ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಯಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ, ಈಗಾಗಲೇ ಟೀಸರ್ ಬಿಡುಗಡೆ ಆಗಿದ್ದು ಈ ಟೀಸರ್ ಉತ್ತಮ ರೀತಿಯಲ್ಲಿ ರೆಸ್ಪಾನ್ಸ್ ಪಡೆದುಕೊಂಡಿದೆ. ವಿಕ್ರಾಂತ್ ರೋಣ ಸಿನಿಮಾ ಭಾರತದಾದ್ಯಂತ ಸುಮಾರು ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ, ಈ ಸಿನಿಮಾದ ಟ್ರೈಲರ್ ಅನ್ನು ಕನ್ನಡದಲ್ಲಿ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅವರು ಬಿಡುಗಡೆ ಮಾಡಿದರು, ಅದೇ ರೀತಿಯಲ್ಲಿ ಹಿಂದಿಯಲ್ಲಿ ಸಲ್ಮಾನ್ ಖಾನ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್, ತೆಲುಗುನಲ್ಲಿ ರಾಮ್ ಚರಣ್ ತೇಜ, ತಮಿಳು ಚಿತ್ರರಂಗದಲ್ಲಿ ಧನುಷ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಈ ಚಿತ್ರದ ರಕ್ಕಮ್ಮ ಹಾಡು ಈಗಾಗಲೇ ಬಹಳಷ್ಟು ಜನಪ್ರಿಯತೆ ಪಡೆದಿದ್ದು ಈ ಹಾಡನ್ನು ಗಾಯಕಿ ಮಂಗ್ಲೀ ಹಾಡಿದ್ದಾರೆ. ಹಾಗಾದರೆ ರಕ್ಕಮ್ಮ ಹಾಡಿಗೆ ಸಿಂಗರ್ ಮಂಗ್ಲಿ ಪಡೆದ ಸಂಭಾವನೆ ಎಷ್ಟು ನೋಡೋಣ.
ಜುಲೈ 3ನೇ ತಾರೀಖಿನಂದು ವಿಕ್ರಾಂತ್ ರೋಣ ಸಿನಿಮಾವನ್ನು ದೇಶಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ, ಅದೇ ರೀತಿಯಾಗಿ ಈ ಸಿನಿಮಾದ ಪ್ರಚಾರ ಕಾರ್ಯಕ್ಕೆ ಕಿಚ್ಚ ಸುದೀಪ್ ಹಾಗೂ ವಿಕ್ರಾಂತ್ ರೋಣ ಸಿನಿಮಾದವರು ದಕ್ಷಿಣ ಭಾರತದ ಬಹುತೇಕ ಭಾಗಗಳಲ್ಲಿ ಪ್ರಚಾರ ಕಾರ್ಯವನ್ನು ಪ್ರಾರಂಭ ಮಾಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ಹಾಗೂ ಟೀಸರ್ ಮತ್ತು ಟ್ರೈಲರ್ ಅನ್ನು ಕುರಿತು ಕಿಚ್ಚ ಸುದೀಪ್ ಅವರು ಮಾತನಾಡಿದರು.
ತದನಂತರ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡಿಗೆ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕೂಡ ಹೆಜ್ಜೆ ಹಾಕಿದರು, ಇದನ್ನು ನೋಡಿ ಅಭಿಮಾನಿಗಳನ್ನು ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ರಾ ರಾ ರಕ್ಕಮ್ಮ ಹಾಡು ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದು ಎಲ್ಲ ಕಡೆ ಅದರದೇ ಹವಾ. ಈ ಹಾಡಿಗೆ ಸ್ಯಾಂಡಲ್ವುಡ್ ನ ಹಲವಾರು ನಟ ನಟಿಯರು ಹೆಜ್ಜೆ ಹಾಕಿದರು, ಕಿರುತೆರೆಯ ಕಲಾವಿದರೂ ಕೂಡ ಈ ಒಂದು ಹಾಡಿಗೆ ಡ್ಯಾನ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನೂ ಈ ಚಿತ್ರದ ರಕ್ಕಮ್ಮ ಹಾಡನ್ನು ತೆಲುಗು ಗಾಯಕಿ ಮಂಗ್ಲಿ ಹಾಡಿದ್ದಾರೆ. ಮಂಗ್ಲಿ ಈಗ ಯಾರಿಗೆ ಗೊತ್ತಿಲ್ಲ ಹೇಳಿ? ರಾಬರ್ಟ್ ಸಿನಿಮಾದ ತೆಲುಗು ವರ್ಷನ್ನಲ್ಲಿ ಕಣ್ಣೇ ಅದಿರಿಂದಿ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಕನ್ನಡಿಗರ ಮನ ಗೆದ್ದವರು. ಹೌದು ಲಂಬಾಣಿ ಹುಡುಗಿ ಹಾಡಿದ್ದ ಹಾಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಈ ಹಾಡಿನಿಂದಾಗಿ ಮಂಗ್ಲಿ ಅವರಿಗೆ ಕನ್ನಡ ಸಿನಿರಸಿಕರ ಹೃದಯದಲ್ಲಿ ಒಂದೊಳ್ಳೆ ಸ್ಥಾನ ಸಿಕ್ಕಿತ್ತು. ಇನ್ನು ಕನ್ನಡಿಗರಿಗೆ ಗಾಯಕಿಯಾಗಿ ಪರಿಚಯವಾದ ಮಂಗ್ಲಿ ಈಗ ನಟಿಯಾಗಿ ಕನ್ನಡಿಗರ ಮುಂದೆ ಬರಲಿದ್ದಾರೆ.
ಹೌದು ಕನ್ನಡ ಸಿನಿಮಾದಲ್ಲಿ ಮಂಗ್ಲಿ ನಟಿಯಾಗಿ ಸ್ಟಾರ್ ನಟನ ಎದುರು ನಟಿಸಲಿದ್ದಾರೆ ಎನ್ನಲಾಗಿತ್ತು. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಜತೆ ಮಂಗ್ಲಿ ನಟಿಸುತ್ತಿದ್ದು ಶಿವರಾಜ್ಕುಮಾರ್ ಅಭಿನಯದ 124ನೇ ಸಿನಿಮಾದಲ್ಲಿ ಮಂಗ್ಲಿ ನಟಿಸುತ್ತಿದ್ದಾರಂತೆ. ತೆಲುಗಿನ ನಿರ್ದೇಶಕರಾದ ರಾಮ್ ಧುಲಿಪುಡಿ ಅವರು ಮಾಡುತ್ತಿರುವ ಕನ್ನಡ ಸಿನಿಮಾದಲ್ಲಿ ಶಿವಣ್ಣನ ಎದುರು ಮಂಗ್ಲಿ ಅಭಿನಯಿಸುತ್ತಿದ್ದಾರಂತೆ. ಸದ್ಯ ಮಂಗ್ಲಿಗೆ ತೆಲುಗು ಹಾಗೂ ಕನ್ನಡ ಎರಡು ಕಡೆ ಕೂಡ ಬೇಡಿಕೆ ಹೆಚ್ಚಿದೆ. ಈ ಹಿಂದೆ ತೆಲುಗು ಚಿತ್ರ ಪುಷ್ಪ ಚಿತ್ರದ ಹು ಅಂತೀಯ ಮಾವ ಕನ್ನಡ ವರ್ಷನ್ ಸಾಂಗ್ ಹಾಡಿದ್ದ ಮಂಗ್ಲಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಇದೀಗ ಕನ್ನಡದ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ತೆಲುಗು ವರ್ಷನ್ ಸಾಂಗ್ ಹಾಡಿ ಸೆನ್ಸೇಷನ್ ಮೂಡಿಸಿದ್ದಾರೆ. ಅಷ್ಟಕ್ಕೂ ಈ ಹಾಡು ಹಾಡಲು ಮಂಗ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
ನಟ ಕಿಚ್ಚ ಸುದೀಪ್ ಅವರ ಅಭಿನಯದ ವಿಕ್ರಾಂತ ರೋಣ ಸಿನಿಮಾ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಸಿನಿಮಾದ ಟ್ರೈಲರ್ ಲಾಂಚ್ ಪ್ರಿ ರಿಲೀಸ್ ಇವೆಂಟ್ ಶೋ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಭರ್ಜರಿಯಾಗಿ ಜರುಗಿತು. ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸ್ಟಾರ್ ನಟ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಇನ್ನು ಕೂಡ ದೊಡ್ಡ ದೊಡ್ಡ ಸ್ಟಾರ್ ನಟರು ಆಗಮಿಸಿದ್ದರು. ಹಾಗೇಯೇ ಕಿರುತೆರೆಯ ಕೆಲ ಸ್ಟಾರ್ ನಟರು ಕೂಡ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಅನುಪ್ ಭಂಡಾರಿ ಅವರ ನಿರ್ದೇಶನದಲ್ಲಿ ವಿಕ್ರಾಂತ್ ಋಣ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿ ದೊಡ್ಡದಾಗಿ ಸದ್ದು ಮಾಡಲು ಈಗಾಗಲೇ ಕ್ಷಣಗಣನೆ ಶುರು ಮಾಡಿದೆ. ಸದ್ಯ ರಾರಾ ರಕ್ಕಮ್ಮ ಹಾಡು ಭಾರತದಲ್ಲೆ ಸದ್ದು ಮಾಡಿದ್ದು ಅದರಲ್ಲೂ ಕನ್ನಡ ಹಾಗೂ ತೆಲುಗಿನಲ್ಲಿ ಸದ್ದು ಮಾಡುತ್ತಿದೆ. ಇನ್ನು ತೆಲುಗಿನಲ್ಲಿ ಸೆನ್ಸೇಷನ್ ಮೂಡಿಸಲು ಮುಖ್ಯ ಕಾರಣ ಮಂಗ್ಲಿ ಅವರ ವಾಯ್ಸ್ ಎನ್ನಬಹುದು. ಇನ್ನು ಈ ಹಾಡು ಹಾಡಲು ಮಂಗ್ಲಿ ಬರೋಬ್ಬರಿ 9ಲಕ್ಷ ಸಂಭಾವನೆಯನ್ನ ಪಡೆದುಕೊಂಡಿದ್ದು ಈ ವಿಚಾರ ಕೂಡ ಎಲ್ಲೆಡೆ ಸದ್ದು ಮಾಡುತ್ತಿದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.