ಕೆಲವೊಂದು ಆಚರಣೆಗಳನ್ನು ನಾವು ನಮ್ಮ ಪೂರ್ವಜರ ಕಾಲದಿಂದಲೂ ನಂಬಿಕೊಂಡು ಬರುತ್ತಾ ಇದ್ದೇವೆ. ಆದರೆ ಅವುಗಳ ಹಿಂದಿರುವ ಕಾರಣ ಏನು ಅನ್ನೋದನ್ನ ಮಾತ್ರ ತಿಳಿಯೋದಿಲ್ಲ. ಪೂರ್ವಜರು ಮಾಡಿದ ಆಚರಣೆಗಳ ಹಿಂದೆ ಕೆಲವು ಬಲವಾದ ಕಾರಣಗಳು ಇರುತ್ತವೆ. ಇಂತಹ ಒಂದು ಆಚರಣೆ ಅಥವಾ ಮೂಢ ನಂಬಿಕೆಯಲ್ಲಿ ಬಾಗಿಲಿಗೆ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿ ಕಟ್ಟುವುದು. ಇದನ್ನ ಒಂದು ಸಂಪ್ರದಾಯ ಎಂಬಂತೆ ಆಗಿನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಾ ಇದ್ದಾರೆ.
ಪ್ರತೀ ಅಂಗಡಿಗಳ ಮುಂದೆ ಮಾಲೀಕರು ಒಂದು ನಿಂಬೆ ಹಣ್ಣು ಮತ್ತು ಏಳು ಮೆಣಸಿನ ಕಾಯಿಗಳನ್ನು ದಾರದಲ್ಲಿ ಕಟ್ಟಿ ನೇತು ಹಾಕಿಡುತ್ತಾರೆ. ಹಾಗೆ ಕೆಲವೊಂದು ವಾಹನಗಳಲ್ಲಿ ಸಹ ಹೀಗೆ ನಿಂಬೆ ಹಣ್ಣನ್ನು ಕಟ್ಟಿ ಇರುವುದನ್ನು ನೋಡಿರುತ್ತೇವೆ. ಆದರೆ ಕೆಲವೊಂದಿಷ್ಟು ಜನರಿಗೆ ಯಾಕೆ ಹೀಗೇ ನಿಂಬೆ ಹಣ್ಣು ಮತ್ತು ಮೆಣಸಿನಕಾಯಿಗಳನ್ನು ಕಟ್ಟುತ್ತಾರೆ ಎಂಬುದು ತಿಳಿದಿರುವುದಿಲ್ಲ. ಇದರ ಬಗ್ಗೆ ತಿಳಿದುಕೊಂಡು ನೀವು ಕೂಡ ಇದನ್ನು ಅನುಸರಿಸುತ್ತೀರ ಅನ್ನುವ ನಂಬಿಕೆಯಿಂದ ಇದರ ಬಗ್ಗೆ ತಿಳಿಸಿಕೊಡುತ್ತೀವಿ.
ನಿಜವಾಗಲೂ ಬಾಗಿಲಿಗೆ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿ ಕಟ್ಟುವುದು ನಮ್ಮ ಆಚರಣೆ ಸಂಪ್ರದಾಯದಲ್ಲಿ ಇದೆ. ಸಾಂಪ್ರಾದಾಯಿಕ ಕಾರಣವಾಗಿ ಹೇಳೋದಾದ್ರೆ, ದುರದೃಷ್ಟ ದೇವತೆ ವ್ಯಾಪಾರಸ್ಥರಿಗೆ ನಷ್ಟವನ್ನುಂಟು ಮಾಡುತ್ತಾಳೆ. ಅಂತಹ ದೇವತೆಗಳೂ ಅಂಗಡಿಯೊಳಗೆ ಕಾಲಿಡದಂತೆ ಬಾಗಿಲಿಗೆ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಗಳನ್ನು ಕಟ್ಟುತ್ತಾರೆ. ಅಷ್ಟ ಲಕ್ಷ್ಮಿ ಗೆ ಹುಳಿ ಖಾರದ ಪದಾರ್ಥಗಳು ಇಷ್ಟ ಆಗಿರುವುದರಿಂದ ತನಗೆ ಇಷ್ಟವಾದ ಪದಾರ್ಥಗಳನ್ನು ತಿಂದು ಹೋಗುತ್ತಾಳೆ ಎನ್ನುವ ನಂಬಿಕೆ. ಹೀಗೆ ಬಾಗಿಲ ಹೊರಗೆ ಹುಳಿ ಖಾರದ ಪದಾರ್ಥಗಳನ್ನು ತಿಂದು ಒಳಗೆ ಬರುವ ಪ್ರಾಚೋದನೆಯನ್ನು ಕಳೆದುಕೊಳ್ಳುತ್ತಾರೆ. ಇದರಿಂದ ದುರದೃಷ್ಟ ದೇವತೆ ಒಳಗೆ ಪ್ರವೇಶಿಸುವುದಿಲ್ಲ. ತನ್ನ ದುಷ್ಟ ಕಣ್ಣಿನಿಂದ ಅಂಗಡಿಗಳ ಮೇಲೆ ದೃಷ್ಟಿ ಬೀಳದೆ ಹೋಗಲಿ ಎಂದು ಆಗಿನ ಕಾಲದಿಂದಲೂ ನಂಬಿಕೆ ಇದೆ. ಐಶ್ವರ್ಯವನ್ನು ಕರುಣಿಸುವ ಮಹಾಲಕ್ಷ್ಮಿಯ ಸಹೋದರಿಯೇ ಹಾ ಲಕ್ಷ್ಮಿ. ಜ್ಯೇಷ್ಠ ಮಹಾಲಕ್ಷ್ಮಿಯನ್ನು ಹಾ ಲಕ್ಷ್ಮಿ ಎಂದು ಕರೆಯುತ್ತಾರೆ. ಹಾ ಲಕ್ಷ್ಮಿಯು ಸಿಹಿ ಪದಾರ್ಥಗಳನ್ನು ಇಷ್ಟ ಪಡದ ಕಾರಣ ಹಿಂದೂ ಹಬ್ಬಗಳಲ್ಲಿ ಹಾ ಲಕ್ಷ್ಮಿ ಬರಬಾರದು ಎಂದು ಹುಳಿ ಪದಾರ್ಥಗಳ ಬದಲು ಸಿಹಿ ಪದಾರ್ಥಗಳನ್ನು ಮಾಡುತ್ತಾರೆ. ಹಾಗಾಗಿ ಹಬ್ಬಗಳಲ್ಲಿ ಹೆಚ್ಚು ಖಾರ ಹುಳಿ ಪದಾರ್ಥಗಳ ಬದಲು ಸಿಹಿ ಪದಾರ್ಥಗಳನ್ನು ಮಾಡುತ್ತಾರೆ.
ವಾಹನಗಳಿಗೆ ನಿಂಬೆ ಹಣ್ಣನ್ನು ಮತ್ತು ಮೆಣಸಿನ ಕಾಯಿ ಕಟ್ಟಲು ಕಾರಣ, ಹಿಂದೆ ಈಗಿನಷ್ಟು ರಸ್ತೆಗಳು ಅಭಿರ್ವದ್ಧಿ ಆಗಿರಲಿಲ್ಲ. ಘಟ್ಟದ ರಸ್ತೆಗಳು ಕಾಡಿನ ಮಧ್ಯೆ ಸಂಚರಿಸುತ್ತಾ ಇರುವಾಗ ವಿಷ ಜಂತುಗಳು ಕಚ್ಚಿದರೆ, ಕಚ್ಚಿದೆಯೋ ಇಲ್ಲವೋ ತಿಳಿಯಲು ಗಾಡಿಗೆ ನಿಂಬೆ ಹಣ್ಣು ಮೆಣಸಿನ ಕಾಯಿ ಕಟ್ಟುತ್ತಿದ್ದರು. ಯಾಕೆಂದ್ರೆ, ವಿಷ ಜಂತುಗಳು ಕಚ್ಚಿದರೆ ವಿಷ ಮೈ ಗೆ ಏರಿದಾಗ ಯಾವುದೇ ಪದಾರ್ಥಗಳ ರುಚಿ ತಿಳಿಯುವುದಿಲ್ಲ. ವಿಷ ಏರದೇ ಇದ್ರೆ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿ ರುಚಿ ತಿಳಿಯುತ್ತಿತ್ತು. ಹಾಗಾಗಿ ಹಿಂದಿನ ಕಾಲದಲ್ಲಿ ಈ ಒಂದು ಆಚರಣೆ ರೂಢಿಯಲ್ಲಿ ಇತ್ತು.
ಇನ್ನೂ ಕೆಲವು ಜನ ದೂರ ಪ್ರಯಾಣ ಮಾಡುವಾಗ ಸಹ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಯಾಕೆಂದ್ರೆ ದೇಹದಲ್ಲಿ ನಿರ್ಜಲೀಕರಣ ಆದಾಗ ನಿಂಬೆ ಹಣ್ಣಿನ ರಸವನ್ನು ನೀರಲ್ಲಿ ಹಿಂಡಿ ಆ ನೀರನ್ನು ಕುಡಿಯುತ್ತಿದ್ದರು. ಹಾಗಾಗಿ ನಿಂಬೆ ಹಣ್ಣುಗಳನ್ನು ಒಯ್ಯುತ್ತಿದ್ದರು. ಇನ್ನೂ ವಿಷ ಜಂತುಗಳು ಕಾಡಿದರೆ ಅದನ್ನು ತಿಳಿಯಲು ಮೆಣಸಿನ ಕಾಯಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಗಳನ್ನು ಇತರೆ ಯಾವುದೇ ಕೆಟ್ಟ ದೃಷ್ಟಿ ಬೀಳಬಾರದು ಎಂಬ ಉದ್ದೇಶದಿಂದ ಅಂಗಡಿಗಳ ಬಾಗಿಲಿನ ಮುಂದೆ ಮತ್ತು ವಾಹನಗಳಿಗೆ ಕಟ್ಟುತ್ತಿದ್ದರು. ಶತ್ರುಗಳ ಕೆಟ್ಟ ದೃಷ್ಟಿ ಅಂಗಡಿಗಳ ಮೇಲೆ ಬಿದ್ದರೆ ನಷ್ಟ ಅಥವಾ ಹಾನಿ ಉಂಟಾಗುತ್ತದೆ ಎಂದು ಈ ಪದ್ಧತಿಗಳನ್ನು ಅನುಸರಿಸುತ್ತಾ ಇದ್ದರು.
ಇಂದಿನ ಕಾಲದಲ್ಲಿ ಈ ಮೂಢ ನಂಬಿಕೆಗಳನ್ನು ನಂಬದವರು ಕೆಲವು ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಬೇಕು. ಹಿಂದಿನ ಕಾಲದಲ್ಲಿ ಮನೆ ಅಂಗಡಿಗಳನ್ನು ಮಣ್ಣಿನಿಂದ ಕಟ್ಟುತ್ತಿದ್ದರು ಈ ಸಂದರ್ಭದಲ್ಲಿ ಕ್ರಿಮಿ ಕೀಟಗಳು ಒಳ ಬರುತ್ತಿದ್ದವು. ಆ ಕಾಲದಲ್ಲಿ ಕೀಟ ನಾಶಕಗಳನ್ನು ಇಲ್ಲದೆ ಇರುವುದರಿಂದ ಹೀಗೆ ಹತ್ತಿಯ ದಾರಕ್ಕೆ ನಿಂಬೆ ಹಣ್ಣು ಮತ್ತು ಮೆಣಸಿನ ಕಾಯಿಗಳನ್ನು ಕಟ್ಟುವುದರಿಂದ ಮೆಣಸು ಮಾತು ನಿಂಬೆ ಹಣ್ಣಿನಿಂದ ಬರುವ ಆಮ್ಲ ಗಾಳಿಯಲ್ಲಿ ಸೇರಿ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತಿತ್ತು. ಹಿಂದಿನ ಕಾಲದವರು ಅನುಸರಿಸಿಕೊಂಡು ಬಂದ ಈ ಆಚರಣೆಯನ್ನು ನಾವು ಈಗ ಮೂಢ ನಂಬಿಕೆ ಅಂತ ಕರೆಯುತ್ತೇವೆ. ನಿಂಬೆ ಹಣ್ಣನ್ನು ದೃಷ್ಟಿ ನಿವಾರಕವಾಗಿ ದೃಷ್ಟಿ ತೆಗಿಯೋಕೆ ಬಳಸುತ್ತಾರೆ. ಕಾರಣ ನಿಂಬೆ ಹಣ್ಣಿನಲ್ಲಿ ದ್ರವ ರೂಪದಲ್ಲಿ ಇರುವ ಸೂಕ್ಷ್ಮ ರಾಜ ಕಂಪನಗಳು ಅವೆಗವನ್ನು ಪಡೆಯುತ್ತವೆ. ರಜ ಮತ್ತು ತಮೋ ಗುಣಗಳನ್ನು ಆಕರ್ಷಿಸಿ ವ್ಯಕ್ತಿಯ ಸುತ್ತಲೂ ಈ ಒಟ್ಟು ಕಂಪನಗಳನ್ನು ಒಟ್ಟುಗೂಡಿಸುತ್ತದೆ.
ಕೆಲವೊಂದು ನಿಂಬೆ ಹಣ್ಣಿನ ಮೇಲ್ಭಾಗದಲ್ಲಿ ಮೇಲಿನಿಂದ ಕೆಳಗಿನವರೆಗೆ ಒಂದೇ ರೀತಿಯ ಗೆರೆಯ ರಚನೆ ಇರತ್ತೆ ಕೆಲವೊಮ್ಮೆ ಎರಡು ಗೆರೆ ಇರುತ್ತದೆ. ಈ ತರದ ನಿಂಬೆ ಹಣ್ಣುಗಳನ್ನು ಮಾಟ ಮಂತ್ರ ಮಾಡಲು ಬಳಸುತ್ತಾರೆ. ಯಾಕಂದ್ರೆ, ರಜ ಮತ್ತು ತಮ ಗುಣಗಳನ್ನು ಗಾಳಿಯಲ್ಲಿ ಹೆಚ್ಚಾಗಿ ಬಿಡುವ ಶಕ್ತಿಯನ್ನು ಈ ತರದ ನಿಂಬೆ ಹಣ್ಣುಗಳು ಹೊಂದಿರುತ್ತವೆ. ಒಂದು ನಿಂಬೆ ಹಣ್ಣನ್ನು ಕೈಯ್ಯಲ್ಲಿ ಹಿಡಿದು ವ್ಯಕ್ತಿಯ ಕಾಲಿನಿಂದ ತಳೆಯವರೆಗು ವೃತ್ತಾಕಾರವಾಗಿ ದೃಷ್ಟಿ ತೆಗೆದು ಅದಾನು ಕೆಂಡದಲ್ಲಿ ಅಥವಾ ಹರಿಯುವ ನೀರಿನಲ್ಲಿ ಬಿಡುವ ಪದ್ಧತಿ ಇತ್ತು ಅದನ್ನು ಈಗಲೂ ಪಾಲಿಸುತ್ತಾ ಬಂದಿದ್ದೇವೆ. ನಿಂಬೆ ಹಣ್ಣು ಹರಿಯುವ ನೀರಿನಲ್ಲಿ ಬಿಟ್ಟಾಗ ನಿಂಬೆ ಹಣ್ಣಿನಲ್ಲಿ ಇರುವ ಕಂಪನಗಳು ನೀರಿನಲ್ಲಿ ಬೆರೆಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದರ ಮಧ್ಯದಲ್ಲಿ ಈ ಋಣಾತ್ಮಕ ಶಕ್ತಿ ಯನ್ನು ಬಳಸಿಕೊಂಡು ಬೇರೆ ವ್ಯಕ್ತಿಯ ಮೇಲೆ ಮಾಟ ಮಂತ್ರ ಮಾಡುತ್ತಾರೆ.
ನಿಂಬೆ ಹಣ್ಣನ್ನು ಸುಟ್ಟಾಗ ರಜ ತಮ ಗುಣಗಳು ಬೇಗ ನಾಶವಾಗುತ್ತದೆ. ತೀವ್ರವಾಗಿ ವಕ್ರ ದೃಷ್ಟಿ ಆದಾಗ ಈ ಎರಡು ಗುಣಗಳು ನೀರಿನಲ್ಲಿ ಬೆರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಹಾಗಾಗಿ ಅವಳು ನಿಂಬೆ ಹಣ್ಣು ಬೇಗ ನೀರಿನಲ್ಲಿ ಮುಳುಗಲ್ಲ. ತೀವ್ರ ವಕ್ರ ದೃಷ್ಟಿ ಇದ್ದರೆ ಬೇಗನೆ ನೀರಿನಲ್ಲಿ ನಿಂಬೆ ಹಣ್ಣು ಮುಳುಗಿ ಹೋಗುತ್ತದೆ. ಸೌಮ್ಯ ದೃಷ್ಟಿ ತಗುಲಿದಾಗ ನೀರಿನಲ್ಲಿ ಹರಿಯುತ್ತದೆ ಮಾಧ್ಯಮ ದೃಷ್ಟಿ ಆದಾಗ ನಿಂಬೆ ಹಣ್ಣು ನೀರಿನಲ್ಲಿ ತಿರುಗುತ್ತದೆ. ಅದೇ ವಕ್ರ ದೃಷ್ಟಿ ಆದಾಗ ನಿಂಬೆ ಹಣ್ಣಿನ ರಜ ತಮ ಗುಣಗಳು ಸೇರಿ ಕಂಪನ ಗೊಂದು ಅದೂ ನೀರಿನಲ್ಲಿ ನಿಂತಲ್ಲೇ ತೇಲುತ್ತದೆ. ವಕ್ರ ದೃಷ್ಟಿ ಆಗದೆ ಇದ್ದಾಗ ನಡುವೆ ನಿಂಬೆ ಹಣ್ಣನ್ನು ಬೆಂಕಿಗೆ ಹಾಕಿದರೆ ತಕ್ಷಣವೇ ಸುತ್ತು ಹೋಗುತ್ತದೆ. ಸೌಮ್ಯ ದೃಷ್ಟಿ ಆಗಿದ್ದಾರೆ ನಿಂಬೆ ಹಣ್ಣು ಬೆಂಕಿ ತಗುಲಿ ಒಂದೇ ಸಾರಿ ಶಬ್ಧ ಆಗಿ ಸುಟ್ಟು ಹೋಗುತ್ತದೆ. ಮಾಧ್ಯಮ ದೃಷ್ಟಿ ಹೊಂದಿದ್ದರೆ ನಿಂಬೆ ಹಣ್ಣು ಸುಟ್ಟು ನಂತರವೂ ಸುಕ್ಕುಗಳನ್ನು ಹೊಂದಿರುತ್ತದೆ ಮತ್ತು ದುರ್ವಾಸನೆ ಬರುತ್ತೆ. ಹಾಗೆ ತೀವ್ರ ದೃಷ್ಟಿ ಬಿದ್ದಿದ್ದಾರೆ ನಿಂಬೆ ಹಣ್ಣು ನೇರಳೆ ಬಣ್ಣದ ಹಿಗೆಯನ್ನ ಹೊರ ಹಾಕುತ್ತದೆ ನಿಂಬೆ ತಕ್ಷಣವೇ ಉರಿಯಲ್ಲ. ಅದೇ ಋಣಾತ್ಮಕ ಶಕ್ತಿ ಹೆಚ್ಚಾಗಿದ್ದಾರೆ ನಿಂಬೆ ಹಣ್ಣು ದೊಡ್ಡ ಶಬ್ದದಿಂದ ಉರಿಯುತ್ತದೆ ಮತ್ತು ಬೆಂಕಿಯ ಜ್ವಾಲೆ ಅಸ್ಥಿರ ಆಗಿ ಇರುತ್ತದೆ