ಮಾರುತಿ ಸುಜುಕಿ ಕಂಪನಿಯಲ್ಲಿ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿ ನಡೆಯುತ್ತಿದ್ದು ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಯಾವ ವಯಸ್ಸಿನವರು ಅರ್ಜಿಯನ್ನು ಸಲ್ಲಿಸಬೇಕು ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಶಾಖೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಕಡೆಯಿಂದ ನೇಮಕಾತಿ ನಡೆಯುತ್ತಿದ್ದು ಪುರುಷ ಮತ್ತು ಮಹಿಳೆ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಾರುತಿ ಸುಜುಕಿ ಅರೆನ RNS ಮೋಟಾರ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಮಾರುತಿ ಸುಜುಕಿಯ ಯಾವ-ಯಾವ ಶಾಖೆಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ನೋಡುವುದಾದರೆ ಹುಬ್ಬಳ್ಳಿ-ಬೆಂಗಳೂರು ಗದಗ ವಿಜಯಪುರ ಶಿರಸಿ ಮತ್ತು ಮುರುಡೇಶ್ವರ ಶಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅನುಭವ ಇಲ್ಲದವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂದು ಆರ್ ಎನ್ ಎಸ್ ಮೋಟಾರ್ಸ್ ಪ್ರಕಟಿಸಿದೆ.
ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡುವುದಾದರೆ ಸೇಲ್ಸ್ ಮ್ಯಾನೇಜರ್, ಟೀಮ್ ಲೀಡರ್, ಫೀಲ್ಡ್ ಸೆಲ್ಸ್ ಎಕ್ಸಿಕ್ಯೂಟಿವ್, ಶೋರೂಮ್ ಎಕ್ಸಿಕ್ಯೂಟಿವ್, ಕಸ್ಟಮರ್ ಕೇರ್ ಮ್ಯಾನೇಜರ್, ವರ್ಕ್ಸ್ ಮ್ಯಾನೇಜರ್, ಅಡ್ವೈಸರ್, ಟೆಕ್ನಿಷಿಯನ್, ಬಾಡಿ ಸಾಫ್ಟ್ ಮ್ಯಾನೇಜರ್ ಪೈಂಟರ್ ಎಚ್ಆರ್ ಮ್ಯಾನೇಜರ್ ಜೊತೆಗೆ ಇನ್ನೂ ಕೆಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮಾರುತಿ ಸುಜುಕಿಯ ವಿವಿಧ ಶಾಖೆಗಳಲ್ಲಿ ಅನೆಕ ಹುದ್ದೆಗಳು ಖಾಲಿಯಿದ್ದು ಪದವಿ ಅಥವಾ ಇತರ ಯಾವುದೇ ಶಿಕ್ಷಣವನ್ನು ಮುಗಿಸಿರುವವರು ಅರ್ಜಿಯನ್ನು ಸಲ್ಲಿಸಬಹುದು.
ಈಗಾಗಲೇ ಕೆಲಸದಲ್ಲಿ ಅನುಭವ ಇರುವವರು ಮತ್ತು ಹೊಸದಾಗಿ ಕೆಲಸಕ್ಕೆ ಸೇರುವವರು ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಮಾರುತಿ ಸುಜುಕಿ ಆರ್ ಎನ್ ಎಸ್ ಮೋಟಾರ್ಸ್ ರಿಕ್ರೂಟ್ಮೆಂಟ್ ಎರಡು ಸಾವಿರದ ಇಪ್ಪತ್ತೆರಡರ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು ಮತ್ತು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಕಲರ್ ಫೋಟೋ ಇರುವಂತಹ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಬೇಕು. ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಮಾರುತಿ ಸುಜುಕಿ ಕಂಪನಿಯಲ್ಲಿ ನಡೆಯುತ್ತಿರುವ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿರಿ.