ಜ್ಯೋತಿಷ್ಯಶಾಸ್ತ್ರದಲ್ಲಿರುವ 12 ರಾಶಿಗಳೂ ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. 12 ರಾಶಿಗಳಲ್ಲಿ ಬರುವ ಮೊದಲ ರಾಶಿ ಮೇಷ ರಾಶಿ. ಈ ರಾಶಿಯಲ್ಲಿ ಜನಿಸಿರುವವರು ಯಾವ ರೀತಿ ಗುಣ ಸ್ವಭಾವ ಹೊಂದಿರುತ್ತಾರೆ ಹಾಗೂ ಅವರ ಜೀವನದ ರಹಸ್ಯಗಳನ್ನು ಈ ಲೇಖನದಲ್ಲಿ ನೋಡೋಣ

ಮೇಷ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಏನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಾರೆ ಆದರೆ ಅವರಲ್ಲಿ ಸ್ವಲ್ಪ ಸೋಮಾರಿತನ ಇರುತ್ತದೆ. ಅವರು ಬೇರೆಯವರ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವತಂತ್ರವಾಗಿ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಅವರು ಬೇರೆಯವರನ್ನು ಅನುಸರಿಸುವುದಿಲ್ಲ ಬೇರೆಯವರು ತಮ್ಮನ್ನು ಅನುಸರಿಸಲು ಅಂದರೆ ಲೀಡರ್ ಆಗಲು ಬಯಸುತ್ತಾರೆ.

ಮೇಷ ರಾಶಿಯವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಅವರು ಸುಲಭವಾಗಿ ಯಾರಿಗೂ ಅರ್ಥ ಆಗುವುದಿಲ್ಲ. ಅವರನ್ನು ನೋಡಿದಾಗ ಅವರಿಗೆ ಅಹಂಕಾರ ಇದೆ ಎಂದು ಅನಿಸುತ್ತದೆ ಆದರೆ ಅವರ ಬಗ್ಗೆ ಸರಿಯಾಗಿ ತಿಳಿಯಲು ಅವರೊಂದಿಗೆ ಸಮಯ ಕಳೆಯಬೇಕು. ಈ ರಾಶಿಯವರು ಯಾವುದೇ ಕೆಲಸವನ್ನಾದರೂ ಅತ್ಯಂತ ಶ್ರದ್ಧೆಯಿಂದ, ಶಿಸ್ತಿನಿಂದ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದಿಲ್ಲ ಮತ್ತು ಅವರು ತಾವು ಹಿಡಿದ ಕೆಲಸವನ್ನು ಆತುರಾತುರವಾಗಿ ಮಾಡಿ ಮುಗಿಸುವುದಿಲ್ಲ.

ಮೇಷ ರಾಶಿಯವರಿಗೆ ಯಾರೂ ತಮ್ಮತ್ತ ಬೊಟ್ಟು ಮಾಡಿ ತೋರಿಸುವುದು ಇಷ್ಟ ಆಗುವುದಿಲ್ಲ ಹಾಗೆಯೇ ಅವರು ಬೇರೆಯವರು ಅವರತ್ತ ಬೊಟ್ಟು ಮಾಡಿ ತೋರಿಸುವ ಕೆಲಸವನ್ನು ಮಾಡುವುದಿಲ್ಲ. ಅವರು ಯಾವಾಗಲೂ ನಾಯಕರಾಗಿರಲು ಇಷ್ಟ ಪಡುತ್ತಾರೆ. ಅವರು ಎಲ್ಲರಂತೆ ತಾವಿರುವುದಕ್ಕಿಂತ ತಾವು ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ಯಾರಾದರೂ ಅವರ ಬಳಿ ಸಲಹೆ ಕೇಳಿದರೆ ತಕ್ಷಣಕ್ಕೆ ಯೋಚಿಸದೆ ಸಲಹೆ ನೀಡುತ್ತಾರೆ ಆನಂತರ ಇನ್ನೂ ಯೋಚಿಸಿ ಉತ್ತಮವಾದ ಸಲಹೆ ನೀಡಬಹುದಿತ್ತು ಎಂದು ಅಂದುಕೊಳ್ಳುತ್ತಾರೆ.

ಈ ರಾಶಿಯವರಿಗೆ ದೊಡ್ಡದೊಡ್ಡ ಸಾಧನೆಯನ್ನು ಮಾಡುವುದೆಂದರೆ ಬಹಳ ಇಷ್ಟ ಹಾಗೆಯೇ ಅವರಿಗೆ ಸಾಹಸದ ಬಗ್ಗೆ ಭಯವು ಇರುತ್ತದೆ ಆದ್ದರಿಂದ ಅವರು ಬೇಗನೆ ಯಾವ ಸಾಹಸಕ್ಕೂ ಕೈ ಹಾಕುವುದಿಲ್ಲ. ಅವರು ಒಂಟಿಯಾಗಿ ಇರುವುದಕ್ಕಿಂತ ಎಲ್ಲರೊಂದಿಗೆ ಇರುವುದಕ್ಕೆ ಇಷ್ಟಪಡುತ್ತಾರೆ, ಅವರು ಸಂತೋಷದ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಮೇಷ ರಾಶಿಯವರು ಮನಸ್ಸಿನಲ್ಲಿ ಯಾವ ವಿಷಯವನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ ಹಾಗಂತ ತಮ್ಮ ಎಲ್ಲಾ ವಿಷಯಗಳನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅವರು ರಹಸ್ಯವನ್ನು ಮುಚ್ಚಿಡಲು ಬಯಸುತ್ತಾರೆ. ಅವರು ಬೇರೆಯವರೊಂದಿಗೆ ಮಾತನಾಡುವಾಗ ಸ್ಪಷ್ಟತೆ ಇರುತ್ತದೆ.

ಮೇಷ ರಾಶಿಯವರು ಕಪ್ಪುಬಣ್ಣವನ್ನು ಇಷ್ಟಪಡುವುದಿಲ್ಲ ಬಿಳಿ ಮತ್ತು ಬೂದು ಬಣ್ಣವನ್ನು ಇಷ್ಟಪಡುತ್ತಾರೆ. ಅವರು ಯಾವಾಗಲೂ ಜಾಗೃತರಾಗಿ ಉತ್ಸಾಹದಿಂದ ಇರುತ್ತಾರೆ. ಮೇಷ ರಾಶಿಯವರು ಸುಲಭವಾಗಿ ಯಾವುದನ್ನು, ಯಾರನ್ನು ನಂಬುವುದಿಲ್ಲ. ಅವರನ್ನು ಸುಲಭವಾಗಿ ಒಪ್ಪಿಸಲು ಸಾಧ್ಯವಿಲ್ಲ. ಮೇಷ ರಾಶಿಯವರು ಯಾರನ್ನಾದರೂ ನಂಬಬೇಕಾದರೆ ಕೆಲವು ಪರೀಕ್ಷೆಗಳಿಂದ ಅವರನ್ನು ನಂಬುತ್ತಾರೆ. ಮೇಷ ರಾಶಿಯವರು ಯಾರನ್ನಾದರೂ ಒಮ್ಮೆ ನಂಬಿದರೆ ಯಾರಿಂದಲೂ ಆ ನಂಬಿಕೆಯನ್ನು ಹಾಳು ಮಾಡಲು ಸಾಧ್ಯವಿಲ್ಲ. ಅವರಿಗೆ ಸುಳ್ಳು ಹೇಳುವುದು ಇಷ್ಟವಾಗುವುದಿಲ್ಲ.

ಮೇಷ ರಾಶಿಯವರಿಗೆ ಕೋಪ ಬೇಗನೆ ಬರುತ್ತದೆ ಹಾಗೆಯೇ ತಾಳ್ಮೆಯೂ ಇರುತ್ತದೆ. ಅವರು ಬೇರೆಯವರಿಗೆ ಜವಾಬ್ದಾರಿ ವಹಿಸಿದರೆ ಅವರಿಗೆ ಕೆಲಸ ಮಾಡಲು ಸ್ವಾತಂತ್ರ ನೀಡುತ್ತಾರೆ, ಅವರ ಮೇಲೆ ದರ್ಪ ತೋರಿಸುವುದಿಲ್ಲ. ಮೇಷ ರಾಶಿಯವರು ವ್ಯಯಕ್ತಿಕ ವಿಚಾರಗಳಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಬೇರೆಯವರ ವಿಷಯದಲ್ಲಿ ಅನಾವಶ್ಯಕ ಮೂಗು ತೂರಿಸುವುದಿಲ್ಲ, ಅವರಿಗೆ ಅಪಹಾಸ್ಯ ಮಾಡುವುದಿಲ್ಲ. ಮೇಷ ರಾಶಿಯವರು ಜಾಗೃತಿಯಿಂದ ಆರ್ಥಿಕ ವ್ಯವಹಾರ ಮಾಡುತ್ತಾರೆ ಆದರೂ ಉಳಿತಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ.

ಈ ರಾಶಿಯವರು ಎಷ್ಟೇ ಸಂಪಾದಿಸಿದರೂ ಆತುರದಿಂದ ಬೇಗ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಮೇಷ ರಾಶಿಯವರು ಯಾವುದಾದರೂ ವಸ್ತುವನ್ನು ಕಳೆದುಕೊಂಡ ನಂತರವೇ ಅದರ ಬೆಲೆಯನ್ನು ತಿಳಿದುಕೊಳ್ಳುತ್ತಾರೆ. ಈ ರಾಶಿಯವರು ಎಲ್ಲರನ್ನು ಸಮಾನವಾಗಿ ನೋಡುತ್ತಾರೆ, ಅವರಿಗೆ ಸುಳ್ಳು ಹೇಳುವವರನ್ನು ಕಂಡರೆ ಆಗುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!