ಉದ್ಯೋಗವನ್ನು ಹುಡುಕುತ್ತಿರುವವರಿಗೆ ನಾವಿಂದು ಸಿಹಿಸುದ್ದಿಯನ್ನು ತಿಳಿಸುತ್ತೇವೆ ಇಂದು ನಾವು ನಿಮಗೆ ಅಕ್ಟೋಬರ್ ತಿಂಗಳಿನ ಉದ್ಯೋಗ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತೇವೆ. ಯಾವ ಯಾವ ಇಲಾಖೆಗಳಲ್ಲಿ ಯಾವ ಯಾವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಮತ್ತು ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದ ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲನೆಯದಾಗಿ ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಸಂಘದಿಂದ ನೇಮಕಾತಿ ನಡೆಯುತ್ತಿದ್ದು ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಸಮುದಾಯ ಆರೋಗ್ಯ ಅಧಿಕಾರಿಗಳ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಒಟ್ಟು ಮೂರು ಸಾವಿರದ ಆರು ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಕರ್ನಾಟಕದಾದ್ಯಂತ ಹುದ್ದೆಯನ್ನು ಮಾಡಬಹುದಾಗಿದೆ. ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್ ಅನ್ನ ಮುಗಿಸಿರಬೇಕು ಅಭ್ಯರ್ಥಿಗಳಿಗೆ ಮೂವತ್ತೈದು ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಇಪ್ಪತ್ತೆರಡು ಸಾವಿರ ವೇತನವನ್ನು ನೀಡಲಾಗುತ್ತದೆ ಆನ್ಲೈನ್ ಪರೀಕ್ಷೆಯನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಆನ್ಲೈನ್ನಲ್ಲಿ ಹದಿನೆಂಟು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಮುನ್ನೂರು ಮತ್ತು ಇತರ ಅಭ್ಯರ್ಥಿಗಳಿಗೆ ಆರುನೂರು ರೂಪಾಯಿ ಅರ್ಜಿಶುಲ್ಕ ವಿಧಿಸಲಾಗಿದೆ.
ಎರಡನೆಯ ಉದ್ಯೋಗ ಮಾಹಿತಿ ಜಿಲ್ಲಾ ಗೃಹರಕ್ಷಕದಳ ಘಟಕದಲ್ಲಿ ನೇಮಕಾತಿ ಕುರಿತು. ಈ ಒಂದು ಇಲಾಖೆಯಲ್ಲಿ ಎರಡು ನೂರಾ ಇಪ್ಪತ್ತು ಹೊಮ್ ಗಾರ್ಡ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಉದ್ಯೋಗ ಸ್ಥಳವನ್ನು ನೋಡುವುದಾದರೆ ರಾಮನಗರ ಜಿಲ್ಲೆಯಲ್ಲಿ ಈ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಹತ್ತನೇ ತರಗತಿಯನ್ನು ಪಾಸಾಗಿರಬೇಕು.
ಜೊತೆಗೆ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ಹತ್ತೊಂಬತ್ತರಿಂದ ಗರಿಷ್ಠ ಮೂವತ್ತು ವರ್ಷ ವಯಸ್ಸಾಗಿರಬೇಕು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖುದ್ದು ಕಚೇರಿಗೆ ಭೇಟಿ ನೀಡಿ ಇಪ್ಪತ್ತಾರು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ ವಿಳಾಸ ಜಿಲ್ಲಾ ಗೃಹರಕ್ಷಕದಳ ಕಛೇರಿ. ರಾಮನಗರ.
ಮೂರನೆಯದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನೇಮಕಾತಿ ನಡೆಯುತ್ತಿದೆ ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಸಾವಿರದ ಎರಡು ನೂರಾ ನಲವತ್ತೆರಡು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಉದ್ಯೋಗ ಸ್ಥಳ ಕರ್ನಾಟಕದಾದ್ಯಂತ ಇದೆ.ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆಯನ್ನು ಪಡೆದಿರಬೇಕು ಎಂಬುವುದನ್ನು ತಿಳಿಯುವುದಾದರೆ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಈ ಒಂದು ಹುದ್ದೆಗೆ ಇಪ್ಪತ್ತೆರಡು ವರ್ಷದಿಂದ ನಲವತ್ತು ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಐವತ್ತೆಳು ಸಾವಿರದ ಏಳು ನೂರು ರೂಪಾಯಿಂದ ಒಂದು ಲಕ್ಷದ ಎಂಬತ್ತೆರಡು ಸಾವಿರದ ನಾಲ್ಕು ನೂರು ರೂಪಾಯಿ ಶ್ರೇಣಿಯಲ್ಲಿ ಸಂಬಳವನ್ನು ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಈ ಒಂದು ಹುದ್ದೆಗೆ ನವೆಂಬರ್ ಆರು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ನೋಡುವುದಾದರೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಒಂದು ಸಾವಿರ ಮತ್ತು ಇತರ ಅಭ್ಯರ್ಥಿಗಳಿಗೆ ಎರಡು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.
ನಾಲ್ಕನೆಯದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ. ಯಾವ ಹುದ್ದೆಗೆ ನೇಮಕಾತಿ ನಡೆಯುತ್ತದೆ ಎಂಬುವುದನ್ನು ನೋಡುವುದಾದರೆ ಈ ವಿಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಆರು ನೂರಾ ಒಂದು ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಈ ಒಂದು ಹುದ್ದೆಗೆ ಬೆಂಗಳೂರು-ಹಾಸನ ಚಿತ್ರದುರ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆಯನ್ನು ಪಡೆದಿರಬೇಕು ಎಂಬುದನ್ನು ನೋಡುವುದಾದರೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಹತ್ತನೇ ತರಗತಿ ಮತ್ತು ಸಹಾಯಕಿಯರ ಹುದ್ದೆಗೆ ಕನಿಷ್ಠ ನಾಲ್ಕರಿಂದ ಗರಿಷ್ಠ ಒಂಬತ್ತನೇ ತರಗತಿಯವರೆಗೆ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹದಿನೆಂಟರಿಂದ ಮೂವತ್ತೈದು ವರ್ಷದೊಳಗಿನವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಬೋನಸ್ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಒಂದು ಹುದ್ದೆಗೆ ಹದಿನಾರು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ಇನ್ನು ಮುಂದಿನ ಹುದ್ದೆ ಉತ್ತರ ರೈಲ್ವೆ ಇಲಾಖೆಯಲ್ಲಿ ನೇಮಕಾತಿ. ಇಲ್ಲಿ ಮೆಕ್ಯಾನಿಕ್ ಎಲೆಕ್ಟ್ರಿಷಿಯನ್ ಫಿಟ್ಟರ್ ಕಾರ್ಪೆಂಟರ್ ವೆಲ್ಡರ್ ಪೇಂಟರ್ ಟರ್ನರ್ ವೈರ್ ಮ್ಯಾನ್ ಈ ರೀತಿಯಾಗಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಒಟ್ಟು ಮೂರು ಸಾವಿರದ ತೊಂಬತ್ಮುರು ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಉದ್ಯೋಗ ಸ್ಥಳ ಭಾರತದಾದ್ಯಂತ ಇದೆ. ಹತ್ತನೇ ತರಗತಿಯ ಜೊತೆಗೆ ಐಟಿಐ ಮುಗಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ಇಪ್ಪತ್ತು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಆದರೆ ಉಳಿದ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಸಲ್ಲಿಸಬೇಕು.
ಮುಂದಿನ ನೇಮಕಾತಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್. ಈ ಒಂದು ಇಲಾಖೆಯಲ್ಲಿ ಪಿಟ್ಟರ್ ಟರ್ನರ್ ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಎಲೆಕ್ಟ್ರಿಷಿಯನ್ ಸರ್ವೇಯರ್ ಈ ರೀತಿಯಾಗಿ ಒಟ್ಟು ಇಪ್ಪತ್ತೈದು ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ ಉದ್ಯೋಗ ಸ್ಥಳ ಉತ್ತರಕನ್ನಡ ಜಿಲ್ಲೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ಒಂದು ಹುದ್ದೆಗೆ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಈ ಒಂದು ಹುದ್ದೆಗೆ ಅಭ್ಯರ್ಥಿಗಳು ಅಕ್ಟೋಬರ್ ಹದಿನೈದು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಮುಂದಿನ ನೇಮಕಾತಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ. ಈ ಒಂದು ನೇಮಕಾತಿಯಡಿಯಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಡಿಪ್ಲೋಮ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆಯಲಾಗಿದೆ. ಒಟ್ಟು ಎರಡುನೂರು ಹುದ್ದೆಗಳ ನೇಮಕಾತಿ ನಡೆಯಲಿದೆ ಉದ್ಯೋಗ ಸ್ಥಳ ಹುಬ್ಬಳ್ಳಿ. ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಇಂಜಿನಿಯರಿಂಗ್ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ಹುದ್ದೆಗೆ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಕ್ಟೋಬರ್ ಇಪ್ಪತ್ತು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
ಮುಂದಿನ ನೇಮಕಾತಿ ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಇಲ್ಲಿ ಮೂರು ಸಾವಿರದ ಎರಡು ನೂರಾ ಅರವತ್ತೊಂದು ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಭಾರತದಾದ್ಯಂತ ಉದ್ಯೋಗ ಮಾಡಬಹುದು. ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ ದ್ವಿತೀಯ ಪಿಯುಸಿ ಮತ್ತು ಪದವಿ ವಿದ್ಯಾರ್ಹತೆ ಹೊಂದಿರಬೇಕು. ಈ ಒಂದು ಹುದ್ದೆಗೆ ಹದಿನೆಂಟು ವರ್ಷದಿಂದ ಮೂವತ್ತು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಅಭ್ಯರ್ಥಿಗಳ ನೇಮಕಾತಿಯನ್ನೂ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ. ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಇಪ್ಪತ್ತೈದು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕೆ ಎಸ್ಸಿ-ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಉಳಿದ ಅಭ್ಯರ್ಥಿಗಳು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಸ್ನೇಹಿತರೆ ಈ ರೀತಿಯಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ನೀವು ಕೂಡ ನಿಮಗೆ ಆಸಕ್ತಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ನೀವು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430