ಜನಸಾಮಾನ್ಯರು ದುಬಾರಿ, ಐಷಾರಾಮಿ ಹಾಗು ಪಂಚತಾರಾ ಹೋಟೆಲ್ ಗಳಲ್ಲಿ ಹೋಗುವ ಮುನ್ನ ಎರಡೆರಡು ಬಾರಿ ವಿಚಾರ ಮಾಡುತ್ತಾರೆ. ಏಕೆಂದರೆ ಉಳಿದ ಕಡೆಗಳಿಗಿಂತ ಅಲ್ಲಿ ಆಹಾರಕ್ಕೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ ಎಂದು. ಅದೇ ರೀತಿ ಹೋಟೆಲಿನ ಮಾಲೀಕರೂ ಸಹ ತಮ್ಮ ತಮ್ಮ ಹೋಟೆಲುಗಳಿಗೆ ಗ್ರಾಹಕರನ್ನು ಸೆಳೆಯಲು ಎಂದು ನಾನಾ ರೀತಿಯ ಉಪಾಯವನ್ನು ಮಾಡುತ್ತಲೇ ಇರುತ್ತಾರೆ. ಹಾಗೆಯೇ ಮಹಾರಾಷ್ಟ್ರದ ಪುಣೆಯಲ್ಲಿ ಒಬ್ಬ ಹೋಟೆಲ್ ಮಾಲೀಕ ತನ್ನ ಹೋಟೆಲಿಗೆ ಗ್ರಾಹಕರನ್ನು ಸೆಳೆಯಲು ಒಂದು ಒಳ್ಳೆಯ ಉಪಾಯವನ್ನು ಕಂಡುಕೊಂಡಿದ್ದಾರೆ. ತಟ್ಟೆಯಲ್ಲಿರುವ ಊಟ ಖಾಲಿ ಮಾಡಿದ್ರೆ ಸಿಗುತ್ತೆ ರಾಯಲ್ ಎನ್‍ಫೀಲ್ಡ್ ಬೈಕ್!? ಎಂದು ತನ್ನ ಗ್ರಾಹಕರನ್ನು ಸೆಳೆಯಲು ಉಪಾಯ ಮಾಡಿದ್ದಾರೆ. ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಹೋಟೆಲ್ ಗಳು ಗ್ರಾಹಕರನ್ನ ಸೆಳೆಯಲು ನಾನಾ ರೀತಿಯ ಮಾರುಕಟ್ಟೆ ತಂತ್ರಗಳನ್ನ ಪ್ರಯೋಗಿಸುತ್ತವೆ. ಅದೇ ರೀತಿ ಇದೀಗ ಪುಣೆಯ ಶಿವರಾಜ್ ಹೋಟೆಲ್ ಮಾಲೀಕರು ತಮ್ಮ ಗ್ರಾಹಕರಿಗೆ ವಿಶೇಷ ಆಫರ್ ನೀಡಿದ್ದಾರೆ. ಈ ಹೋಟೆಲ್ ಪ್ರಕಟಿಸಿರುವ ಜಾಹೀರಾತಿನ ಪೋಸ್ಟರ್ ನೋಡಿಯೇ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಭರ್ಜರಿ ಊಟಕ್ಕಾಗಿ ಕೆಲ ಹೋಟೆಲ್ ಗಳು ಮಹಾರಾಜ ಥಾಲಿ, ಬಾಹುಬಲಿ ಥಾಲಿ ಹೆಸರಿನ ಆಫರ್ ಗಳನ್ನ ಗ್ರಾಹಕರಿಗೆ ನೀಡುತ್ತವೆ. ಶಿವರಾಜ್ ಹೋಟೆಲ್ ಬುಲೆಟ್ ಥಾಲಿಯನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಇದರಲ್ಲಿ ನೀಡುವ ಎಲ್ಲ ಖಾದ್ಯಗಳನ್ನು ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಹಾಗೆ ತಾವು ನೀಡಿದ ಖಾದ್ಯಗಳನ್ನು ಒಂದು ಗಂಟೆಯೊಳಗೆ ತಿನ್ನುವ ಗ್ರಾಹಕರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಉಚಿತವಾಗಿ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. ಈ ಬುಲೆಟ್ ಥಾಲಿ ಮಾಂಸಾಹಾರವನ್ನು ಒಳಗೊಂಡಿದ್ದು, ಈ ಥಾಲಿ ಸಿದ್ಧಪಡಿಸಲು 55 ಬಾಣಸಿಗರು ಕೆಲಸ ಮಾಡುತ್ತಾರೆ.
ಇನ್ನೂ ಈ ಬುಲೆಟ್ ಥಾಲಿಯಲ್ಲಿ ಏನೆಲ್ಲ ಇರುತ್ತದೆ? ಎಂದು ನೋಡುವುದಾದರೆ , ನಾಲ್ಕು ಕೆಜಿ ಮಟನ್, ಕರಿದ ಮೀನು, ಮತ್ತು 12 ತರಹದ ವಿವಿಧ ಆಹಾರ ಇರಲಿದೆ. ಇದರಲ್ಲಿ ಪೊಮ್‍ಫ್ರೆಟ್ ಎಂಟು ಪೀಸ್, ಸುರ್ಮಾಯಿ ಎಂಟು ಪೀಸ್, ಚಿಕನ್ ಲೆಗ್ ಪೀಸ್ 8, ಕಿಲ್ಲಾಂಬಿ ಕರ್ರಿ, ಒಂದು ಮಟನ್ ಮಸಲಾ, ಕರಿದ ಹುಂಜ, ಕೋಲಂಬಿ ಬಿರಿಯಾನಿ, ಎಂಟು ರೊಟ್ಟಿ, ಎಂಟು ಚಪಾತಿ, ಒಂದು ಸುಕ್ಕಾ, ಕೋಲಂಬಿ ಕೋಲಿವಾಡಾ, ನೀರಿನ ನಾಲ್ಕು ಬಾಟಲ್, ರಾಯತಾ, ಎಂಟು ಸೋಲ್ಕಡಿ, ಎಂಟು ಹಪ್ಪಳ ಮತ್ತು ಎಂಟು ಮಟನ್ ಅಲಾನಿ ಸೂಪ್ ಇವುಗಳನ್ನು ಒಳಗೊಂಡಿರುತ್ತದೆ. ಇನ್ನೂ ಇದನ್ನು ತಿನ್ನಬಯಸುವ ಗ್ರಾಹಕರಿಗೆ ಎರಡು ಆಯ್ಕೆಗಳಿವೆ. ಆ ಆಯ್ಕೆಗಳು ಏನೂ? ಎಂದು ನೋಡುವುದಾದರೆ , ಈ ಆಫರ್ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕ ಅತುಲ್ ವಾಯಕರ್, ಗ್ರಾಹಕರಿಗೆ ಎರಡು ರೀತಿಯ ಆಫರ್ ಗಳನ್ನ ನೀಡಲಾಗುತ್ತದೆ. ಮೊದಲನೆಯದ್ದು 4,444 ರೂಪಾಯಿ ಬೆಲೆಯ ಬುಲೆಟ್ ಥಾಲಿಯನ್ನ ಇಬ್ಬರು ಜೊತೆಯಾಗಿ ಒಂದು ಗಂಟೆಯೊಳಗೆ ತಿಂದು ಮುಗಿಸಬೇಕು. ಎರಡನೇ ಆಯ್ಕೆ 2 ಸಾವಿರದ ಐದು ನೂರು ಬೆಲೆಯ ಒಂದು ಮಿನಿ ಬುಲೆಟ್ ಥಾಲಿಯನ್ನ ಒಬ್ಬ ವ್ಯಕ್ತಿ ಒಂದು ಗಂಟೆಯಲ್ಲಿ ತಿನ್ನಬೇಕು. ಯಾರಾದರೂ ಹೀಗೇ ಒಂದು ಗಂಟೆಯೊಳಗೆ ಬುಲೆಟ್ ಥಾಲಿ ತಿಂದೂ ಮುಗಿಸಿದರೆ ಅವರಿಗೆ ರಾಯಲ್ ಎನ್‍ಫೀಲ್ಡ್ ಬುಲೆಟ್ ನೀಡಲಾಗುವುದು ಎಂದು ಹೇಳಿದ್ದಾರೆ.
ಹೋಟೆಲ್ ಮುಂಭಾಗಲ್ಲಿ ಆರು ಬುಲೆಟ್ ಬೈಕ್ ಗಳನ್ನ ನಿಲ್ಲಿಸಲಾಗಿದೆ. ಇದರ ಜೊತೆಗೆ ಹೋಟೆಲ್ ನಲ್ಲಿ ಆರು ಬಗೆಯ ಬುಲೆಟ್ ಥಾಲಿಗಳು ಕೂಡಾ ಗ್ರಾಹಕರಿಗೆ ಸಿಗಲಿದೆ. ರಾವಣ್ ಥಾಲಿ, ಬುಲೆಟ್ ಥಾಲಿ, ಮಲ್ವಾನಿ ಮಚಲಿ ಥಾಲಿ, ಪೈಲ್ವಾನ್ ಮಟನ್ ಥಾಲಿ, ಬಕಾಸುರ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿ ಸಿಗಲಿದೆ. ಈಗಾಗಲೇ ಮಾಲೀಕರು ಈ ಉಪಾಯವನ್ನು ತಮ್ಮ ಹೋಟೆಲ್ ನಲ್ಲಿ ಜಾರಿಗೆ ತಂದಿದ್ದು ಇದರಲ್ಲಿ ಭಾಗವಹಿಸಿದ್ದ ಸೋಲಾಪುರ ಜಿಲ್ಲೆಯ ಸೋಮನಾಥ್ ಕುಟುಂಬದ ಒಬ್ಬರು ಮಾತ್ರ ಬುಲೆಟ್ ಬೈಕ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಲೀಕನ ಈ ಆಫರ್ ಸೂಪರ್ ಹಿಟ್ ಆಗಿ ಹೋಟೆಲ್ ಫುಲ್ ಫೇಮಸ್ ಆಗಿದೆ ಎನ್ನಬಹುದು.