ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 8437 ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ

0 7

ಉದ್ಯೋಗ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ನಾವಿಂದು ಸಿಹಿಸುದ್ದಿಯನ್ನು ತಿಳಿಸಿಕೊಡುತ್ತೇವೆ. ಅದೇನೆಂದರೆ ಅರಣ್ಯ ಇಲಾಖೆಯಿಂದ ಎರಡು ಸಾವಿರದ ಇಪ್ಪತ್ತೆರಡನೇ ವರ್ಷಕ್ಕೆ ಸಂಬಂಧಿಸಿದಂತೆ ನೇಮಕಾತಿಯ ಕುರಿತಾದಂತಹ ಅಧಿಸೂಚನೆ ಬಿಡುಗಡೆಯಾಗಿದೆ. ಅಧಿಸೂಚನೆ ಯಾವೆಲ್ಲಾ ಮಾಹಿತಿಯನ್ನು ಒಳಗೊಂಡಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಅಧಿಸೂಚನೆಯಲ್ಲಿ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುಟ್ಟು ಎಂಟು ಸಾವಿರದ ನಾಲ್ಕು ನೂರಾ ಮೂವತ್ತೇಳು ಹುದ್ದೆಗಳ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸಲಾಗಿದೆ.

ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇಲಾಖೆಯಲ್ಲಿ ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವವರ ವಯೋಮಿತಿ ಎಷ್ಟಿರಬೇಕು ಎಂಬುದನ್ನು ನೋಡುವುದಾದರೆ ಮೊದಲನೇದಾಗಿ ಫಾರೆಸ್ಟ್ ಗಾರ್ಡ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18ರಿಂದ 27 ವರ್ಷ ಒಳಗಿನವರಾಗಿರಬೇಕು. ಇವರು ಪಿಯುಸಿ ಪಾಸಾಗಿರಬೇಕು ಮತ್ತು ಸ್ಥಳೀಯ ಭಾಷೆಗಳನ್ನು ಕಲಿತರು ಆಗಿರಬೇಕು. ಎರಡನೆಯದಾಗಿ ಫೀಲ್ಡ್ ಸರ್ವೇಯರ್ 30 ವರ್ಷದವರಾಗಿರಬೇಕು ಈ ಹುದ್ದೆಗೆ ಯಾವುದೇ ಡಿಗ್ರಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದು. ಮೂರನೆಯದಾಗಿ ವರ್ಲ್ಡ್ ಲೈಫ್ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಹದಿನೆಂಟರಿಂದ ಇಪ್ಪತ್ತೇಳು ವರ್ಷ ಒಳಗಿನವರಾಗಿರಬೇಕು ಮತ್ತು ಹತ್ತನೇ ತರಗತಿ ಪಾಸಾಗಿರಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಜನರಲ್ ಕೆಟಗರಿ ಅವರು ಓಬಿಸಿ ಮತ್ತು ಇ ಡಬ್ಲ್ಯೂ ಎಸ್ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು ಎಸ್ಸಿಎಸ್ಟಿ ಹಾಗೂ ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಪುರುಷ ಅಭ್ಯರ್ಥಿಗಳು ನೂರಾ ಅರವತ್ಮೂರು ಸೆಂಟಿಮೀಟರ್ ಎತ್ತರವಾಗಿರಬೇಕು ಮತ್ತು ಮಹಿಳೆಯರು ನೂರಾ ಐವತ್ತು ಸೆಂಟಿಮೀಟರ್ ಎತ್ತರವಾಗಿರಬೇಕು. ಗಂಡು ಮಕ್ಕಳು ಎಂಬತ್ನಾಲ್ಕು ಸೆಂಟಿಮೀಟರ್ ಎದೆ ಸುತ್ತಳತೆಯನ್ನು ಹೆಣ್ಣುಮಕ್ಕಳು ಎಪ್ಪತೊಂಬತ್ತು ಸೆಂಟಿಮೀಟರ್ ಎದೆ ಸುತ್ತಳತೆ ಹೊಂದಿರಬೇಕು. ಗಂಡು ಮಕ್ಕಳಿಗೆ ನಾಲ್ಕು ತಾಸಿಗೆ ಇಪ್ಪತ್ತೈದು ಕಿಲೋಮೀಟರ್ ರನ್ನಿಂಗ್ ಮತ್ತು ಹೆಣ್ಣುಮಕ್ಕಳಿಗೆ ನಾಲ್ಕು ತಾಸಿಗೆ ಹದಿನಾರು ಕಿಲೋ ಮೀಟರ್ ರನ್ನಿಂಗ್ ಇರುತ್ತದೆ.

ಅಭ್ಯರ್ಥಿಗಳ ಆಯ್ಕೆ ಯಾವ ರೀತಿ ಮಾಡಿಕೊಳ್ಳಲಾಗುತ್ತದೆ ಎಂದರೆ ಮೊದಲಿಗೆ ದೈಹಿಕ ಪರೀಕ್ಷೆಯನ್ನು ಮಾಡಲಾಗುತ್ತದೆ ನಂತರ ಲಿಖಿತ ಪರೀಕ್ಷೆಯ ತೆಗೆದುಕೊಳ್ಳಲಾಗುತ್ತದೆ ಅದಾದನಂತರ ನೇರ ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮಾಡುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ನೋಡುವುದಾದರೆ ಫೀಲ್ಡ್ ಸರ್ವೇಯರ್ ಮೂವತ್ತಾರು ಸಾವಿರದ ಒಂಬೈನೂರು ರೂಪಾಯಿ, ಫೋರೆಸ್ಟ್ ಗಾರ್ಡ್ ಗಳಿಗೆ ಮೂವತ್ತು ಸಾವಿರದ ಎರಡು ನೂರು ರೂಪಾಯಿ ವೈಲ್ಡ್ ಲೈಫ್ ಗಾರ್ಡ್ ಅವರಿಗೆ ಇಪ್ಪತ್ತೆಂಟು ಸಾವಿರ ರೂಪಾಯಿ ಮಾಸಿಕ ವೇತನ ಇರುತ್ತದೆ.

ಹುದ್ದೆಗೆ ಈಗಾಗಲೇ ಆನ್ಲೈನ್ ರಿಜಿಸ್ಟ್ರೇಷನ್ ಪ್ರಾರಂಭವಾಗಿದ್ದು ಹತ್ತೊಂಬತ್ತು ಫೆಬ್ರುವರಿ ಎರಡು ಸಾವಿರದ ಇಪ್ಪತ್ತೆರಡರ ವರೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಿಷ್ಟು ಅರಣ್ಯ ಇಲಾಖೆಯಿಂದ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ತಿಳಿಸಿರುವ ಮಾಹಿತಿಯಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗು ಈ ಮಾಹಿತಿಯನ್ನು ತಿಳಿಸಿರಿ.

Leave A Reply

Your email address will not be published.