ಆರ್.ಟಿ.ಓ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ಹಾಗೂ ಇತರೆ ಮಾಹಿತಿಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಒಟ್ಟೂ ಎರಡು ಸಾವಿರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಮೊದಲಿಗೆ ಸೇವಕ ಎನ್ನುವ ಹುದ್ದೆಯ ಬಗ್ಗೆ ನೋಡೋಣ. ಈ ಸೇವಕ ಅಥವಾ ಪ್ಯೂನ್ ಹುದ್ದೆಗೆ ಸಂಬಳ ಪ್ರತೀ ತಿಂಗಳು ಹದಿನೇಳರಿಂದ ಇಪ್ಪತ್ತೆಂಟು ಸಾವಿರದವರೆಗೆ ಇರುತ್ತದೆ. ಈ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಹತ್ತನೇ ತರಗತಿಯಲ್ಲಿ ಪಾಸ್ ಆಗಿರಬೇಕು. ಈ ಹುದ್ದೆಗಳು ಒಟ್ಟೂ 244 ಹುದ್ದೆಗಳು ಖಾಲಿ ಇದ್ದು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಎರಡನೆಯದಾಗಿ ಬೆರಳಚ್ಚುಗಾರರು ಎಂಬ ಹುದ್ದೆ ಇದಾಗಿದ್ದು 75 ಹುದ್ದೆಗಳು ಖಾಲಿ ಇದ್ದಿರುತ್ತವೆ. ಇವರಿಗೆ ಇಪ್ಪತ್ತೊಂದು ಸಾವಿರದಿಂದ ನಲವತ್ತೆರಡು ಸಾವಿರದವರೆಗೆ ವೇತನ ನೀಡಲಾಗುವುದು. ಅದೇ ರೀತಿ ಚಾಲಕ ಹುದ್ದೆಗಳಿಗೆ 98 ಹುದ್ದೆಗಳು ಖಾಲಿ ಇದ್ದಿರುತ್ತವೇ. ಇವರಿಗೆ ನಾಲ್ಕು ವರ್ಷಗಳ ಕಾಲ ಲಘು ವಾಹನಗಳನ್ನು ಚಲಾಯಿಸಿದ ಅನುಭವ ಇರಬೇಕು ಹಾಗೂ ಲೈಸೆನ್ಸ್ ಹೊಂದಿರಬೇಕು ಹಾಗೂ ಕನ್ನಡ ಮಾಧ್ಯಮದಲ್ಲಿ ಹತ್ತನೆತರಗತಿ ಉತ್ತೀರ್ಣ ಆಗಿರಬೇಕು ಎಂದು ತಿಳಿಸಿದ್ದಾರೆ. ಹಾಗೇ ಇವರಿಗೂ ಸಹ ವೇತನ ಇಪ್ಪತ್ತೊಂದು ಸಾವಿರದಿಂದ ನಲವತ್ತೆರಡು ಸಾವಿರದವರೆಗೆ ವೇತನ ನೀಡಲಾಗುವುದು.
ಹಿರಿಯ ಬೆರಳಚ್ಚುಗಾರರು ಈ ಹುದ್ದೆಗೆ 9 ಹುದ್ದೆಗಳು ಖಾಲಿ ಇದ್ದು ಇವರಿಗೆ ಇಪ್ಪತ್ತೇಳು ಸಾವಿರದಿಂದ ಐವತ್ತೆರಡು ಸಾವಿರದವರೆಗೆ ವೇತನ ನೀಡಲಾಗುವುದು. ನಂತರದ ಹುದ್ದೆ ಹಿರಿಯ ಚಾಲಕರು ಹುದ್ದೆ ಆಗಿದ್ದು, ಇಪ್ಪತ್ನಾಲ್ಕು ಹುದ್ದೆಗಳು ಇದ್ದು ಇವರಿಗೂ ಸಹ ಇಪ್ಪತ್ತೇಳು ಸಾವಿರದಿಂದ ಐವತ್ತೆರಡು ಸಾವಿರದವರೆಗೆ ವೇತನ ನೀಡಲಾಗುವುದು.
ನಂತರದ ಹುದ್ದೆ ಪ್ರಥಮ ದರ್ಜೆ ಸಹಾಯಕರು ಎಂದಿದ್ದು ಅವರಿಗೆ ವಿದ್ಯಾರ್ಹತೆ ಡಿಗ್ರೀ ಆಗಿರಬೇಕು ಎಂದಿದೆ ಹಾಗೂ ಒಟ್ಟೂ ಖಾಲಿ ಇರುವ ಹುದ್ದೆಗಳ 102 ಆಗಿದೆ. ಇವರಿಗೆ ಸಹ ಇಪ್ಪತ್ತೇಳು ಸಾವಿರದಿಂದ ಐವತ್ತೆರಡು ಸಾವಿರದವರೆಗೆ ವೇತನ ನೀಡಲಾಗುವುದು. ನಂತರದ ಹುದ್ದೆ ಹಿರಿಯ ಮೋಟಾರು ವಾಹನ ನಿರೀಕ್ಷಕರು ಆಗಿದ್ದು ಇವರಿಗೆ ವೇತನ 40 ಸಾವಿರದಿಂದ 70 ಸಾವಿರದ ವರೆಗೂ ವೇತನ ನೀಡಲಾಗುವ ಈ ಹುದ್ದೆಯಲ್ಲಿ ಒಟ್ಟೂ 122 ಹುದ್ದೆಗಳು ಖಾಲಿ ಇವೆ. ಮೋಟಾರು ವಾಹನ ನಿರೀಕ್ಷಕರು ಹುದ್ದೆಗೆ 317 ಹುದ್ದೆಗಳು ಖಾಲಿ ಇದ್ದು ಇವರ ವೇತನ 33 ಸಾವಿರದಿಂದ 60 ಸಾವಿರದವರೆಗೆ ಇರುತ್ತದೆ. ವಿದ್ಯಾರ್ಹತೆ ಹತ್ತನೇ ತರಗತಿ ಪಾಸ್ ಆಗಿರಬೇಕು ಹಾಗೂ ಲೈಸೆನ್ಸ್ ಹೊಂದಿರಬೇಕು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಈ ಹುದ್ದೆಗೆ 52 ಸಾವಿರದಿಂದ 97 ಸಾವಿರದ ವರೆಗೂ ವೇತನ ನೀಡಲಾಗುವುದು ಇದಕ್ಕೆ ಒಟ್ಟೂ 33 ಹುದ್ದೆಗಳು ಖಾಲಿ ಇವೆ. ಕಾನೂನು ವಿಶ್ವ ವಿದ್ಯಾನಿಲಯದಿಂದ ಆಟೋ ಮೊಬೈಲ್ ಪದವಿಯನ್ನು ಹೊಂದಿರಬೇಕು. ಇದರ ಕುರಿತು ಸಂಪೂರ್ಣ ಮಾಹಿತಿ ಮುಂದಿನ ತಿಂಗಳು ದೊರೆಯಲಿದೆ.
ಅದೇ ರೀತಿಯಾಗಿ ಕರ್ನಾಟಕ ಮಿನರಲ್ ಕಾರ್ಪೋರೇಶನ್ ಲಿಮಿಟೆಡ್ ಅವರು ಸಹ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಹುದ್ದೆಗಳು ಈ ರೀತಿಯಾಗಿವೆ. ವ್ಯವಸ್ಥಾಪಕ ಗುತ್ತಿಗೆ ಪರಿಶೋಧನೆ ಎಂಬ ಎರಡು ಹುದ್ದೆಗಳು ಖಾಲಿ ಇದ್ದು ಇವರಿಗೆ 50 ಸಾವಿರ ರೂಪಾಯಿ ವೇತನ ನೀಡಲಾಗುವುದು. ಹಾಗೇ ಕಿರಿಯ ವ್ಯವಸ್ಥಾಪಕ ಗುತ್ತಿಗೆ ಪರಿಶೋಧನೆ ಎಂಬ ಹುದ್ದೆಗೆ 45 ಸಾವಿರ ರೂಪಾಯಿ ವೇತನ ನೀಡಲಾಗುವುದು. ಇಲ್ಲಿ ಎರಡು ಹುದ್ದೆಗಳು ಖಾಲಿ ಇರುತ್ತವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430