ಕಾಲಕಾಲಕ್ಕೆ ಗ್ರಹಗತಿಗಳು ಬದಲಾಗುತ್ತಿರುತ್ತವೆ ಗ್ರಹಗಳಲ್ಲಿ ಉಂಟಾಗುವ ಬದಲಾವಣೆ ದ್ವಾದಶ ರಾಶಿಗಳ ಫಲಾಫಲದಲ್ಲಿ ಪರಿಣಾಮವನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಶುಭಫಲವನ್ನು ಉಂಟುಮಾಡಿದರೆ ಕೆಲವೊಮ್ಮೆ ಅಶುಭಫಲವನ್ನು ಇನ್ನು ಕೆಲವೊಮ್ಮೆ ಮಿಶ್ರಿತ ಫಲವನ್ನು ಉಂಟುಮಾಡುತ್ತದೆ. ಕೆಲವು ರಾಶಿಗಳ ಮೇಲೆ ವಿಶೇಷ ಪ್ರಭಾವವನ್ನು ಉಂಟು ಮಾಡುತ್ತದೆ ಪ್ರತಿ ಗ್ರಹದ ಬದಲಾವಣೆ ಮತ್ತು ಸ್ವಭಾವವು ವಿಭಿನ್ನ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಕೆಲವೊಮ್ಮೆ ಇವುಗಳು ಜೀವನವನ್ನೇ ಬದಲಾಯಿಸುತ್ತವೆ. ನಾವಿಂದು ನಿಮಗೆ ರಾಹು ರಾಶಿ ಬದಲಾವಣೆಯನ್ನು ಮಾಡುವುದರಿಂದ ಯಾವ ರಾಶಿಗಳ ಮೇಲೆ ಯಾವ ರೀತಿಯಾದ ಪರಿಣಾಮವುಂಟಾಗುತ್ತದೆ ರುದ್ರ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಗ್ರಹಗಳಲ್ಲಿ ಮುಖ್ಯವಾಗಿ ರಾಹು ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವುದಕ್ಕೆ ಹದಿನೆಂಟು ತಿಂಗಳುಗಳ ಸಮಯಾವಕಾಶ ಬೇಕಾಗುತ್ತದೆ ಇತರ ಗ್ರಹಗಳಂತೆ ರಾಹು ಗ್ರಹದ ಚಲನೆ ನೇರವಾಗಿ ಇರುವುದಿಲ್ಲ ಬದಲಿಗೆ ತಲೆಕೆಳಗಾಗಿ ಇರುತ್ತದೆ ಅಂದರೆ ರಾಹುಗ್ರಹ ಯಾವಾಗಲೂ ಹಿಂದಕ್ಕೆ ಚಲಿಸುತ್ತಿರುತ್ತದೆ. ಈ ಕಾರಣದಿಂದಾಗಿ ರಾಹು ಯಾವಾಗಲೂ ರಾಶಿಚಕ್ರದ ಹಿಂದಿನ ರಾಶಿಚಕ್ರದ ಚಿನ್ಹೆಗೆ ಪ್ರವೇಶಿಸುತ್ತಾನೆ. ಏಪ್ರಿಲ್ ಹನ್ನೆರಡು ಎರಡು ಸಾವಿರದ ಇಪ್ಪತ್ತೆರಡರಂದು ರಾಹು ಪಲ್ಲಟ ನಡೆಯಲಿದೆ. ಆಗ ರಾಹುವು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ದ್ವಾದಶ ರಾಶಿಯಲ್ಲಿನ ನಾಲ್ಕು ರಾಶಿಗಳಿಗೆ ತುಂಬಾ ಒಳ್ಳೆಯ ಫಲಗಳು ಉಂಟಾಗುತ್ತವೆ.

ರಾಹುವಿನ ರಾಶಿ ಬದಲಾವಣೆಯಿಂದ ಒಳ್ಳೆಯ ಫಲವನ್ನು ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವುವು ಎಂಬುದರ ಕುರಿತಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ರಾಹುವಿನ ರಾಶಿ ಪರಿವರ್ತನೆಯಿಂದ ಒಳ್ಳೆಯ ಫಲಗಳನ್ನು ಅನುಭವಿಸುವ ಮೊದಲನೇ ರಾಶಿ ಮಿಥುನ ರಾಶಿ. ಬುಧ ಗ್ರಹಕ್ಕೆ ಸೇರಿದ ಮಿಥುನ ರಾಶಿಯವರಿಗೆ ರಾಹುವಿನ ಸ್ಥಾನಪಲ್ಲಟ ಒಳ್ಳೆಯ ಫಲವನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಈ ರಾಶಿಯವರಿಗೆ ಹೊಸ ಉದ್ಯೋಗಗಳು ದೊರೆಯುವ ಸಾಧ್ಯತೆ ಇರುತ್ತದೆ. ಎಲ್ಲಾ ಕಡೆಗಳಲ್ಲಿಯೂ ನಿಮಗೆ ಗೌರವ ದೊರೆಯುತ್ತದೆ ಬಹಿರ್ದೆಸೆ ಯೋಗವಿದ್ದು ನೀವು ಆದಾಯವನ್ನು ಚೆನ್ನಾಗಿ ಗಳಿಸಲಿದ್ದೀರಿ ಜೊತೆಗೆ ಹಣವನ್ನು ಕೂಡ ಉಳಿತಾಯ ಮಾಡುವುದರಲ್ಲಿ ಯಶಸ್ವಿಯಾಗುತತ್ತಿರಿ.

ಇನ್ನು ರಾಹು ಸ್ಥಾನ ಪಲ್ಲಟದಿಂದ ಶುಭಫಲವನ್ನು ಅನುಭವಿಸುವ ಎರಡನೇ ರಾಶಿ ಕಟಕ ರಾಶಿ. ಈ ರಾಶಿಯವರಿಗೆ ರಾಹು ಸ್ಥಾನ ಪಲ್ಲಟದಿಂದ ಒಳ್ಳೆಯ ಫಲಗಳು ಉಂಟಾಗಲಿದ್ದು ಈಗಾಗಲೇ ಅರ್ಧಕ್ಕೆ ನಿಲ್ಲಿಸಿರುವ ಕೆಲಸಗಳು ಪೂರ್ತಿ ಗೊಳಿಸುವುದಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. ಹಣದ ಹರಿವು ಚೆನ್ನಾಗಿರುತ್ತದೆ ಜೊತೆಗೆ ಈಗಾಗಲೇ ಇರುವ ಕೆಲಸವನ್ನು ಬಿಟ್ಟು ಬೇರೆ ಕೆಲಸವನ್ನು ಹುಡುಕಬೇಕು ಎನ್ನುವವರಿಗೂ ಕೂಡ ಉದ್ಯೋಗ ದೊರೆಯುವ ಅವಕಾಶವಿದೆ.

ಕೆಲಸದ ಸ್ಥಳದಲ್ಲಿ ನಿಮ್ಮ ಎಲ್ಲಾ ಕೆಲಸಕ್ಕೂ ನಿಮ್ಮ ಬಾಸ್ ನ ಸಂಪೂರ್ಣ ಬೆಂಬಲವನ್ನು ನೀವು ಪಡೆದುಕೊಳ್ಳುತ್ತೀರಿ ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಉದ್ಯೋಗಗಳು ದೊರೆಯುವ ಅವಕಾಶವಿದೆ. ಎಲ್ಲಾ ರೀತಿಯಿಂದಲೂ ಈ ಸಮಯ ಕರ್ಕಾಟಕ ರಾಶಿಯವರಿಗೆ ಉತ್ತಮವಾಗಿರುತ್ತದೆ. ಇನ್ನು ರಾಹು ರಾಶಿ ಬದಲಾವಣೆಯಿಂದ ಶುಭಫಲವನ್ನು ಅನುಭವಿಸುವ ಮೂರನೇ ರಾಶಿ ವೃಶ್ಚಿಕ ರಾಶಿ. ಈ ರಾಶಿಯವರು ಕೆಲಸ ಹುಡುಕುತ್ತಿದ್ದರೆ ಉದ್ಯೋಗವನ್ನು ಪಡೆದುಕೊಳ್ಳುವುದಕ್ಕೆ ಇದು ಸುವರ್ಣಾವಕಾಶ ಎಂದು ಹೇಳಬಹುದು.

ಈಗಾಗಲೇ ನೀವು ಮಾಡುತ್ತಿರುವ ಉದ್ಯೋಗದಲ್ಲಿ ನಿಮಗೆ ಬಡ್ತಿ ದೊರೆಯುವ ಸಂಭವ ಇರುತ್ತದೆ. ಸಂಬಳದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆಗಳಿವೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಬಾರಿ ಗೆಲ್ಲುವ ಅವಕಾಶಗಳಿವೆ. ಈ ಅವಧಿಯಲ್ಲಿ ನಿಮ್ಮ ಮನೋಬಲವು ಕೂಡ ಹೆಚ್ಚಾಗಿರುತ್ತದೆ. ಇನ್ನು ರಾಹು ರಾಶಿ ಬದಲಾವಣೆಯಿಂದ ಶುಭಫಲವನ್ನು ಅನುಭವಿಸುವ ನಾಲ್ಕನೇ ರಾಶಿ ಯಾವುದು ಎಂದರೇನು ಅದು ಧನು ರಾಶಿ.

ಈ ಅವಧಿಯಲ್ಲಿ ಧನುರಾಶಿಯವರಿಗೆ ಆರ್ಥಿಕ ನೆರವು ಆರ್ಥಿಕ ಲಾಭ ಉಂಟಾಗುತ್ತದೆ. ನೀವು ದೀರ್ಘಕಾಲದಿಂದ ಒಂದು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಿರಿ. ನಿಮ್ಮ ಕೆಲಸದಲ್ಲಿ ನೀವು ದೊಡ್ಡ ದೊಡ್ಡ ಸಾಧನೆಯನ್ನು ಮಾಡುವುದಕ್ಕೆ ನಿಮಗೆ ಅವಕಾಶವಿದೆ. ಇದಲ್ಲದೆ ಆರ್ಥಿಕ ಮೂಲಗಳು ಕೂಡ ತುಂಬಾ ಲಾಭದಾಯಕವಾಗಿದೆ. ಈ ರೀತಿಯಾಗಿ ರಾಹು ರಾಶಿ ಬದಲಾವಣೆಯಿಂದ ದ್ವಾದಶ ರಾಶಿಯ ನಾಲ್ಕು ರಾಶಿಗಳಿಗೆ ಉತ್ತಮ ಪರಿಣಾಮಗಳು ಕಂಡುಬರಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!