ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ಉಪ ಜಾತಿಯಾದ ಬಂಜಾರ ಮತ್ತು ಲಂಬಾಣಿ ಸಮುದಾಯದ ಫಲಾಪೇಕ್ಷೆಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗಾದರೆ ಯಾವ ಯಾವ ಕೋರ್ಸುಗಳಿಗೆ ಯಾವ ಯಾವ ತರಬೇತಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದರ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಜೊತೆಗೆ ಅರ್ಜಿಯನ್ನು ಸಲ್ಲಿಸಲು ಯಾವ ಅರ್ಹತೆಗಳು ಬೇಕು ಯಾವ ದಾಖಲೆಗಳು ಬೇಕು ಮತ್ತು ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಅರ್ಜಿದಾರರಿಂದ ಯಾವ-ಯಾವ ತರಬೇತಿಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂಬುದನ್ನು ತಿಳಿಯಲು ನೀವು ಬಂಜಾರ ಸಮುದಾಯದ ಅಫೀಷಿಯಲ್ ವೆಬ್ಸೈಟ್ ಇದೆ ಅದನ್ನು ನೀವು ತೆರೆಯಬೇಕು ಅದನ್ನು ತೆರೆದಾಗ ಅಲ್ಲಿ ನಿಮಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಬೆಂಗಳೂರು ಎನ್ನುವುದು ಕಾಣಿಸುತ್ತದೆ ಅದರ ಕೆಳಗಡೆ ಒಂದು ಲೈನ್ ಹೋಗುತ್ತಿರುತ್ತದೆ ನಿರುದ್ಯೋಗ ಬಂಜಾರ ಅಥವಾ ಲಂಬಾಣಿ ಸಮುದಾಯದ ಯುವಕ ಯುವತಿಯರಿಗೆ ವಿವಿಧ ವೃತ್ತಿಗಳಿಗೆ ತರಬೇತಿಯನ್ನು ನೀಡಲು ನಿಗಮದಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಮುಂದೆ ಒಂದು ವಿಂಡೋ ಓಪನ್ ಆಗುತ್ತದೆ ಆ ವಿಂಡೋದಲ್ಲಿ ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡನೇ ಸಾಲಿನ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಪರಿಶಿಷ್ಟ ಜಾತಿಯ ಉಪ ಜಾತಿಯಾದ ಬಂಜಾರ ಅಥವಾ ಲಂಬಾಣಿ ಸಮುದಾಯದ ಫಲಾಪೇಕ್ಷೆಯಿಂದ ಅರ್ಜಿ ಆಹ್ವಾನ ಎಂಬುದು ಕಾಣಿಸುತ್ತದೆ. ಅದರ ಕೆಳಗೆ ಅರ್ಜಿದಾರರು ದಯವಿಟ್ಟು ಮೂಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಜೆರಾಕ್ಸ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಡಿ ಎಂದು ಕಾಣಿಸುತ್ತದೆ. ನೀವು ಜೆರಾಕ್ಸ್ ಪ್ರತಿಗಳನ್ನು ಅಪ್ಲೋಡ್ ಮಾಡಿದರೆ ನಿಮ್ಮ ಅರ್ಜಿ ತಿರಸ್ಕೃತ ಆಗುತ್ತದೆ. ನೀವು ಅರ್ಜಿಸಲ್ಲಿಸಲು ಸಪ್ಟೆಂಬರ್ ಹಾಡಿನಾರರಿಂದ ಹದಿನಾರು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರವರೆಗೆ ಅಂದರೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ.

ನಂತರ ಅಲ್ಲಿ ಅರ್ಜಿ ಸಲ್ಲಿಸಲು ಈ ಕೆಳಗಿನ ತರಬೇತಿಗಳ ಮೇಲೆ ಕ್ಲಿಕ್ ಮಾಡಿ ಎಂದು ಹೇಳಿದ್ದಾರೆ ಅದರ ಕೆಳಗೆ ಮೊದಲನೆಯದಾಗಿ ಲಘುವಾಹನ ಭಾರಿ ವಾಹನ ಜೆಸಿಬಿ ಮತ್ತು ಹಿಟಾಚಿ ಚಾಲನಾ ತರಬೇತಿ ಇದೆ. ಎರಡನೆಯದಾಗಿ ವಾಹನ ರಿಪೇರಿ ತಂತ್ರಜ್ಞ ತರಬೇತಿ ಕಾರ್ಯಕ್ರಮ ಬಿ ಎಂ ವಿ ಎನ್ ಟಿ ಎಫ್ ಎ ಸಹಯೋಗದೊಂದಿಗೆ.

ನಂತರ ಸೈನಿಕ ಮತ್ತು ಸಂಬಂಧಿತ ಪೂರ್ವಭಾವಿ ತಯಾರಿ ತರಬೇತಿ ಇದೆ ನಂತರ ಕಟ್ಟಡ ನಿರ್ಮಾಣ ತರಬೇತಿ ಕಾರ್ಮಿಕ ಸಹಯೋಗದೊಂದಿಗೆ ಜೊತೆಗೆ ಬಂಜಾರ ಸಾಂಪ್ರದಾಯಿಕ ವಾಜಾ ವಾದ್ಯ ತರಬೇತಿಯನ್ನು ನೀಡುತ್ತಾರೆ ನಂತರ ಸಾಂಪ್ರದಾಯಿಕ ಬಂಜಾರ ಕಸೂತಿ ಕಲೆತರಬೇತಿ ಇದೆ ಹಾಗೂ ಕಲಾಮೆಳವ ತರಬೇತಿ ಕೂಡ ಇದೆ ಇದರಲ್ಲಿ ನಿಮಗೆ ಯಾವ ಕಾರ್ಯಕ್ರಮದ ತರಬೇತಿಯನ್ನು ಪಡೆಯಲು ಇಷ್ಟ ಇದೆ ಅದರ ಮೇಲೆ ಕ್ಲಿಕ್ ಮಾಡಬೇಕು ಉದಾಹರಣೆಗೆ ನೀವು ಲಘುವಾಹನ ಭಾರಿ ವಾಹನ ಜೆಸಿಬಿ ಮತ್ತು ಹಿಟಾಚಿ ಚಾಲನಾ ತರಬೇತಿ ಇದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮುಂದೆ ಒಂದು ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಅದರಲ್ಲಿ ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಎನ್ನುವುದು ಕಾಣಿಸುತ್ತದೆ.

ಅದರ ಕೆಳಗೆ ಲೈಟ್ ಮೋಟರ್ ಅಂಡ್ ಬಾರಿ ಮೋಟಾರ್ ವಾಹನ ಚಾಲನಾ ತರಬೇತಿ ಎಂಬುದು ಬರುತ್ತದೆ ನೀವು ನಿಮ್ಮ ಜಿಲ್ಲೆ ಮತ್ತು ತಾಲೂಕನ್ನ ಆಯ್ಕೆಮಾಡಿಕೊಳ್ಳಬೇಕು ನಂತರ ನಿಮ್ಮ ತಾಂಡಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಕೆಳಗೆ ಕೇಳುವ ಎಲ್ಲ ಮಾಹಿತಿಯನ್ನು ನಮೂದಿಸಬೇಕು ಅಲ್ಲಿ ನಿಮ್ಮ ಇನ್ಕಮ್ ಕಾಸ್ಟ್ ಸರ್ಟಿಫಿಕೇಟ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಸಂಖ್ಯೆಯನ್ನು ನಿಮ್ಮ ಗುರುತಿನ ಚೀಟಿ ಸಂಖ್ಯೆಯನ್ನು ಕೇಳಿದ್ದಾರೆ ನಂತರ ನೀವು ಈ ಒಂದು ಯೋಜನೆಗೆ ಎಷ್ಟನೇ ಬಾರಿ ಅರ್ಜಿಯನ್ನು ಸಲ್ಲಿಸುತ್ತಿದ್ದಿರಿ ಎಂದು ಕೇಳಿದ್ದಾರೆ ನೀವು ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದರೆ ಅಲ್ಲಿ ಒಂದು ಎಂದು ಟೈಪ್ ಮಾಡಿ.

ನಂತರ ಅರ್ಜಿದಾರರ ಸ್ವಯಂ ಖಾತೆ ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ತುಂಬಬೇಕು ನಂತರ ನಿಮ್ಮ ಕುಟುಂಬದ ಸದಸ್ಯರ ಹೆಸರು ಮತ್ತು ಅಲ್ಲಿ ಕೇಳುವ ಮಾಹಿತಿಯನ್ನು ತುಂಬಿ ಆಡ್ ಎಂಬುದರ ಮೇಲೆ ಕ್ಲಿಕ್ ಮಾಡಿ ಹೀಗೆ ನಿಮ್ಮರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರ ಹೆಸರು ಇರುತ್ತದೆ ಅವರ ಹೆಸರನ್ನು ಸೇರಿಸಬೇಕಾಗುತ್ತದೆ. ಯಾವೆಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಎಂಬುದನ್ನು ನೋಡಿದರೆ ಮೊದಲಿಗೆ ನಿಮ್ಮ ಪಾಸ್ಪೋರ್ಟ್ ಅಳತೆಯ ಒಂದು ಫೋಟೋವನ್ನು ನಂತರ ನಿಮ್ಮ ಸಹಿಯನ್ನು ನಂತರ ನಿಮ್ಮ ಅಂಕಪಟ್ಟಿಯನ್ನು ನಂತರ ನಿಮ್ಮ ಜಾತಿ ಮತ್ತು ಉಪಜಾತಿ ಪ್ರಮಾಣ ಪತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಾಗುತ್ತದೆ

ನಂತರ ನಿಮ್ಮ ಚುನಾವಣಾ ಗುರುತಿನ ಚೀಟಿ ಅಥವಾ ಪಡಿತರ ಚೀಟಿಯನ್ನು ನಂತರ ಆಧಾರ ಕಾರ್ಡನ್ನು ನಂತರ ಬ್ಯಾಂಕ್ ಪಾಸ್ ಬುಕ್ ಅನ್ನು ಹೀಗೆ ಎಲ್ಲ ದಾಖಲೆಗಳನ್ನು ಸರಿಯಾಗಿ ಅಟ್ಯಾಚ್ ಮಾಡಿ ನಂತರ ಎಲ್ಲಿ ಕೇಳುವ ಎಲ್ಲ ಮಾಹಿತಿಯನ್ನು ತುಂಬಿದ ನಂತರ ನೀವು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬಹುದು. ನಿಮಗೆ ತರಬೇತಿಯನ್ನು ಎಲ್ಲಿ ಮತ್ತು ಹೇಗೆ ನೀಡುತ್ತಾರೆ ಎಂಬ ಪ್ರಶ್ನೆ ಇರಬಹುದು.

ನಾವು ಈಗಾಗಲೇ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ತಿಳಿಸಿದ್ದೇವೆ ಅದೇ ರೀತಿಯಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಒಂದು ಪ್ರಕಟಣೆಬಂದಿದೆ ಅದರಲ್ಲಿ ವಾಹನ ತರಬೇತಿಯನ್ನು ಕೆಎಸ್ಆರ್ಟಿಸಿ ತರಬೇತಿ ಕೇಂದ್ರದ ಮೂಲಕ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತರಬೇತಿಯನ್ನು ನೀಡುತ್ತಾರೆ ಹಾಗೆ ವಾಹನ ರಿಪೇರಿ ತರಬೇತಿಯನ್ನು ಕೆಲವು ಇಂಟರ್ನ್ಯಾಷನಲ್ ಸ್ಕೂಲ್ ಗಳು ಇರುತ್ತವೆ ಅದರ ಸಹಯೋಗದೊಂದಿಗೆ ಎರಡರಿಂದ ನಾಲ್ಕು ತಿಂಗಳ ಅವಧಿಗೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ರಿಪೇರಿಯ ತರಬೇತಿಯನ್ನು ನೀಡುತ್ತಾರೆ ಸೈನಿಕರ ತರಬೇತಿಯನ್ನು ಎಲ್ಲಿ ಕೊಡುತ್ತಾರೆ ಎಂಬುದರ ಮಾಹಿತಿಯನ್ನು ನೀಡಿಲ್ಲ ನಂತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ತರಬೇತಿಯನ್ನು ಕಾರ್ಮಿಕ ಸಹಯೋಗದೊಂದಿಗೆ ಮತ್ತು ಕಸೂತಿ ತರಬೇತಿಯನ್ನು ಮಹಿಳೆಯರಿಗೆ ನೀಡುತ್ತಾರೆ.

ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದಿಂದ ಈ ರೀತಿಯಾಗಿ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಬಂಜಾರ ಹಾಗೂ ಲಮಾಣಿ ಸಮುದಾಯದ ನಿರುದ್ಯೋಗ ಯುವಕ ಯುವತಿಯರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ನೀವು ಕೂಡ ಬಂಜಾರ ಅಥವಾ ಲಮಾಣಿ ಸಮುದಾಯಕ್ಕೆ ಸೇರಿದವರಾಗಿದ್ದರೆ ಯೋಜನೆಯ ಲಾಭವನ್ನು ಪಡೆದುಕೊಳ್ಳಿ ಜೊತೆಗೆ ನಿಮಗೆ ಬಂಜಾರ ಹಾಗೂ ಲಂಬಾಣಿ ಸಮುದಾಯಕ್ಕೆ ಸೇರಿದ ಸ್ನೇಹಿತರಿದ್ದರೆ ಅವರಿಗೂ ಈ ಮಾಹಿತಿಯನ್ನು ತಿಳಿಸಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!