ನಮ್ಮಲ್ಲಿ ಬಹಳಷ್ಟು ಜನ ರೈತರಿಗೆ ಪೋಡಿಯ ಬಗ್ಗೆ ಗೊತ್ತಿರುವುದಿಲ್ಲ ಪೋಡಿ ಎಂದರೇನು ಅದನ್ನು ಏಕೆ ಮಾಡಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಪೋಡಿಎಂದರೆ ಒಂದೇ ಪಹಣಿಯಲ್ಲಿ ಬಹು ಮಾಲಿಕರು ಬರುತ್ತಿರುತ್ತಾರೆ ಇಂತಹ ಸಂದರ್ಭದಲ್ಲಿ ರೈತರಿಗೆ ಬಹಳ ಕಿರಿಕಿರಿ ಉಂಟಾಗುತ್ತದೆ ಈ ಬಹುಮಾಲೀಕತ್ವದ ಪಹಣಿಯನ್ನು ಏಕ ಮಾಲೀಕತ್ವದ ಪಹಣಿಯನ್ನಾಗಿ ಮಾಡುವುದೇ ಪೋಡಿ ಪ್ರಕ್ರಿಯೆ. ಈ ಪೋಡಿ ಪ್ರಕ್ರಿಯೆಯನ್ನು ಮಾಡುವಾಗ ನಿಮಗೆ ಏನೆಲ್ಲಾ ಕಾಗದಪತ್ರಗಳು ಬೇಕಾಗುತ್ತವೆ ಎಂಬುದನ್ನು ಮತ್ತು ಅದನ್ನು ಹೇಗೆ ಮಾಡಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..
ಕೆಲವೊಂದು ಪಹಣಿಗಳಲ್ಲಿ ಒಂದೇ ಸರ್ವೇ ನಂಬರ್ ನಲ್ಲಿ ಮೂರು ನಾಲ್ಕು ಜನ ಮಾಲೀಕರು ಇರುತ್ತಾರೆ ಆದ್ದರಿಂದ ಅದು ಬಹು ಮಾಲಿಕತ್ವದ ಪಹಣಿಯಾಗುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ ಅದು ಬಹಳ ಕಿರಿಕಿರಿಯನ್ನುಂಟು ಮಾಡುತ್ತದೆ ಬ್ಯಾಂಕಿನ ಕೆಲಸ ಇರಬಹುದು ಜಮೀನಿನ ನಕ್ಷೆ ತಯಾರಿಸುವ ಕೆಲಸ ಇರಬಹುದು ಈ ರೀತಿಯ ಕೆಲಸಗಳಿಗೆ ಬಹಳ ಕಿರಿಕಿರಿ ಉಂಟಾಗುತ್ತದೆ. ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ರೈತರು ಪೋಡಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಪೋಡಿಯಲ್ಲಿ ನಾಲ್ಕು ವಿಧಗಳಿರುತ್ತವೆ ಒಂದನೆಯದು ತತ್ಕಾಲ್ ಪೋಡಿ ಎರಡನೆಯದು ಧರ್ಕಸ್ತ್ ಫೋಡಿ ಮೂರನೆಯದು ಅಲಿನೇಷನ್ ಪೋಡಿ ನಾಲ್ಕನೆಯದು ಮ್ಯುಟೆಶನ್ ಪೋಡಿ.
ನೀವು ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾಗಿದ್ದು ತತ್ಕಾಲ್ ಪೋಡಿ ಬಗ್ಗೆ ಈ ಒಂದು ತತ್ಕಾಲ್ ಪೋಡಿ ಮೂಲಕವೇ ರೈತರು ತಮ್ಮ ಪಹಣಿಯಲ್ಲಿರುವ ಬಹು ಮಾಲೀಕತ್ವವನ್ನು ಅಳಿಸಿ ಏಕ ಮಾಲಿಕತ್ವವನ್ನು ಪಡೆದುಕೊಳ್ಳಬಹುದು ಅಂದರೆ ಭೂಮಾಲೀಕತ್ವ ಹೆಸರು ಒಂದೇ ಪಹಣಿಯಲ್ಲಿ ಬಂದಿರುತ್ತದೆ. ಜಮೀನಿನ ಕಾನೂನಿನ ಪ್ರಕಾರ ಜಮೀನು ಯಾರ ಹೆಸರಿನಲ್ಲಿದೆ ಅದರ ಇಚ್ಛೆಯ ಪ್ರಕಾರ ಭೂಮಿಯನ್ನು ಅಳತೆ ಮಾಡಿ ಗುರುತಿಸಿ ಅಲ್ಲಿ ಒಂದು ನಕ್ಷೆಯನ್ನು ತಯಾರಿಸಿ ಅದಕ್ಕೆ ತತ್ಕಾಲ್ ಪೋಡಿ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಹೀಗೆ ಮಾಡಿರುವ ಜಮೀನಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಪ್ರತ್ಯೇಕ ಪಾಣಿ ಅಥವಾ ಏಕ ಮಾಲೀಕತ್ವದ ಪಾಣಿಯನ್ನು ನೀಡಲಾಗುತ್ತದೆ ಇದಕ್ಕೆ ತತ್ಕಲ್ ಫೋಡಿ ಎಂದು ಕರೆಯಲಾಗುತ್ತದೆ.
ತತ್ಕಾಲ್ ಪೋಡಿಗಾಗಿ ರೈತರು ತಹಶೀಲ್ದಾರ್ ಕಚೇರಿ ಅಥವಾ ತಾಲೂಕ ಕಛೇರಿಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವಾಗ ಪಹಣಿಯ ಜೊತೆ ಆಧಾರ್ ಕಾರ್ಡನ್ನು ಕೊಡಬೇಕಾಗುತ್ತದೆ ಇದಕ್ಕೆ ಸುಮಾರು ಸಾವಿರದ ಎರಡು ನೂರರಿಂದ ಸಾವಿರದ ಐದುನೂರರವರೆಗೆ ರೈತರಿಗೆ ಖರ್ಚು ಬೀಳುತ್ತದೆ. ಈ ಒಂದು ಪೋಡಿಯನ್ನು ಮಾಡಿಸುವಾಗ ಕೆಲವೊಂದು ಸಾರಿ ತಾಲೂಕಾ ಕಚೇರಿಯಲ್ಲಿ ಆಕಾರ ಬಂದ್ ಮತ್ತು ಟಿಪ್ಪಣಿಗಳ ಬಗ್ಗೆ ಮಾಹಿತಿಯನ್ನು ಕೇಳುತ್ತಾರೆ. ಈ ಒಂದು ಅರ್ಜಿಯನ್ನು ಸಲ್ಲಿಸಿದ ನಂತರ ಒಂದೇ ಪಹಣಿಯಲ್ಲಿ ಬೇರೆಬೇರೆ ಮಾಲೀಕತ್ವ ಇರುವುದು ಹೋಗಿ ನಿಮಗೆ ಸಪರೇಟ್ ಆಗಿರುವಂತಹ ಹಿಸ್ಸಾ ನಂಬರ್ ಸಿಗುತ್ತದೆ ಮತ್ತು ಸಪರೇಟ್ ಆಗಿರುವಂತ ಪಹಣಿ ಪತ್ರಿಕೆ ಸಿಗುತ್ತದೆ ಇದರಿಂದ ನೀವು ಸುಲಭವಾಗಿ ಪಹಣಿಯನ್ನು ಪಡೆಯಬಹುದು.
ಏಕ ಮಾಲೀಕತ್ವದ ಪಹಣಿ ನಿಮ್ಮ ಬಳಿ ಇದ್ದಾಗ ಅದರಿಂದ ನಿಮಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗುವುದಿಲ್ಲ ನೀವು ಜಮೀನನ್ನು ಮಾರಬೇಕೆಂದು ಕೊಂಡಿದ್ದಾಗ ಬಹುಮಾಲಿಕತ್ವ ಇದ್ದರೆ ಅಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಆದರೆ ಏಕಮಾಲೀಕತ್ವ ಇರುವಾಗ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಅದೇ ರೀತಿಯಾಗಿ ನೀವು ಬೆಳೆಸಾಲ ಕಿಸಾನ್ ಕ್ರೆಡಿಟ್ ಕಾರ್ಡ್ ಬೆಳೆ ವಿಮೆ ಇವುಗಳನ್ನೆಲ್ಲ ಮಾಡಿಸಲು ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಅಲ್ಲದೆ ನಿಮ್ಮ ಭೂಮಿ ಎಷ್ಟಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸುಲಭವಾಗುತ್ತದೆ ಕೃಷಿ ಸಂಬಂಧಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಇದು ಸಹಾಯವಾಗುತ್ತದೆ. ಸ್ನೇಹಿತರೆ ನಿಮ್ಮದು ಬಹು ಮಾಲಿಕತ್ವದ ಪಹಣಿಯಾಗಿದ್ದರೆ ಈ ಒಂದು ಮಾಹಿತಿಯ ಲಾಭವನ್ನು ನೀವು ಪಡೆದುಕೊಳ್ಳಿ ಜೊತೆಗೆ ನಿಮ್ಮ ಸ್ನೇಹಿತರಿಗೂ ಇದರ ಬಗ್ಗೆ ತಿಳಿಸಿ.