ಜನಸಾಮಾನ್ಯರ ಮನಸ್ಸಿನಲ್ಲಿ ನಟಿಯರ ಬದುಕು ಸುಂದರವಾಗಿರುತ್ತದೆ ಎಂದು ಅಂದುಕೊಂಡಿರುತ್ತಾರೆ. ಆದರೆ ಲಕ್ಷ್ಮೀ ಅವರ ಮಗಳು ಐಶ್ವರ್ಯಾ ಅವರು ಜೀವನ ನಡೆಸಲು ಸಾಬೂನು ಮಾರುತ್ತಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕನ್ನಡವೂ ಸೇರಿದಂತೆ ದಕ್ಷಿಣದ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮನಸಲ್ಲಿ ಮನೆ ಮಾಡಿದ್ದಾರೆ. ಈಗ ಡ್ರಾಮಾ ಜ್ಯೂನಿಯರ್ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಕನ್ನಡಿಗರೆ ಆಗಿ ಹೋಗಿರುವ ಹಿರಿಯ ನಟಿ ಲಕ್ಷ್ಮೀ ಮತ್ತು ಅವರ ಮೊದಲ ಪತಿ ಭಾಸ್ಕರ್ ದಂಪತಿಯ ಮಗಳು ಐಶ್ವರ್ಯಾ. 1969ರಲ್ಲಿ ಭಾಸ್ಕರ್ ಮತ್ತು ಲಕ್ಷ್ಮೀ ಹೊಸ ಜೀವನಕ್ಕೆ ಕಾಲಿಟ್ಟರು, ಆ ಹೊಸ ಜೀವನ ಅವರನ್ನು ಅಪ್ಪಿಕೊಳ್ಳಲಿಲ್ಲ, ಹಾಗಾಗಿ 1974ರಲ್ಲಿ ದೂರವಾದರು. ಅಷ್ಟರಲ್ಲೆ ಈ ದಂಪತಿಗೆ ಐಶ್ವರ್ಯ ಹುಟ್ಟಿದ್ದರು.
ಲಕ್ಷ್ಮೀ ಅವರ ಪುತ್ರಿ ಐಶ್ವರ್ಯಾ ಭಾಸ್ಕರನ್ ಇದೀಗ ಕೆಲಸವಿಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅವರೆ ಚಾನೆಲ್ ಒಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ನಾನು ಒಂದ್ಹೊತ್ತು ಮಾತ್ರ ಊಟ ಮಾಡುತ್ತೇನೆ, ಚಿಕ್ಕದೊಂದು ಮನೆಯಲ್ಲಿ ವಾಸವಾಗಿರುವೆ, ಈಗ ಬದುಕನ್ನು ನಡೆಸಲು ಸಾಬೂನು ಮಾರುತ್ತಿದ್ದೇನೆ. ಮನೆಯಾಚೆ ನಗುತ್ತಿದ್ದವಳು, ಮನೆಗೆ ಬಂದ ಮೇಲೆ ದುಃಖಿಸುತ್ತೇನೆ. ನನ್ನ ಬದುಕು ಸರಿ ಹೋಗಬೇಕು ಎಂದರೆ ಒಂದೊಳ್ಳೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗಬೇಕು ಎಂದು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ನಟಿ ಐಶ್ವರ್ಯಾ ಭಾಸ್ಕರನ್ ಸೌತ್ ಸಿನಿಮಾಗಳಲ್ಲಿ ನಟಿಯಾಗಿ ಗಮನ ಸೆಳೆದಿದ್ದಾರೆ.
ಕನ್ನಡದ ಹೊಸ ಕಾವ್ಯ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸಿದ್ದಾರೆ. ನರಸಿಂಹಂ, ಸತ್ಯಮೇವ ಜಯತೇ, ಪ್ರಜಾ, ದಿ ಫೈರ್, ನೋಟ್ ಬುಕ್‌ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ನಟಿ ಐಶ್ವರ್ಯಾ ಈಗ ಹೊಟ್ಟೆಪಾಡಿಗಾಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ. ಅವಕಾಶಗಳ ಕೊರತೆಯಿಂದ ಜೀವನ ನಿರ್ವಹಣೆಗೆ ಸಾಬೂನು ಮಾರಾಟಕ್ಕಿಳಿದಿದ್ದಾರೆ. ಇತ್ತೀಚೆಗಷ್ಟೆ ನೀಡಿದ ಸಂದರ್ಶನವೊಂದರಲ್ಲಿ ಐಶ್ವರ್ಯಾ ತಮ್ಮ ಖಾಸಗಿ ಜೀವನದ ನಿರ್ವಹಣೆಯ ಕುರಿತು ಮಾತನಾಡಿದ್ದಾರೆ. ನನಗೆ ಈಗ ಕೆಲಸವಿಲ್ಲ ಜತೆಗೆ ಜೀವನ ನಿರ್ವಹಣೆಗೆ ಹಣವಿಲ್ಲ ಮತ್ತು ಸಾಬೂನು ಮಾರುತ್ತಾ ಬೀದಿಗಳಲ್ಲಿ ವಾಸಿಸುತ್ತಿದ್ದೇನೆ.
ನನಗೆ ಸಿನಿಮಾ ಮಾಡಲು ಆಸಕ್ತಿಯಿದೆ ಯಾರಾದರೂ ಸಿನಿಮಾಗಾಗಿ ಕರೆ ಮಾಡುತ್ತಾರೆ ಎಂಬ ಭರವಸೆಯಿದೆ ಎಂದು ನಟಿ ಐಶ್ವರ್ಯಾ ಮುಕ್ತವಾಗಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ಒಟ್ಟಿನಲ್ಲಿ ಏನೆ ಇದ್ದರೂ ಮಾದರಿಯಾಗಿ ಬದುಕುತ್ತಿರುವ ನಟಿಯ ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವಕಾಶದ ಕೊರತೆಯಿಂದ ಎಲ್ಲರಿಗೂ ಕಷ್ಟವಾಗುತ್ತದೆ ನಟಿ ಐಶ್ವರ್ಯಾ ಅವರಿಗೆ ಅವಕಾಶ ಸಿಗಲಿ ಎಂದು ಆಶಿಸೋಣ.