ಕೊರೋನ ವೈರಸ್ ನ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಲೆ ಹೋದ ಕಾರಣ ಕರ್ನಾಟಕ ಸರ್ಕಾರ ಲಾಕ್ ಡೌನ್ ಮಾಡಿತು. ಮೇ 25 ರವರೆಗೆ ಲಾಕ್ ಡೌನ್ ಎಂದು ಘೋಷಿಸಿದ ಮುಖ್ಯಮಂತ್ರಿ ಅವರು ಕೊರೋನ ಕೇಸ್ ನಿಯಂತ್ರಣಕ್ಕೆ ಬರದ ಹಿನ್ನಲೆ ಜೂನ್ 7 ರವರೆಗೆ ಲಾಕ್ ಡೌನ್ ಮುಂದುವರೆಯುತ್ತದೆ ಎಂದು ಘೋಷಿಸಿದರು. ಇದೀಗ ಜೂನ್ 30 ರವರೆಗೂ ಲಾಕ್ ಡೌನ್ ಮಾಡುವ ಚರ್ಚೆ ನಡೆಯುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಸದ್ಯಕ್ಕೆ ನಮ್ಮ ಕರ್ನಾಟಕ ರಾಜ್ಯಕ್ಕೆ ಲಾಕ್ ಡೌನ್ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜೂನ್ 7ರವರೆಗೆ ಲಾಕ್ ಡೌನ್ ಘೋಷಿಸಿದ್ದರು. ಇದೀಗ ಜೂನ್ 7 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತದೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೆ ಜೂನ್ 7 ರವರೆಗೆ ಲಾಕ್ ಡೌನ್ ಎಂದು ಸರ್ಕಾರ ಘೋಷಿಸಿದೆ ಅದರಂತೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆದಿದೆ ಕೊರೋನ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಆದರೆ ಜೂನ್ 7 ರ ನಂತರವೂ ಲಾಕ್ ಡೌನ್ ಮುಂದುವರಿಯುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಲಾಕ್ ಡೌನ್ ಮುಂದುವರೆಸಲು ಮಾರ್ಗಸೂಚಿ ಕೊಟ್ಟಿದೆ ಅದರಂತೆ ನಮ್ಮ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಅನಿವಾರ್ಯತೆ ರಾಜ್ಯ ಸರ್ಕಾರದ ಎದುರಿಗಿದೆ. ಸದ್ಯ ಕೊರೋನ ಕೇಸ್ ಕಡಿಮೆಯಾಗುತ್ತಿದೆ ಆದರೆ ಈಗಲೆ ಅನ್ ಲಾಕ್ ಮಾಡುವುದು ಬೇಡ, ಎಲ್ಲ ರಾಜ್ಯಗಳಲ್ಲಿ ಜೂನ್ 30 ರವರೆಗೆ ಟಪ್ ರೂಲ್ಸ್ ಮಾಡಿ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಮಾಡಿರುವ ಕಾರಣ ಕೊರೋನ ಕೇಸ್ ಕಡಿಮೆಯಾಗಿದೆ ಆದರೆ ಮೇ ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಮತ್ತಷ್ಟು ಬಿಗಿ ಲಾಕ್ ಡೌನ್ ಮಾಡಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ, ಅಲ್ಲದೆ ಸಚಿವರ ಅಭಿಪ್ರಾಯವೂ ಆಗಿದೆ. ಅದೇ ರೀತಿ ಜೂನ್ 7 ರ ನಂತರ ನಮ್ಮ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಲು ರಾಜ್ಯ ಸರ್ಕಾರ ಪ್ಲಾನ್ ಮಾಡುತ್ತಿದೆ. ಜೂನ್ ಐದರಂದು ಸಚಿವರು, ಅಧಿಕಾರಿಗಳು, ತಜ್ಞರೊಂದಿಗೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಒಂದು ಮೀಟಿಂಗ್ ಮಾಡಿ ಲಾಕ್ ಡೌನ್ ಮಾಡುವ ಬಗ್ಗೆ ಅಧಿಕೃತ ಮಾಹಿತಿಯನ್ನು ಕೊಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಕರ್ನಾಟಕ ರಾಜ್ಯದ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಸುದೀರ್ಘ ಲಾಕ್ ಡೌನ್ ಮಾಡಿರುವ ಕಾರಣ ಕೊರೋನ ಕಡಿಮೆಯಾಗಿರುವುದರಿಂದ ಹಂತಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಇದ್ದಾಗಿಯೂ ಸಹ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಮತ್ತು ಪೋಸಿಟಿವಿಟಿ ರೇಟ್ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಈಗ ಕೊರೋನ ಪೋಸಿಟಿವಿಟಿ ರೇಟ್ 16.42 ಇದೆ ಪೋಸಿಟಿವಿಟಿ ರೇಟ್ 5% ಬರುವವರೆಗೂ ರಾಜ್ಯದಲ್ಲಿ ಲಾಕ್ ಡೌನ್ ಮಾಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ನಿವಾಸದಲ್ಲಿ ನಡೆದ ಮೀಟಿಂಗ್ ನಲ್ಲಿ ಅವರು ಜೂನ್ 7 ರ ನಂತರ ಕೈಗಾರಿಕೆ ಚಟುವಟಿಕೆಗಳಿಗೆ ಅವಕಾಶ ಕೊಡೋಣ ಎಂಬ ವಿಷಯವನ್ನು ಪ್ರಸ್ತಾಪಿಸಿದಾಗ ಸಭೆಯಲ್ಲಿ ಭಾಗವಹಿಸಿದ ಸಚಿವರು, ಅಧಿಕಾರಿಗಳು ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಕೊಡುವುದರಿಂದ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಲಾಕ ಡೌನ್ ಸಡಿಲಿಸಿದರೆ ಊರಿಗೆ ಹೋದ 10 ಲಕ್ಷಕ್ಕೂ ಹೆಚ್ಚಿನ ಜನರು ವಾಪಸ್ ಬರಬಹುದು ಅಲ್ಲದೆ ಕೊರೋನ ಸೋಂಕಿತರ ಸಂಖ್ಯೆ ಸಂಪೂರ್ಣ ಕಡಿಮೆ ಆಗದೆ ಇದ್ದರೆ ಮತ್ತೆ ಕೊರೋನ ನಿಯಂತ್ರಣದ ಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ರಾಜ್ಯದ ಕೊರೋನ ಸೋಂಕಿತರ ಸಂಖ್ಯೆ 1000 ಬೆಂಗಳೂರಿನ ಕೊರೋನ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೆ ಕಾಯಬೇಕು ಎಂದು ಸಚಿವರು ಹಾಗೂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಜೂನ್ 7 ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯುತ್ತಾ ಇಲ್ಲವಾ ಎನ್ನುವುದು ಜೂನ್ ಐದರಂದು ತಿಳಿಯುತ್ತದೆ.