ಸರ್ಕಾರವು ಬಡವರಿಗೆ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಈ ಯೋಜನೆಗಳಲ್ಲಿ ಸಾಕಷ್ಟು ರೈತರು ಈ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ಅದೇ ನಿಟ್ಟಿನಲ್ಲಿ ರೈತರು ಅಥವಾ ಸಾಮಾನ್ಯ ವರ್ಗದ ಜನರು ತನ್ನ ಅಧಾಯ ಮೂಲವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಹಸು ಸಾಕಾಣಿಕೆ, ಕುರಿ, ಕೋಳಿಸಾಕಾಣಿಕೆಗೆ ಶೆಡ್ ನಿರ್ಮಿಸಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದ್ದರೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಹಾಗಾದ್ರೆ ಬನ್ನಿ ಈ ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ? ಈ ಯೋಜನೆಯ ಸೌಲಭ್ಯ ಪಡೆಯಲು ಏನೆಲ್ಲಾ ದಾಖಲೇಬೇಕು ಅನ್ನೋದನ್ನ ತಿಳಿಯೋಣ.
ರೈತರಿಗೆ ಆರ್ಥಿಕ ನೆರವು ನೀಡಲು: ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಿಸಲು 57,000 ರೂ.ಗಳ ಅನುದಾನಕ್ಕೆ ಅರ್ಜಿಆಹ್ವಾನಿಸಲಾಗಿದೆ, ಪ್ರಸ್ತುತ ಹವಾಮಾನ ಬದಲಾವಣೆಯ ಪರಿಸ್ಥಿತಿಗಳಲ್ಲಿ, ರೈತ ವರ್ಗವು ಸಾಕಷ್ಟು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ಪರಿಸ್ಥಿತಿಗಳಿವೆ ಮತ್ತು ಅಂತಹ ಪರಿಸ್ಥಿತಿಗಳಲ್ಲಿ, ರೈತರು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕುರಿ, ಕೋಳಿ, ದನ ಮತ್ತು ಹಂದಿಗಳನ್ನು ಸಾಕಬೇಕು. ಉದ್ಯೋಗ ಖಾತರಿ ಕಾರ್ಯಕ್ರಮ (mgnreg) ಕುರಿ, ಕೋಳಿ, ಹಸು ಮತ್ತು ಹಂದಿಗಳನ್ನು ಸಾಕಲು ಶೆಡ್‌ಗಳನ್ನು ನಿರ್ಮಿಸಲು ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಅನುದಾನವನ್ನು ಒದಗಿಸುತ್ತದೆ.
10 ಅಡಿ ಅಗಲ, 18 ಅಡಿ ಉದ್ದದ ಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಮೇವಿನ ತೊಟ್ಟಿ ನಿರ್ಮಾಣಕ್ಕೆ 57,ಸಾವಿರ ರೂ.ಗಳ ಸಹಾಯಧನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುವುದು. ಇದರಲ್ಲಿ 10,556 ರೂ ಕೂಲಿ ವೆಚ್ಚ ಒದಗಿಸಲಾಗುವುದು. 46,444 ರೂ. ವಸ್ತುವಿನ ಸಾಮಗ್ರಿ ವೆಚ್ಚದಲ್ಲಿ ಸೇರಿಸಲಾಗುತ್ತದೆ.
- ಕೊಟ್ಟಿಗೆಯನ್ನು ನಿರ್ಮಿಸಲು ಅನುದಾನಕ್ಕಾಗಿ ಯಾರು ಅರ್ಜಿ ಸಲ್ಲಿಸಬಹುದು?ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಅರ್ಜಿ ಸಲ್ಲಿಸಲು ಅರ್ಹರು.
- BPL ಕಾರ್ಡ ಹೊಂದಿರುವ ರೈತರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.
- ಅರ್ಜಿದಾರರು ಕನಿಷ್ಟ 4 ಜಾನುವಾರುಗಳನ್ನು ಹೊಂದಿರಬೇಕಾಗುತ್ತದೆ.
- ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಸಾಕಾಣಿಕೆ ಮಾಡಿರುವ ಕುರಿತು ದೃಡೀಕರಣ ಪ್ರಮಾಣ ಪತ್ರ ಪಡೆಯಬೇಕು.
- ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರು.
- ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆಯಲು ಜಾಬ್ ಕಾರ್ಡ ಅನ್ನು ಹೊಂದಿರಬೇಕು.
ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಿಮ್ಮ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ ನಂತರ ಅದನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಕ್ರಿಯಾ ಯೋಜನೆಗೆ ಗ್ರಾಮ ಪಂಚಾಯಿತಿ ಮಟ್ಟದ ಸಭೆಯಲ್ಲಿ ಅನುಮೋದನೆ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕಾರ್ಯಾದೇಶ ನೀಡಲಾಗುವುದು.
- ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
- ಅರ್ಜಿದಾರರ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾಬ್ ಕಾರ್ಡ್
- ಜಾನುವಾರು ಸಾಕಣೆಯನ್ನು ದೃಢೀಕರಿಸುವ ಪ್ರಮಾಣಪತ್ರ.
- ಬ್ಯಾಂಕ್ ಪಾಸ್ ಬುಕ್
- ಜಾತಿ ಮತ್ತು ಆದಾಯದ ಪ್ರಮಾಣಪತ್ರ
- ಹೆಚ್ಚಿನ ಮಾಹಿತಿಗಾಗಿ: ನಿಮ್ಮ ಗ್ರಾಮಪಂಚಾಯ್ತಿಯಲ್ಲಿ ವಿಚಾರಿಸಿ ಇನ್ನು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಹಾಯವಾಹಿ ಸಂಖ್ಯೆ 1800 425 8666