ ಸ್ನಾನ ಮಾಡಬಾರದು ಏಕೆಂದರೆ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇರುತ್ತದೆ.

ಮುಟ್ಟಾದ ಸ್ತ್ರೀಗೆ ದೇಹ ಮತ್ತು ಮನಸ್ಸು ಚಂಚಲವಾಗಿಲ್ಲ ಎನ್ನುವುದಾದರೆ ನೋವು ಇಲ್ಲ ಎಂದಾದರೆ ಪೂಜೆ ಮಾಡಬಹುದು. ಹೆಣ್ಣಿಗೆ ನೈಸರ್ಗಿಕವಾಗಿ ನಡೆಯುವ ಒಂದು ಕ್ರಿಯೆಗೆ ಮುಜುಗರವೇಕೆ ಯಾವುದೆ ರೀತಿಯ ಅಡ್ಡಿ ಆತಂಕದ ಬಗ್ಗೆ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ಋತುಮತಿ ಸಮಯದಲ್ಲಿ ಪ್ರತಿ ಹೆಣ್ಣು ಕಷ್ಟಪಡುತ್ತಾಳೆ, ಪ್ರತಿ ತಿಂಗಳು ಆಕೆ ಯಾತನೆಯನ್ನು ಅನುಭವಿಸುತ್ತಾಳೆ ಹಾಗಾಗಿ ಪ್ರತಿ ತಿಂಗಳು 5 ದಿನಗಳ ಕಾಲ ಅವಳನ್ನು ಅವಳ ಪಾಡಿಗೆ ಬಿಟ್ಟುಬಿಡಿ ಅದರ ಬದಲು ದೂಷಣೆ ಮಾಡಬಾರದು. ಅದನ್ನು ಮುಟ್ಟಬಾರದು, ಇದನ್ನು ಮುಟ್ಟಬಾರದು ಎಂಬ ಮೂಢನಂಬಿಕೆಯಿಂದ ಹೊರಬರಬೇಕು. ನಮ್ಮ ಪೂರ್ವಜರು ಮಡಿವಂತಿಕೆಯಲ್ಲಿ ವೈಜ್ಞಾನಿಕ ಆಚರಣೆಯನ್ನು ಮಾಡಿದರು ಆದರೆ ಈಗ ಮೌಢ್ಯಾಚರಣೆ ಮಾಡುತ್ತಿದ್ದಾರೆ, ನಮ್ಮ ಸಮಾಜದಲ್ಲಿ ಕೆಲವು ಬದಲಾವಣೆಗಳು ಆಗಬೇಕಿದೆ. ಈ ವಿಷಯ ಸರಿ ಅನಿಸಿದರೆ ಸಮಾಜದ ಬದಲಾವಣೆಗೆ ನಾವೆ ಒಂದು ಹೆಜ್ಜೆ ಇಡೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!