ನಗುಮುಖದ ಸರಳ ವ್ಯಕ್ತಿತ್ವ ಹೊಂದಿರುವ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸರಳ ಸ್ವಭಾವವನ್ನು ಹೊಂದಿರುವುದರೊಂದಿಗೆ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದರು. ಅವರು ಸಹಾಯ ಮಾಡಿರುವ ವಿಷಯವನ್ನು ಎಲ್ಲಿಯೂ ಪ್ರಚಾರ ಮಾಡುತ್ತಿರಲಿಲ್ಲ ಅವರು ಹಠಾತ್ತನೆ ನಿಧನರಾಗಿ ನಮ್ಮನ್ನು ಬಿಟ್ಟು ಹೋದ ನಂತರ ಅವರು ಮಾಡಿರುವ ಸಹಾಯದ ಬಗ್ಗೆ ಎಲ್ಲರಿಗೂ ತಿಳಿಯುತ್ತಿದೆ. ಅವರ ಮೇರು ವ್ಯಕ್ತಿತ್ವಕ್ಕೆ ಇರುವ ಒಂದು ನಿದರ್ಶನವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟ ಪುನೀತ್​ ರಾಜ್​ಕುಮಾರ್​​ ಅವರು ಕೊರೋನ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಕೊರೋನ ಜಾಗೃತಿಗಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಸ್ಯಾಂಡಲ್‌ವುಡ್ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಅವರು ಪುನೀತ್ ಅವರ ಸಾಮಾಜಿಕ ಕಳಕಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅಪ್ಪು ಸರ್ ಜೊತೆಗೆ ಕೊರೋನ ಜಾಗೃತಿ ಅಭಿಯಾನದ ಪ್ರೋಮೊ ಶೂಟ್ ಮಾಡಲಾಗಿತ್ತು. ಈ ವೇಳೆ ಅಪ್ಪು ಸರ್​ ಹಣ ಪಡೆಯಲು ನಿರಾಕರಿಸಿದ್ದರು ಇದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಇ-ಸೈಕಲ್ ನೀಡಲು ನಿರ್ಧರಿಸಿದ್ದರು.

ಅಪ್ಪು ಅನಗತ್ಯ ಉಡುಗೊರೆ ಎಂದು ಭಾವಿಸದೆ ಅವರು ಇ-ಸೈಕಲ್ ಅನ್ನು ಕುತೂಹಲದಿಂದ ನೋಡಿದರು ಅಲ್ಲದೆ ಅವರಿಗೆ ಇಷ್ಟವಾಯಿತು, ನಿರ್ದೇಶಕರಿಗೆ ಹಾಗೂ ತಂಡದವರಿಗೆ ಧನ್ಯವಾದ ತಿಳಿಸಿದರು. ಮಕ್ಕಳಂತೆ ಇ-ಸೈಕಲ್​ಅನ್ನು ರೈಡ್ ಮಾಡುತ್ತಿದ್ದರು ಎಂದು ನಿತಿನ್ ಕೃಷ್ಣಮೂರ್ತಿ ಅವರು ಪೋಸ್ಟ್​ ಮಾಡಿದ್ದಾರೆ.

ಅಪ್ಪು ಅವರು ಕಷ್ಟವನ್ನು ಕಂಡವರಲ್ಲ ಆದರೂ ಒಮ್ಮೆಯೂ ಅಹಂಕಾರದಿಂದ ನಡೆದುಕೊಂಡಿಲ್ಲ. ಸೈಕಲ್ ಉಡುಗೊರೆಯನ್ನು ಪ್ರೀತಿಯಿಂದ ಸ್ವೀಕರಿಸಿರುವುದು ಅವರ ಸರಳತೆಗೆ ಸಾಕ್ಷಿಯಾಗಿದೆ. ಅವರ ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕೂ ಹೆಚ್ಚು ಜನ ಸೇರಿರುವುದು ಅವರನ್ನು ಎಷ್ಟು ಜನರು ಪ್ರೀತಿಸುತ್ತಿದ್ದರು ಎಂಬುದು ತಿಳಿಯುತ್ತದೆ. ಮಣ್ಣಲ್ಲಿ ಮಣ್ಣಾದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!