ಅನೇಕ ಜನರು ಉದ್ಯೋಗವನ್ನು ಪಡೆದುಕೊಳ್ಳುವುದಕ್ಕಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಟವನ್ನು ನಡೆಸುತ್ತಿರುತ್ತಾರೆ. ನಾವಿಂದು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಸಿಹಿಸುದ್ದಿಯನ್ನು ತಿಳಿಸಿಕೊಡುತ್ತೇವೆ. ಜನವರಿ ತಿಂಗಳಲ್ಲಿ ಯಾವೆಲ್ಲ ಉದ್ಯೋಗಗಳ ಬರ್ತಿಗಾಗಿ ಅರ್ಜಿಯನ್ನು ಕರೆಯಲಾಗಿದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಯಾವ ದಿನಾಂಕದೊಳಗೆ ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ನಾವಿಂದು ತಿಳಿಸುತ್ತಿರುವ ಮೊದಲನೇ ಉದ್ಯೋಗ ಮಾಹಿತಿ ಕರ್ನಾಟಕ ವಿಮಾ ನಿಗಮದಲ್ಲಿ ಕ್ಲರ್ಕ್ ಸ್ಟೆನೋಗ್ರಾಫರ್ ಎಂಟಿಎಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಈ ಒಂದು ವಿಭಾಗದಲ್ಲಿ ಒಟ್ಟು ಮುನ್ನೂರ ಹದಿನೇಳು ಹುದ್ದೆಗಳು ಖಾಲಿ ಇವೆ. ಎಸ್ ಎಸ್ ಎಲ್ ಸಿ ಪಿಯುಸಿ ಅಥವಾ ಡಿಗ್ರಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಅಭ್ಯರ್ಥಿಗಳು ಫೆಬ್ರುವರಿ ಹದಿನೈದು ಎರಡು ಸಾವಿರದ ಇಪ್ಪತ್ತೆರಡರವರೆಗೆ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ನಾವು ನಿಮಗೆ ತಿಳಿಸುತ್ತಿರುವ ಎರಡನೇ ಉದ್ಯೋಗ ಮಾಹಿತಿ ನವೋದಯ ವಿದ್ಯಾಲಯ ಸಮಿತಿಯಲ್ಲಿ ನೇರ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಕ್ಲರ್ಕ್ ಸ್ಟೆನೋಗ್ರಾಫರ್ ಎಂಟಿಸಿ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಲ್ಲಿ ಖಾಲಿಯಿರುವ ಒಟ್ಟು ಹುದ್ದೆಗಳ ಸಂಖ್ಯೆ ಸಾವಿರದ ಒಂಬೈನೂರ ಇಪ್ಪತ್ತೈದು. ಈ ಒಂದು ಹುದ್ದೆಗೆ ಎಸ್ ಎಸ್ ಎಲ್ ಸಿ ಪಿಯುಸಿ ಪದವಿ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರುವರಿ ಹತ್ತು ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ನಾವು ನಿಮಗೆ ತಿಳಿಸುತ್ತಿರುವ ಮೂರನೇ ಉದ್ಯೋಗ ಮಾಹಿತಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ವಿಭಾಗದಲ್ಲಿ ಒಟ್ಟು ಮೂವತ್ತೊಂಬತ್ತು ಹುದ್ದೆಗಳು ಖಾಲಿ ಇವೆ ಈ ಒಂದು ಹುದ್ದೆಗೆ ಯಾವುದೇ ಪದವಿಯನ್ನು ಪಡೆದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿಯನ್ನು ಅಭ್ಯರ್ಥಿಗಳು ಜನವರಿ ಇಪ್ಪತ್ತು ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ಸಲ್ಲಿಸಬೇಕು.
ನಾವು ನಿಮಗೆ ತಿಳಿಸುತ್ತಿರುವ ನಾಲ್ಕನೇ ಉದ್ಯೋಗ ಮಾಹಿತಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಇಲ್ಲಿ ಒಟ್ಟು ಆರು ನೂರಾ ನಲವತ್ತೊಂದು ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿಯನ್ನು ಪಾಸಾಗಿರಬೇಕು ಮತ್ತು ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಜನವರಿ ಇಪ್ಪತ್ತು ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ಸಲ್ಲಿಸಬೇಕು.
ನಾವು ನಿಮಗೆ ತಿಳಿಸುತ್ತಿರುವ ಐದನೇ ಉದ್ಯೋಗ ಮಾಹಿತಿ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದಿಂದ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಸಿಜಿಎಲ್ ಪರೀಕ್ಷೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು ಹತ್ತು ಸಾವಿರಕ್ಕಿಂತ ಅಧಿಕ ಹುದ್ದೆಗಳಿಗೆ ಸಿಜಿಎಲ್ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. ಯಾವುದೇ ಪದವಿಯನ್ನು ಪಡೆದಿರುವಂತಹ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಇಪ್ಪತ್ಮೂರು ಜನವರಿ ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಇದಿಷ್ಟು ನಾವಿಂದು ನಿಮಗೆ ತಿಳಿಸುತ್ತಿರುವ ಜನವರಿ ತಿಂಗಳಲ್ಲಿ ಕರೆಯಲಾದ ಉದ್ಯೋಗಗಳ ಮಾಹಿತಿಯಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.