ಈಗಾಗಲೇ ಕಳೆದ ಎರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಅನೇಕ ಜನರು ಉದ್ಯೋಗವನ್ನು ಕಳೆದುಕೊಂಡು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ ಆದರೆ ಸರ್ಕಾರಿ ಇಲಾಖೆಯಲ್ಲಿ ನಡೆಯಬೇಕಿದ್ದ ನೇಮಕಾತಿ ವಿಳಂಬದಿಂದಾಗಿ ಜನರು ಇನ್ನೂ ಗೊಂದಲಕ್ಕೆ ಒಳಗಾಗಿದ್ದಾರೆ. ಹೌದು ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಳೆದ ಮೂರು ವರ್ಷದಿಂದ ಯಾವುದೇ ನೇಮಕಾತಿ ನಡೆಯುತ್ತಿಲ್ಲ ಇದು ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದವರಿಗೆ ತುಂಬಾ ನಿರಾಸೆಯನ್ನುಂಟು ಮಾಡಿದೆ.

ಕರ್ನಾಟಕ ರಾಜ್ಯ ರಾಜ್ಯ ರಸ್ತೆ ಸಾರಿಗೆ ನಿಗಮ ಎರಡು ಸಾವಿರದ ಹದಿನೆಂಟು ಮಾರ್ಚ್ ಹದಿನೇಳರಂದು ಏಳುನೂರ ಇಪ್ಪತ್ತಾರು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿತ್ತು ಅದೇ ರೀತಿಯಾಗಿ ಜೂನ್ ಹನ್ನೆರಡು, ಎರಡು ಸಾವಿರದ ಹದಿನೆಂಟರಂದು ಎರಡುನೂರು ಭದ್ರತಾ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿತ್ತು. ತದನಂತರ ಫೆಬ್ರುವರಿ ಎರಡು, ಎರಡು ಸಾವಿರದ ಇಪ್ಪತ್ತರಂದು ಕೆಇಎ ವತಿಯಿಂದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿತ್ತು. ಅದಾದ ಮೇಲೆ ಮಾರ್ಚ್ ಎರಡು ಸಾವಿರದ ಇಪ್ಪಟ್ಟರಲ್ಲಿ ನಡೆಯಬೇಕಿದ್ದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಕೋವಿಡ್ ಕಾರಣದಿಂದಾಗಿ ನಡೆಸಲಿಲ್ಲ.

ಆದರೆ ಆ ಸಮಯದಲ್ಲಿ ಈ ಒಂದು ಹುದ್ದೆಗೆ ಮೂವತ್ತು ಸಾವಿರಕ್ಕಿಂತ ಅಧಿಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದು ಅವರೆಲ್ಲರಿಗೂ ಈಗ ಯಾವಾಗ ತಮ್ಮ ಆಯ್ಕೆಪಟ್ಟಿ ಹೊರಬೀಳುತ್ತದೆ ಎಂಬುದರ ಜೊತೆಗೆ ತಮ್ಮ ವಯಸ್ಸು ಹೆಚ್ಚಾಗುತ್ತಿದೆ ಎಂಬ ಆತಂಕ ಎರಡೂ ಆಗುತ್ತಿದೆ. ಜೊತೆಗೆ ಕೋವಿಡ್ ಕಾರಣದಿಂದ ಯಾವುದೇ ರೀತಿಯ ಉದ್ಯೋಗ ಸಿಗದಿರುವ ಕಾರಣ ಇನ್ನೂ ನಿರಾಶೆಗೆ ಒಳಗಾಗಿದ್ದಾರೆ.

ಈ ಕಾರಣದಿಂದಾಗಿ ಸಾರಿಗೆ ಇಲಾಖೆಯ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿರುವಂತಹ ಅಭ್ಯರ್ಥಿಗಳು ಈಗಾಗಲೇ ಹತ್ತರಿಂದ ಹದಿನೈದು ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಛೇರಿ ಬೆಂಗಳೂರು ಇಲ್ಲಿಗೆ ಭೇಟಿ ನೀಡಿ ಹುದ್ದೆಗಳ ನೇಮಕಾತಿಯ ವಿಳಂಬದ ಬಗ್ಗೆ ವಿಚಾರಿಸಿ ಅದರ ಜೊತೆಗೆ ಬೇಗ-ಬೇಗ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಮನವಿಯನ್ನು ಮಾಡಿ ಮನವಿ ಪತ್ರವನ್ನು ಒಪ್ಪಿಸಿದ್ದಾರೆ ಆದರೆ ಅದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ ಅಭ್ಯರ್ಥಿಗಳಿಗೆ ಇದು ಇನ್ನೂ ನಿರಾಶೆ ಉಂಟು ಮಾಡಿದೆ.

ಎರಡು ಸಾವಿರದ ಇಪ್ಪತ್ತು ಇಪ್ಪತ್ತೊಂದನೇ ಸಾಲಿನಲ್ಲಿ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ನಡೆಯಬೇಕಾಗಿದ್ದ ನೇಮಕಾತಿ ಪ್ರಕ್ರಿಯೆ ಈಗಾಗಲೇ ಎಲ್ಲ ಇಲಾಖೆಗಳಲ್ಲಿ ಪ್ರಾರಂಭವಾಗಿದ್ದು ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಯಾವುದೇ ನೇಮಕಾತಿ ಕುರಿತು ವಿಷಯ ಇನ್ನೂ ಹೊರಬಿದ್ದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಭದ್ರತಾ ರಕ್ಷಕ ಹುದ್ದೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಆದರೆ ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳಿಗೆ ವಯಸ್ಸು ಹೆಚ್ಚಾಗುತ್ತಿರುವುದರಿಂದ ಅವರಿಗೆ ಈ ದೈಹಿಕ ಪರೀಕ್ಷೆಯಲ್ಲಿರುವ ಓಟ ಗುಂಡುಎಸೆತ ಉದ್ದ ಜಿಗಿತ ಇವುಗಳಲ್ಲಿ ತಾವು ಭಾಗವಹಿಸಿದರೆ ದೈಹಿಕ ಪರೀಕ್ಷೆಯಲ್ಲಿ ತಾವು ಉತ್ತೀರ್ಣರಾಗುತ್ತೇವೆಯೆ ಎಂಬ ಆತಂಕ ಶುರುವಾಗಿದೆ.

ಅಲ್ಲದೇ ಯಾವುದೇ ಇಲಾಖೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಆರು ತಿಂಗಳ ಒಳಗಾಗಿ ನಡೆಸುತ್ತಾರೆ ಆದರೆ ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಈ ಒಂದು ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಹುದ್ದೆಯ ಆಕಾಂಕ್ಷಯ ಅಭ್ಯರ್ಥಿಗಳಿಗೆ ಬೇಸರವನ್ನುಂಟು ಮಾಡುತ್ತಿದೆ.

ಸಾರಿಗೆ ಇಲಾಖೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬ ಆಗುತ್ತಿರುವುದರ ಕುರಿತು ಈಗಾಗಲೇ ಕಳೆದ ಬಾರಿ ಸಾರಿಗೆ ಸಚಿವರಾಗಿದ್ದಂತಹ ಲಕ್ಷ್ಮಣ್ ಸವದಿ ಅವರಲ್ಲಿ ಮನವಿಯನ್ನು ಮಾಡಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಅವರು ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ ಈಗಾಗಲೇ ಅನೇಕ ಸಿಬ್ಬಂದಿಗಳ ಕೊರತೆ ಇರುವ ಕಾರಣ ಆದಷ್ಟು ಬೇಗ ನೇಮಕಾತಿಯನ್ನು ನಡೆಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು.

ಅದಾದನಂತರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭೇಟಿ ನೀಡಿದಾಗ ಅವರು ಒಂದು ಅನುಪಾತ ಐದರಂತೆ ನೇಮಕಾತಿ ಪಟ್ಟಿಯನ್ನು ನಡೆಸಲಾಗುತ್ತದೆ ಅದಕ್ಕೆ ಸಾರಿಗೆ ಸಚಿವರ ಅನುಮತಿ ಬೇಕು ಎಂಬುದಾಗಿ ಹೇಳಿದ್ದರು. ಆದರೆ ಈಗ ಪ್ರಸ್ತುತದಲ್ಲಿ ಶ್ರೀರಾಮುಲು ಅವರು ನೂತನ ಸಾರಿಗೆ ಸಚಿವರಾದ ಕಾರಣ ಸಾರಿಗೆ ಇಲಾಖೆಯ ನೇಮಕಾತಿಗೆ ಅವರ ಅನುಮತಿ ಸಿಕ್ಕರೆ ಇನ್ನೊಂದು ತಿಂಗಳಿನ ಒಳಗಾಗಿ ನೇಮಕಾತಿ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನೂತನವಾಗಿ ಸಾರಿಗೆ ಸಚಿವರಾಗಿ ಆಯ್ಕೆಯಾಗಿರುವಂತ ಶ್ರೀರಾಮುಲು ಅವರು ಸಾರಿಗೆ ಇಲಾಖೆಯಲ್ಲಿ ಉದ್ಯೋಗ ಆಕಾಂಕ್ಷಿಗಳಾಗಿರುವ ಅಭ್ಯರ್ಥಿಗಳಿಗೆ ಅವರ ಕನಸನ್ನು ಈಡೇರಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತಾರೆಯೆ ಎಂಬುದನ್ನು ಕಾದುನೋಡಬೇಕಾಗಿದೆ. ಆದಷ್ಟು ಬೇಗ ಈ ನೇಮಕಾತಿ ಪ್ರಕ್ರಿಯೆ ಆರಂಭವಾದರೆ ಅಭ್ಯರ್ಥಿಗಳಿಗೂ ನಿರಾಳ ಎನಿಸುತ್ತದೆ. ಸಾರಿಗೆ ಇಲಾಖೆಯ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿರುವಂತಹ ಅಭ್ಯರ್ಥಿಗಳು ಕೂಡ ಆದಷ್ಟು ಬೇಗ ಈ ನೇಮಕಾತಿ ಪ್ರಕ್ರಿಯೆ ಮುಗಿಯಲಿ ಎಂದು ನಿರೀಕ್ಷಿಸುತ್ತಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!