ತಾಯಿಯಾಗುವುದು ಪ್ರತಿಯೊಂದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಇದೊಂದು ದೊಡ್ಡ ಆಘಾತವೇ ಸರಿ.
ಇದರಿಂದ ಮಹಿಳೆಯರು ಹೊರಬರುವುದು ಬಹಳ ಕಷ್ಟಕರವಾದ ವಿಷಯ. ದೇವರ ಅನುಭೂತಿಯಿಂದ ತಾಯಿಯಾಗುವ ಭಾಗ್ಯ ದೊರೆಯುತ್ತದೆ. ಕಳೆದ ಕೆಲವು ದಶಕಗಳಲ್ಲಿ, ಹೆರಿಗೆಯ ವಿಷಯದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಹೆಚ್ಚಿನ ಮಹಿಳೆಯರು ತಮ್ಮ ವೃತ್ತಿ ಅಥವಾ ವಿವಾಹ ವಿಳಂಬದಿಂದಾಗಿ ತಡವಾಗಿ ಗರ್ಭಿಣಿಯಾಗಲು ಬಯಸುತ್ತಾರೆ. ಆದರೆ ಇಲ್ಲೊಂದು ಮಹಿಳೆಗೆ ಆಕೆಯ 70ನೆ ವಯಸ್ಸಿನಲ್ಲಿ ಮೊದಲ ಮಗು ಜನಿಸಿದೆ. ಆ ಮಹಿಳೆ ಯಾರೂ? ಈ ಘಟನೆ ನಡೆದಿದ್ದು ಎಲ್ಲಿ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಗು ಹೆರುವುದು ತೀರಾ ಸಾಮಾನ್ಯವಾದ ವಿಷಯ ಆಗಿತ್ತು. ಇದಕ್ಕಾಗಿ ಯಾರೂ ಕೂಡ ಆಸ್ಪತ್ರೆಗಳ ಮೊರೆ ಅಥವಾ ವೈದ್ಯರ ಮೊರೆ ಹೋಗುತ್ತಿರಲಿಲ್ಲ. ಶೇಕಡಾ 95 ರಷ್ಟು ಮಕ್ಕಳು ಆರೋಗ್ಯವಾಗಿ ಮನೆಯಲ್ಲೇ ಜನಿಸುತ್ತಿದ್ದವು. ತೀರಾ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರವೇ ವೈದ್ಯರ ಅಗತ್ಯತೆ ಬೀಳುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಮ್ಮ ಆಧುನಿಕ ಜೀವನ ಶೈಲಿ, ಒತ್ತಡ, ಆತಂಕ, ನಮ್ಮ ಆಹಾರ ಕ್ರಮಗಳು, ಅನಗತ್ಯ ತೂಕ ಗಳಿಕೆ, ದೈಹಿಕ ಶ್ರಮ ಇಲ್ಲದ ಕೆಲಸಗಳು ಎಲ್ಲವೂ ನಮ್ಮನ್ನು ಉತ್ತಮ ಆರೋಗ್ಯದಿಂದ ದೂರ ಕರೆದೊಯ್ಯುವ ಕೆಲಸವನ್ನು ಮಾಡುತ್ತಿವೆ.
ಇದಕ್ಕಾಗಿ ನಾವು ಇಷ್ಟೆಲ್ಲಾ ರೋಗಗಳ ಮೂಲ ಆಗುತ್ತಿದ್ದೇವೆ. ಮಗುವೊಂದಕ್ಕೆ ಉತ್ತಮ ಆರೋಗ್ಯದೊಂದಿಗೆ ಜನನ ನೀಡುವುದೇ ಇಂದಿನ ಪ್ರಪಂಚದ ಸವಾಲಾಗಿದೆ. ಅದೇ ರೀತಿ ವೈದ್ಯ ಲೋಕಕ್ಕೆ ಸವಾಲೊಡ್ಡುವ ರೀತಿಯಲ್ಲಿ ಈ ಮಹಿಳೆ ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ತನ್ನ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈ ವಿಚಿತ್ರ ಘಟನೆ ನಡೆದಿರುವುದು ಗುಜರಾತ್‍ನ ಕಛ್‍ನಲ್ಲಿ.
ಈ ಮಹಿಳೆಯ ಹೆಸರು ಜಿವುಬೆನ್ ವಾಲಾಭಾಯಿ ರಬಾರಿ ಎಂದು. ಈಕೆಯೇ ತನ್ನ 70 ನೇ ವರ್ಷಕ್ಕೆ ಮಗುವಿಗೆ ಜನ್ಮ ಕೊಟ್ಟಿದ್ದ ಮಹಿಳೆ. ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಆಕೆ ಹಾಗೂ ಆಕೆಯ ವೈದ್ಯರು ಹೇಳುವ ಪ್ರಕಾರ ತಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎಂದು ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ವೈದ್ಯರು ಮಣಿಯಲೇ ಬೇಕಾಯಿತು. ಹಾಗಾಗಿ ಈ ಕಾರಣಕ್ಕೆ ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ.
ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‍ಗೆ ಸಲಹೆ ನೀಡಿದ್ದೇವು. ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಸಾಕಷ್ಟು ಭಾವುಕರಾಗಿದ್ದರು ಎಂದು ವೈದ್ಯರು ಹೇಳಿದ್ದಾರೆ. ಇವರಿಗೆ ವೈದ್ಯರು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದರು. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದಾರೆ.
ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ ಹೇಳಿದ್ದಾರೆ. ಎರಡು ವಾರಗಳ ನಂತರ ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತು. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತವನ್ನು ಕಂಡುಕೊಂಡ ವೈದ್ಯರು ಮಗುವಿನ ಬೆಳವಣಿಗೆಯಲ್ಲಿ ಯಾವುದೇ ದೋಷ ಕಾಣಲಿಲ್ಲ ಈ ಕಾರಣಕ್ಕೆ ಗರ್ಭಧಾರಣೆಯೊಂದಿಗೆ ಮುಂದುವರೆದೆವು ಎಂದು ಹೇಳಿದ್ದಾರೆ. ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430