ಮುತ್ತೈದೆಯರು ಮನೆಯಲ್ಲಿ ಅಪ್ಪಿ ತಪ್ಪಿಯೂ ಸಹ ಮನೆಯಲ್ಲಿ ಇಂತಹ ತಪ್ಪುಗಳನ್ನ ಮಾಡಲೇ ಬಾರದು. ಆಚಾರ ವಿಚಾರಗಳು ಸಂಪ್ರಾದಾಯಗಳು ಪ್ರತಿಯೊಬ್ಬರ ಮನೆಯಲ್ಲೂ ಸಹ ಇರತ್ತೆ. ಆದರೂ ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲದೆಯೂ ಇಂತಹ ತಪ್ಪುಗಳು ನಡೆಯುತ್ತೆ. ಇದರಿಂದ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸದೆ ದಾರಿದ್ಯ ನೆಲೆಸುತ್ತದೆ. ಕೆಲವೊಮ್ಮೆ ನಿಮ್ಮ ಕಷ್ಟಗಳಿಗೆ ನೀವೇ ಕಾರಣ ಆಗಿರುತ್ತೀರ. ಇಂತಹ ತಪ್ಪುಗಳನ್ನ ಇವತ್ತಿನಿಂದಲೇ ಸರಿ ಮಾಡಿಕೊಂಡು ನೋಡಿ ನಿಮ್ಮ ಮನೆಯಲ್ಲಿ ಕೂಡ ಸುಖ ಶಾಂತಿ ನೆಲೆಸುತ್ತದೆ.

ಹೆಣ್ಣು , ಸ್ತ್ರೀ ಎಂದರೆ ದೇವಿಯ ಸ್ವರೂಪ ಅಂತ ಹೇಳ್ತಾರೆ. ಅದೇ ಹೆಣ್ಣುಮಕ್ಕಳು ಮನೆಯಲ್ಲಿ ಸುಖವಾಗಿ ಶಾಂತವಾಗಿ ಇದ್ದಾಗ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಆದರೆ ಈ ಕೆಲವೊಂದು ತಪ್ಪುಗಳನ್ನ ತಿದ್ದುಕೊಳ್ಳಬೇಕು. ಅವುಗಳೆಂದರೆ, ಯಾವುದೇ ದಿನ ಆದರೂ ಸಹ ಮುಸ್ಸಂಜೆ ವೇಳೆಯಲ್ಲಿ ಬಟ್ಟೆಗಳನ್ನ ತೊಳೆಯಬಾರದು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಬಟ್ಟೆಗಳನ್ನ ತೊಳೆಯಬಾರದು. ಇದು .ಆಹಾಲಕ್ಷ್ಮೀ ಮನೆಗೆ ಪ್ರವೇಶ ಮಾಡುವ ಸಮಯ ಆಗಿರುವುದರಿಂದ ಈ ಸಮಯದಲ್ಲಿ ಬಟ್ಟೆ ತೊಳೆಯಬಾರದು.

ಇನ್ನು ಹೆಂಗಸರಿಗೆ ತುಂಬಾ ಉದ್ದವಾಗಿ ಉಗುರು ಬೆಳೆಸುವ ಅಭ್ಯಾಸ ಇರತ್ತೆ. ಉದ್ದವಾದ ಉಗುರುಗಳನ್ನ ಬೆಳೆಸುವುದರಿಂದ ಕೋಪ ಹೆಚ್ಚು ಆಗತ್ತೆ ದಾರಿದ್ರ್ಯ ಲಕ್ಷ್ಮಿ ತಾಂಡವ ಆಡುತ್ತಾಳೆ. ಹಾಗಾಗಿ ಉದ್ದ ಉಗುರು ಬೆಳೆಸುವುದಾಗಲಿ ಅಥವಾ ಉಗುರು ಕಚ್ಚುವುದಾಗಲಿ ಮಾಡಬಾರದು. ಇದರಿಂದಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗತ್ತೆ ಹಾಗೂ ಅನಾರೋಗ್ಯ ಸಮಸ್ಯೆಯು ಆಗಬಹುದು. ಹೆಚ್ಚು ಸಮಯ ನಿದ್ರಿಸುವಂತಹ ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಆ ಮನೆಯಲ್ಲಿ ಮಹಾಲಕ್ಷ್ಮಿ ಇರಲ್ಲ. ದಾರಿದ್ರ್ಯ ನೆಲೆಸುತ್ತದೆ ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸು ಸಿಗಲ್ಲ. ಕೆಲವು ಹೆಂಗಸರು ಮಧ್ಯಾನ್ಹದ ವೇಳೆ ಮಲಗುವುದು ಅಥವಾ ಬೆಳಿಗ್ಗೆ ಲೇಟ್ ಆಗಿ ಏಳುವುದು ಹೀಗೆ ಹೆಚ್ಚು ನಿದ್ರೆ ಮಾಡುತ್ತಾರೆ. ಇಂತಹ ತಪ್ಪುಗಳನ್ನ ಮಾಡಬಾರದು.

ಹಾಗೆ ಮಂಗಳವಾರ ಮತ್ತು ಶುಕ್ರವಾರದ ದಿನ ಹೆಣ್ಣು ಮಕ್ಕಳು ಮನೆಯಲ್ಲಿ ಕಣ್ಣೀರು ಹಾಕಬಾರದು. ಕೆಲವರು ಮಾನಸಿಕವಾಗಿ ನೋವು ಇದ್ದವರು ಯಾವಾಗಲೂ ಕಣ್ಣೀರು ಹಾಕುತ್ತ ಇರುತ್ತಾರೆ. ಇದು ಮನೆಗೆ ಶ್ರೇಯಸ್ಸು ಅಲ್ಲ. ಮನೆಯ ಏಳ್ಗೆ ಆಗಬೇಕು ಅಂದರೆ ಆ ಮನೆಯ ಹೆಣ್ಣು ನಗು ನಗುತ್ತಾ ಇರಬೇಕು. ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತ ಇದ್ದರೇ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಏಳ್ಗೆ ಆಗುವುದಿಲ್ಲ ಯಾವ ಕೆಲಸದಲ್ಲಿಯೂ ಯಶಸ್ಸು ಸಿಗಲ್ಲ.

ದೇವರಿಗೆ ಪ್ಲಾಸ್ಟಿಕ್ ಹೂವುಗಳನ್ನು ದೇವರಿಗೆ, ದೇವರ ಕೊನೆಯ ಬಾಗಿಲಿಗೆ ಹಾಕಬಾರದು. ಎಷ್ಟೋ ಜನರಿಗೆ ರಂಗೋಲಿ ಹಾಕೋಕೆ ಬರಲ್ಲ ಆದ್ರೂ ಸಹ ರಂಗೋಲಿ ಹಾಕೋದು ಕಲಿತುಕೊಂಡು ಪ್ರತೀ ದಿನ ಮನೆಯ ಮುಂದೆ ರಂಗೋಲಿ ಹಾಕಿ ಮಹಾಲಕ್ಷ್ಮೀ ದೇವಿಯನ್ನ ಸ್ವಾಗತಿಸಬೇಕು. ನಿಮ್ಮ ಕುಟುಂಬ ಮನೆ ಶಾಂತಿಯಾಗಿ ಇರಬೇಕು ಅಂದ್ರೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮನೆಯ ಮುಂದೆ ರಂಗೋಲಿ ಹಾಕಬೇಕು.

ಇನ್ನು ಎಷ್ಟೋ ಜನರ ಮನೆಯಲ್ಲಿ ತುಳಸಿ ಗಿಡವೆ ಇರಲ್ಲ ಇದ್ರು ಸಹ ಪ್ರತಿ ದಿನ ಪೂಜೆ ಮಾಡಲ್ಲ. ಆದ್ರೆ ತಪ್ಪದೆ ಪ್ರತೀ ದಿನ ತುಳಸಿ ಪೂಜೆಯನ್ನ ಮಾಡಬೇಕು. ತುಳಸೀ ಗಿಡ ಇಟ್ಟರೆ ಮನೆಯ ಏಳ್ಗೆ ಆಗತ್ತೆ. ತುಳಸಿ ಗಿಡ ಚೆನ್ನಾಗಿ ಹಸಿರಾಗಿ ಬೆಳೆಯುತ್ತ ಇದ್ದರೆ ನಿಮ್ಮ ಮಮೆಯಲ್ಲಿ ಕೂಡ ನೆಮ್ಮದಿ, ಶಾಂತಿ, ಆರೋಗ್ಯ, ಸಂಪತ್ತು ಇರತ್ತೆ ಎನ್ನುವ ಸೂಚನೆಯನ್ನ ನೀಡುತ್ತದೆ. ಅದೇ ತುಳಸಿ ಗಿಡ ಒಣಗುತ್ತ ಇದ್ದರೆ, ಮನೆಯಲ್ಲಿ ಸಮಸ್ಯೆ ಉಂಟಾಗತ್ತೆ ಎನ್ನುವ ಸೂಚನೆ ನೀಡುತ್ತದೆ ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಸಹ ತುಳಸಿ ಗಿಡ ಇರಬೇಕು ಪೂಜೆ ಕೂಡ ಮಾಡಬೇಕು. ಇನ್ನು ಕೆಲವರು ಕೂದಲು ಬಿಟ್ಟುಕೊಂಡು ಪೂಜೆ ಮಾಡುತ್ತಾರೆ ಆದರೆ ಕೂಡಲನ್ನ ಒಣಗಿಸಿದ ನಂತರವೇ ಕೂದಲು ಕಟ್ಟಿಮೊಂಡು ಪೂಜೆ ಮಾಡಬೇಕು. ಎಷ್ಟೋ ಜನ ಹೆಣ್ಣು ಮಕ್ಕಳು ತಲೆಗೆ ಸ್ನಾನ ಮಾಡಿ ತಲೆಗೆ ಟವೆಲ್ ಕಟ್ಟಿಕೊಂಡು ಪೂಜೆ ಮಾಡಿತ್ತಾರೆ ಆದರೆ ಈ ರೀತಿಯಾಗಿ ಕೂದಲು ಒದ್ದೆ ಇಟ್ಟುಕೊಂಡು ಪೂಜೆ ಮಾಡಬಾರದು. ಪುಣ್ಯ ಕ್ಷೇತ್ರಗಳಲ್ಲಿ ನದಿಗಳಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬಹುದು ಅಲ್ಲಿ ವಿಶೇಷ ಪುಣ್ಯ ಸಿಗತ್ತೆ ಆದರೆ ಮನೆಯಲ್ಲಿ ಮಾತ್ರ ಒದ್ದೆ ಕೂದಲು ಬಿಟ್ಟುಕೊಂದು ಪೂಜೆ ಮಾಡಲೇಬಾರದು. ಪೂಜೆಯ ಫಲ ಕೊಡುವುದಿಲ್ಲ. ನಾವು ಸ್ನಾನ ಮಾಡುವುದುಐಳಿಗೆ ಕಳೆದುಕೊಳ್ಳಲು. ಹಾಗಿದ್ದಾಗ ಒದ್ದೆ ಕೂದಲು ಬಿಟ್ಟುಕೊಂಡು ನೀರು ಬಿಟ್ಟುಕೊಂಡು ಪೂಜೆ ಮಾಡಬಾರದು

ಇಂತಹ ಸಣ್ಣ ಪುಟ್ಟ ತಪ್ಪುಗಳನ್ನ ಮುತ್ತೈದೆಯರು ಮಾಡಲೇಬಾರದು. ಇವುಗಳನ್ನ ಮಾಡುವುದರುಣದ ಮನೆಯ ಏಳ್ಗೆ ಆಗಲ್ಲ ನೆಮ್ಮದಿ ಇರಲ್ಲ. ಹಾಗಾಗಿ ಮನೆಯಲ್ಲಿ ಶಾಂತಿ ನೆಲೆಸಲು ಆದಷ್ಟು ಬೇಗ ಇಂತಹ ಚಿಕ್ಕ ತಪ್ಪುಗಳನ್ನು ತಿದ್ದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!