ನಮ್ಮ ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆಗಳಲ್ಲಿ ನಿರುದ್ಯೋಗ ಒಂದು ಪ್ರಮುಖ ಸಮಸ್ಯೆಯಾಗಿದೆ. ಬಹಳಷ್ಟು ಯುವಕರು ಕೆಲಸ ಇಲ್ಲದೆ ಮನೆಯಲ್ಲಿ ಇದ್ದಾರೆ. ಅದರಲ್ಲೂ ಕಳೆದ ವರ್ಷದಿಂದ ಕೊರೋನ ಹೆಮ್ಮಾರಿ ಬಂದಿರುವ ಕಾರಣ ಎಲ್ಲಾ ಕೆಲಸಗಳು ಸ್ಥಗಿತವಾಗಿದೆ, ಕೆಲಸಕ್ಕೆ ಕರೆಯುವವರು ಇಲ್ಲ. ಹೀಗಿರುವಾಗ ರೇಲ್ವೆ ಇಲಾಖೆಯಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಯಾವುವು, ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು ಹಾಗೂ ರೇಲ್ವೆ ವ್ಯವಸ್ಥೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಆರ್ ಆರ್ ಸಿ ವೆಸ್ಟರ್ನ್ ರೇಲ್ವೆ ಅಪ್ರೆಂಟಿಸ್ ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರೇಲ್ವೆ ಇಲಾಖೆಯಲ್ಲಿ ಇರುವ ಒಟ್ಟು 3,591 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಈ ಹುದ್ದೆಗಳಿಗೆ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅರ್ಜಿ ಸಲ್ಲಿಸಬಹುದಾಗಿದೆ. ವೆಸ್ಟರ್ನ್ ರೇಲ್ವೆ ಇಲಾಖೆಯಲ್ಲಿ ಇರುವ ಖಾಲಿ ಹುದ್ದೆಗಳಿಗೆ ಇದೇ ಮೇ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳು ಜೂನ್ 25ನೇ ತಾರೀಖಿನವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಸರ್ಕಾರಿ ಅಥವಾ ಖಾಸಗಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಯ ಮಾನದಂಡವನ್ನು ಇಡಲಾಗುತ್ತದೆ. ಅದರಂತೆ ರೇಲ್ವೆ ಇಲಾಖೆಯಲ್ಲಿ ಆಹ್ವಾನಿಸಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕೆಲವು ಅರ್ಹತೆಗಳಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಸೆಸೆಲ್ಸಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಐಟಿಐನಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಗರಿಷ್ಠ ವಯೋಮಿತಿಯನ್ನು ನೋಡುವುದಾದರೆ ಸಾಮಾನ್ಯ ಅಭ್ಯರ್ಥಿಗಳಿಗೆ 24 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 27 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳಿಗೆ 29 ವರ್ಷ ಗರಿಷ್ಠ ವಯೋಮಿತಿ ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ನೂರು ರೂಪಾಯಿಯನ್ನು ನಿಗದಿಸಲಾಗಿದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಸಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸೆಸೆಲ್ಸಿಯಲ್ಲಿ ಮತ್ತು ಐಟಿಐನಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ಅಂದರೆ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ರೇಲ್ವೆ ಇಲಾಖೆಯಿಂದ ಸಾಕಷ್ಟು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ನಮ್ಮ ದೇಶದ ರೇಲ್ವೆ ಇಲಾಖೆಯ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಭಾರತ 1947ರಲ್ಲಿ ಸ್ವತಂತ್ರವಾದ ನಂತರ ರೇಲ್ವೆ ಇಲಾಖೆಯನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡಿಸಲಾಯಿತು. ಸ್ವತಂತ್ರ ಭಾರತದ ಮೊದಲ ರೇಲ್ವೆ ಮಂತ್ರಿಯಾಗಿ ಜಾನ್ ಮಥಾಯಿ ಅವರು ಅಧಿಕಾರ ವಹಿಸಿಕೊಂಡರು. ರೇಲ್ವೆ ಇಲಾಖೆಯ ಮೊದಲ ಮಹಿಳಾ ರೇಲ್ವೆ ಸಚಿವೆಯಾಗಿ ಮಮತಾ ಬ್ಯಾನರ್ಜಿ ಅವರು ಅಧಿಕಾರ ನಡೆಸಿದರು. ಪ್ರಪಂಚದಲ್ಲಿಯೇ ಭಾರತದ ರೇಲ್ವೆ ವ್ಯವಸ್ಥೆಯು ನಾಲ್ಕನೇ ಅತಿದೊಡ್ಡ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಭಾರತೀಯ ರೇಲ್ವೆ ವಸ್ಥೆಯಲ್ಲಿ ಬ್ರಾಡ್ ಗೇಜ್ ಅಳವಡಿಸಲಾಗಿದೆ. ಭಾರತೀಯ ರೇಲ್ವೆ ವ್ಯವಸ್ಥೆಯಲ್ಲಿ ಒಟ್ಟು 17 ರೇಲ್ವೆ ವಲಯ ಹಾಗೂ ಒಂದು ಕೊಲ್ಕತ್ತಾ ಮೆಟ್ರೊ ವಲಯವಿದೆ. ಭಾರತದಲ್ಲಿ ಇಲೆಕ್ಟ್ರಿಕ್ ಲೋಕೋಮೋಟಿವ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿದೆ. ಪಶ್ಚಿಮ ಬಂಗಾಳದಲ್ಲಿರುವ ಚಿತ್ತರಂಜನ್ ಎಂಬಲ್ಲಿ ವಿದ್ಯುತ್ ಚಾಲಿತ ಲೋಕೋಮೋಟಿವ್ ತಯಾರಿಸಲಾಗುತ್ತದೆ. ಡಿಸೇಲ್ ಮತ್ತು ವಿದ್ಯುತ್ ಚಾಲಿತ ಲೋಕೋಮೋಟಿವ್ ಗಳನ್ನು ವಾರಣಾಸಿಯಲ್ಲಿ ಉತ್ಪಾದಿಸಲಾಗುತ್ತದೆ. ಹೈ ಕೆಪಾಸಿಟಿ ಡಿಸೇಲ್ ಲೋಕೋಮೋಟಿವ್ ಗಳನ್ನು ಬಿಹಾರ್ ನಲ್ಲಿ ಉತ್ಪಾದಿಸಲಾಗುತ್ತದೆ.

Leave a Reply

Your email address will not be published. Required fields are marked *