ನಾವಿಂದು ನಿಮಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕೇವಲ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಒಡಂಬೈಲು ಪದ್ಮಾವತಿ ದೇವಸ್ಥಾನದ ಕುರಿತಾದ ಪವಾಡ ಪ್ರಸಿದ್ಧಿಯ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ದೇವಸ್ಥಾನ ಜನರ ಬಾಯಿಂದ ಬಾಯಿಗೆ ಹರಿದು ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಅಲ್ಲಿಗೆ ಭೇಟಿ ನೀಡುವಂತಹ ಭಕ್ತಾದಿಗಳು ತಮ್ಮ ಅನಿಸಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದರಿಂದ ದೇವಸ್ಥಾನಕ್ಕೆ ಹೆಚ್ಚು ಪ್ರಸಿದ್ಧಿ ದೊರಕಿದೆ ಜೊತೆಗೆ ಭಕ್ತಾದಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಪದ್ಮಾವತಿ ಅಮ್ಮನವರನ್ನು ನೆನೆಸಿಕೊಂಡು ಯಾರಾದರೂ ಸಂಕಲ್ಪವನ್ನು ಮಾಡಿಕೊಂಡರೆ ಅವರ ಸಂಕಲ್ಪ ನೆರವೇರುತ್ತದೆ ಎಂದು ಅಲ್ಲಿನವರು ಹೇಳುತ್ತಾರೆ. ಯಾರು ಈ ಸ್ಥಳವನ್ನು ತುಂಬಾ ನೆನೆಸಿಕೊಳ್ಳುತ್ತಾರೆ ಅಂತಹ ಭಕ್ತರಿಗೆ ಈ ಸ್ಥಳ ಕನಸಿನಲ್ಲಿ ಕಾಣಿಸುತ್ತದೆ ಎಂದು ಅವರೇ ಹೇಳಿಕೊಳ್ಳುತ್ತಾರೆ. ಯಾವುದೇ ಮಾಧ್ಯಮಗಳಲ್ಲಿ ಈ ದೇವಸ್ಥಾನದ ಕುರಿತು ಇದುವರೆಗೂ ಮಾಹಿತಿ ಬರದಿರುವ ಕಾರಣ ಜನರಿಗೆ ಇದರ ಬಗ್ಗೆ ಅಷ್ಟು ತಿಳಿದಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಗಳಲ್ಲಿ ಈ ದೇವಸ್ಥಾನದ ಕುರಿತು ವಿಡಿಯೋ ನೋಡುವಂತಹ ಭಕ್ತಾದಿಗಳು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಯನ್ನು ನೀಡುತ್ತಿದ್ದಾರೆ. ಇಲ್ಲಿ ಪದ್ಮಾವತಿ ಅಮ್ಮನವರ ದೇವಸ್ಥಾನದ ಜೊತೆಗೆ ಭೂತರಾಜರ ದೇವಾಲಯವಿದೆ ಇಲ್ಲಿಗೆ ಭೇಟಿ ನೀಡಿದಂತಹ ಭಕ್ತಾದಿಗಳು ತಮ್ಮ ಕಷ್ಟಗಳನ್ನ ತೊಂದರೆಗಳನ್ನು ಚೀಟಿಯಲ್ಲಿ ಬರೆದು ಅಲ್ಲಿ ಕಟ್ಟುತ್ತಾರೆ. ಭೂತರಾಯನ ಅಡಿಯಲ್ಲಿಯೂ ಕೆಲವು ಮೂರ್ತಿಗಳು ಇರುವುದನ್ನು ನೀವು ಅಲ್ಲಿ ನೋಡಬಹುದು.
ಈ ಕ್ಷೇತ್ರದಲ್ಲಿ ಭಕ್ತರಿಗೆ ಧರ್ಮದರ್ಶಿ ಗಳಿಂದ ಅಭಯದಾನ ಸಿಗುತ್ತದೆ ಭಕ್ತರು ಅವರನ್ನು ಭೇಟಿ ಮಾಡಿ ತಮ್ಮ ಕೋರಿಕೆಗಳನ್ನು ಸಲ್ಲಿಸುತ್ತಾರೆ ಗುರುಗಳು ಹೇಳುವಂತದ್ದನ್ನು ಪದ್ಮಾವತಿದೇವಿ ನಡೆಸಿಕೊಡುತ್ತಾಳೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಹೇಗೆ ನಾಗದೋಷ ಪರಿಹಾರವಾಗುತ್ತದೆ ಅದೇ ರೀತಿ ಇಲ್ಲೂ ಕೂಡ ನಾಗದೋಷ ಪರಿಹಾರ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ ಇಲ್ಲಿಯೂ ಕೂಡ ದೊಡ್ಡದಾದ ನಾಗದೇವರ ಪ್ರತಿಮೆ ಇದೆ. ಇಲ್ಲಿ ಬಂದಂತಹ ಭಕ್ತಾದಿಗಳಿಗೆ ದಿನದ ಮೂರು ಹೊತ್ತು ಅನ್ನ ಪ್ರಸಾದ ಸಿಗುತ್ತದೆ.
ಮೂರು ಕ್ಷೇತ್ರಗಳು ಸೇರಿ ಒಡಂಬೈಲಾಗಿದೆ. ಇಲ್ಲಿನ ಪದ್ಮಾವತಿ ದೇವಿಯನ್ನು ಬಳೆ ಪದ್ಮಾವತಿದೇವಿ ಎಂದೇ ಕರೆಯಲಾಗುತ್ತದೆ ಪದ್ಮಾವತಿ ದೇವಿಗೆ ಹರಕೆಯನ್ನು ಹೊತ್ತು ತಾಯಿಗೆ ಹಸಿರು ಬಳೆಯನ್ನು ಒಪ್ಪಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುತ್ತಾರೆ. ಇನ್ನು ಈ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಅನ್ನ ಪ್ರಸಾದ ಸಿಗುತ್ತದೆ ದೊಡ್ಡದಾದಂತಹ ಊಟದ ಭವನ ಇದ್ದು ಅಲ್ಲಿ ಹತ್ತು-ಹನ್ನೆರಡು ಕೊಠಡಿಗಳಿವೆ ಜೊತೆಗೆ ಬಾತ್ರೂಮ್ ವ್ಯವಸ್ಥೆ ಇದೆ.
ಇಲ್ಲಿಗೆ ಬರುವಂತಹ ಭಕ್ತಾದಿಗಳು ಸಂಜೆ ಆರರಿಂದ ಏಳು ಗಂಟೆಯ ಒಳಗೆ ಬಂದು ಹೋಗುವುದು ಒಳ್ಳೆಯದು ಇಲ್ಲಿ ಏಳು ಗಂಟೆಯ ನಂತರ ದೇವಸ್ಥಾನದಲ್ಲಿ ಯಾವುದೇ ರೀತಿಯಾದಂತಹ ಸೇವೆಗಳು ನಡೆಯುವುದಿಲ್ಲ. ಬೆಳಿಗ್ಗೆ ಆರೂವರೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ ಮಧ್ಯಾಹ್ನ ಎರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇವಸ್ಥಾನದ ಬಾಗಿಲು ಹಾಕಿಕೊಂಡಿರುತ್ತದೆ ನಂತರ ಸಂಜೆ ಆರೂವರೆ ಏಳುಗಂಟೆಯವರೆಗೆ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.
ಅಲ್ಲಿಗೆ ಬೇಟಿ ನೀಡಿರುವಂತಹ ಭಕ್ತಾದಿಗಳು ಕೂಡ ಅಮ್ಮನವರ ಪವಾಡದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಒಡಂಬೈಲು ಪದ್ಮಾವತಿ ಅಮ್ಮನವರ ಸನ್ನಿಧಾನದಲ್ಲಿ ಯಾರೇ ಸಂಕಲ್ಪವನ್ನು ಮಾಡಿಕೊಂಡಿರು ಅವರ ಇಷ್ಟಾರ್ಥಗಳು ನೆರವೇರುತ್ತವೆ. ನೀವು ಕೂಡ ಒಮ್ಮೆ ಅಲ್ಲಿಗೆ ಭೇಟಿ ನೀಡಿ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ಈ ಕ್ಷೇತ್ರದ ಮಹಿಮೆಯನ್ನು ತಿಳಿಸಿರಿ.