ನಮ್ಮ ರಾಜ್ಯದಲ್ಲಿರುಗ ಸುಮಾರು 195 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರವೇ ಅಧಿಕೃತವಾಗಿ ಘೋಷಣೆ ಮಾಡಿದ್ದು, ಈ ರಾಜ್ಯಗಳಲ್ಲಿನ ರೈತರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಹಾಗಿದ್ದಲ್ಲಿ, ರೈತರು ಈ ಪರಿಹಾರ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು? ಎಷ್ಟು ಎಕರೆ ಭೂಮಿಗೆ ಎಷ್ಟು ಪರಿಹಾರ ಹಣ ಸಿಗುತ್ತದೆ? ಇದೆಲ್ಲಬನ್ನು ತಿಳಿಸಿಕೊಡುತ್ತೇವೆ ನೋಡಿ..
ನಿನ್ನೆ ರಾಜ್ಯದ ಸಚಿವ ಸಂಪುಟದ ಸಭೆಯಲ್ಲಿ ನಡೆದ ಚರ್ಚೆಯ ಪ್ರಕಾರ ರಾಜ್ಯದ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ವಿಚಾರದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ, 2020ರ ಕೇಂದ್ರ ಸರ್ಕಾರ ಬರ ನಿರ್ವಹಣೆಯ ಕೈಪಿಡಿ, 2020ರ ಬರನಿರ್ವಹಣೆಯ ಮಾನದಂಡಗಳ ಅನುಸಾರ, ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಬಗ್ಗೆ ಸಿಕ್ಕಿರುವ ವರದಿಯ ಪ್ರಕಾರ, ನಮ್ಮ ರಾಜ್ಯದ 21 ಜಿಲ್ಲೆಗಳಲ್ಲಿ 195 ತಾಲೂಕುಗಳಲ್ಲಿ ಮುಂಗಾರಿನ ತೊಂದರೆಯ ಕಾರಣ..
ನಮ್ಮ ರಾಜ್ಯದಲ್ಲಿರುವ ಒಟ್ಟು ಇರುವ ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರಪೀಡಿತ ಪರಿಸ್ಥಿತಿ ಉಂಟಾಗಿದೆ ಎಂದು ಇವುಗಳಲ್ಲಿ 161 ತಾಲೂಕುಗಳು ಅತಿಯಾಗಿ ಬರ ಉಂಟಾಗಿರುವ ತಾಲೂಕುಗಳು, 34 ತಾಲೂಕುಗಳು ಸಾಮಾನ್ಯವಾಗಿ ಬರಪೀಡಿತ ಉಂಟಾಗಿರುವ ತಾಲೂಕುಗಳು ಎಂದು ಪರಿಗಣಿಸಲಾಗಿದೆ. ಈ ತಾಲ್ಲೂಕುಗಳಿಗೆ ಪರಿಹಾರ ನೀಡಬೇಕು, 6 ತಿಂಗಳ ಒಳಗೆ ಇದೆಲ್ಲವೂ ನಡೆಯಬೇಕು ಎಂದು ಸರ್ಕಾರ ಘೋಷಣೆ ಮಾಡಿದೆ.
ಇದೀಗ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಬರನಿರ್ವಹಣೆ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದೆ. ಅವರಿಗೆ ಸರ್ಕಾರವು MDRF, SDRF ನಿಯಮಗಳನ್ನಿ ಅನ್ವಯಿಸುತ್ತದೆ, ಅವರುಗಳಿಗೆ ಮಾರ್ಗಸೂಚಿಗಳನ್ನು ಸಹ ನೀಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ನೋಡುವುದಾದರೆ, ತೀವ್ರ ಬರಪೀಡಿತ ತಾಲೂಕುಗಳ ಲಿಸ್ಟ್ ಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿತ್ರದುರ್ಗ ಹೀಗೆ ಒಟ್ಟು 161 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಈ ವರ್ಷ ಸರಿಯಾಗಿ ಮಳೆ ಬರದೆ, ನಷ್ಟ ಅನುಭವಿಸುತ್ತಿರುವ ಈ ತಾಲ್ಲೂಕುಗಳ ರೈತರಿಗೆ ಸರ್ಕಾರದಿಂದ ಪರಿಹಾರ ಮಾಡಿಕೊಡಲಾಗುತ್ತದೆ. ಎಲ್ಲಾ ರೈತರು ಕೂಡ ಈ ಹೊಸ ಯೋಜನೆಯ ಫಲವನ್ನು ಪಡೆದುಕೊಳ್ಳಬಹುದು. ಇದನ್ನೂ ಓದಿ: SBI ಗ್ರಾಹಕರಿಗೆ ಹೊಸ ನಿಯಮ, ಸೆಪ್ಟೆಂಬರ್ 30ರ ಒಳಗೆ ಈ ಕೆಲಸವನ್ನು ತಪ್ಪದೇ ಮಾಡಿ..