ನಾವಿಂದು ನಿಮಗೆ ಪೂರ್ವ ಕರಾವಳಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಪೂರ್ವ ಕರಾವಳಿ ರೈಲ್ವೆ ಇಲಾಖೆಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದಂತಹ ಲಿಖಿತ ಪರೀಕ್ಷೆ ಸಂದರ್ಶನ ಇರುವುದಿಲ್ಲ ಮೆರಿಟ್ ಲಿಸ್ಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪೂರ್ವ ಕರಾವಳಿ ರೈಲ್ವೆ ಇಲಾಖೆಯ ನೇಮಕಾತಿಯ ಸೆಲ್ ಭುವನೇಶ್ವರ ಆಗಿರುತ್ತದೆ. ಪೂರ್ವ ಕರಾವಳಿ ರೈಲ್ವೆ ಇಲಾಖೆಯಲ್ಲಿ ಒಟ್ಟು ಏಳುನೂರ ಐವತ್ತಾರು ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಇಲಾಖೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಈ ಒಂದು ಹುದ್ದೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ 8 ಫೆಬ್ರುವರಿ 2022 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಹ ಆಸಕ್ತ ಅಭ್ಯರ್ಥಿಗಳು ಮಾರ್ಚ್ 7 2022ರ ವರೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಕರಾವಳಿ ರೈಲ್ವೆ ಇಲಾಖೆಯಲ್ಲಿ ಯಾವ ಹುದ್ದೆಗಳು ಎಷ್ಟು ಖಾಲಿ ಇವೆ ಎಂಬುದನ್ನು ನೋಡುವುದಾದರೆ ಕ್ಯಾರೇಜ್ ರಿಪೇರಿ ಕಾರ್ಯಗಾರ ಭುವನೇಶ್ವರ ಹಾಗೂ ಮಂಜೇಶ್ವರದಲ್ಲಿ ನೂರಾ ತೊಂಬತ್ತು ಹುದ್ದೆಗಳು ಖುರ್ದಾ ರಸ್ತೆ ವಿಭಾಗದಲ್ಲಿ ಎರಡು ನೂರಾ ಮೂವತ್ತೇಳು ಹುದ್ದೆಗಳು ವಾಲ್ಟೆರ್ ವಿಭಾಗದಲ್ಲಿ ಎರಡು ನೂರಾ ಅರವತ್ಮುರು ಉದ್ದೆಗಳು ಸಂಬಲ್ಪುರ ವಿಭಾಗದಲ್ಲಿ ಅರವತ್ತಾರು ಹುದ್ದೆಗಳು ಈ ರೀತಿಯಾಗಿ ಒಟ್ಟು ಏಳು ನೂರಾ ಐವತ್ತಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಯಾವ ರೀತಿಯಾಗಿರಬೇಕು ಎಂಬುದನ್ನು ನೋಡುವುದಾದರೆ ಅಭ್ಯರ್ಥಿಯು ಹತ್ತನೇ ತರಗತಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ ಐವತ್ತು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ಎನ್ ಸಿ ವಿ ಟಿ ಅಥವಾ ಎಸ್ ಸಿ ವಿ ಟಿ ಹೊರಡಿಸಿದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು.
ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹದಿನೆಂಟು ವರ್ಷ ಮೇಲ್ಪಟ್ಟವರು ಹಾಗೂ ಇಪ್ಪತ್ನಾಲ್ಕು ವರ್ಷ ಒಳಗಿನವರ ಆಗಿರಬೇಕು. ಇನ್ನು ಅರ್ಜಿ ಶುಲ್ಕವನ್ನು ನೋಡುವುದಾದರೆ ಎಸ್ಸಿ-ಎಸ್ಟಿ ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕ ಇರುವುದಿಲ್ಲ ಹಾಗೂ ಉಳಿದ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಆರ್ ಆರ್ ಸಿ, ಇ ಸಿ ಆರ್ ಅಪ್ರೆಂಟಿಸ್ ನೇಮಕಾತಿ ಯಾವ ರೀತಿಯಾಗಿರುತ್ತದೆ ಎಂದರೆ ಅಭ್ಯರ್ಥಿಯ ಮೆಟ್ರಿಕ್ಯುಲೇಶನ್ ಶೇಕಡವಾರು ಅಂಕಗಳ ಅಂಕಗಳ ಆಧಾರದ ಮೇಲೆ ಮತ್ತು ಅಪ್ರೆಂಟಿಸ್ ಶಿಪ್ ಮಾಡಬೇಕಾದ ಟ್ರೆಡ್ ನಲ್ಲಿ ಐಟಿಐ ಅಂಕಗಳ ಆಧಾರದ ಮೇಲೆ ತಯಾರಿಸಲಾದ ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ ಫಲಕವು ಮೆಟ್ರಿಕ್ಯುಲೇಷನ್ ಮತ್ತು ಐಟಿಐಯಲ್ಲಿನ ಅಂಕಗಳ ಸರಳ ಸರಾಸರಿ ಆಧಾರದ ಮೇಲೆ ಇರುತ್ತದೆ.
ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಪೂರ್ವ ಕರಾವಳಿ ರೈಲ್ವೆ ವಿಭಾಗದಲ್ಲಿ ನಡೆಯುತ್ತಿರುವ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಕೂಡ ಉದ್ಯೋಗವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.