ಜೀವನದಲ್ಲಿ ಎಲ್ಲರು ದುಡಿಯುವುದು ಹೊಟ್ಟೆಗಾಗಿ ಹಾಗು ಬಟ್ಟೆಗಾಗಿ ಕೆಲವೊಮ್ಮೆ ಎಷ್ಟೇ ದುಡಿದರು ಕೂಡ ಕೈಯಲ್ಲಿ ಹಣ ನಿಲ್ಲೋದಿಲ್ಲ ಅಧಿಕ ಖರ್ಚು ಸರಿಯಾಗಿ ಹಣ ಉಳಿಸಲು ಆಗೋದಿಲ್ಲ ಅನ್ನೋ ಸಮಸ್ಯೆ ಕೆಲವರಲ್ಲಿ ಬಂದಿರುತ್ತದೆ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಮಾಡಬೇಕಾಗುತ್ತದೆ. ಇನ್ನು ಲಕ್ಷೀದೇವಿಯ ಕೃಪೆಗೆ ಪಾತ್ರರಾಗಿದ್ದೇವೆ ಅನ್ನೋ ಸೂಚನೆಯನ್ನು ತಿಳಿಯೋದು ಹೇಗೆ ಅನ್ನೋದನ್ನ ನೋಡುವುದಾದರೆ ಈ ಮುಂದೆ ಓದಿ.
ಲಕ್ಷ್ಮೀ ಕೃಪೆಗೂ ಮುನ್ನವೇ ಕೆಲವೊಂದು ಸಂಕೇತಗಳು ಲಕ್ಷ್ಮೀ ಕೃಪೆಗೆ ಪಾತ್ರರಾಗಲಿದ್ದೇವೆಂಬ ಮುನ್ಸೂಚನೆಗಳನ್ನು ನಮಗೆ ನೀಡುತ್ತವೆ. ಅಚಾನಕ್ ನಿಮ್ಮ ಸುತ್ತಮುತ್ತ ಹಸಿರು ಬಣ್ಣಗಳು, ವಸ್ತುಗಳು ಕಾಣಿಸಲು ಶುರುವಾದ್ರೆ ಲಕ್ಷ್ಮೀ ನಿಮಗೆ ಒಲಿಯಲಿದ್ದಾಳೆಂದರ್ಥ.
ಲಕ್ಷ್ಮೀ ಹಾಗೂ ಪೊರಕೆಗೆ ಅವಿನಾಭಾವ ಸಂಬಂಧವಿದೆ . ಬೆಳಗ್ಗೆ ಎದ್ದ ತಕ್ಷಣ ಯಾರ ಕೈನಲ್ಲಿಯಾದ್ರೂ ಪೊರಕೆ ನೋಡಿದ್ರೆ ಶೀಘ್ರವೇ ಧನಲಾಭವಾಗಲಿದೆ ಎಂದರ್ಥ. ಶಂಖದ ಧ್ವನಿ ಕೇಳಿದ್ರೂ ಲಕ್ಷ್ಮೀ ಮನೆ ಪ್ರವೇಶ ಮಾಡಲಿದ್ದಾಳೆಂದರ್ಥ .ಬೆಳಗ್ಗೆ ಹಾಸಿಗೆಯಿಂದ ಏಳಿದ್ದಂತೆ ಶಂಖದ ಧ್ವನಿ ಕೇಳಿದ್ರೆ ಒಳ್ಳೆಯದು.
ಬೆಳ್ಳಂಬೆಳಗ್ಗೆ ಕಬ್ಬು ಕಾಣಿಸಿಕೊಂಡ್ರೆ ಶುಭ, ಕಬ್ಬು ಕಂಡ್ರೆ ನಿಮ್ಮ ಅದೃಷ್ಟ ಬದಲಾಗಲಿದೆ ಎಂದೇ ಅರ್ಥ. ಲಕ್ಷ್ಮೀ ವಾಹನ ಗೂಬೆ ಕಾಣಿಸಿಕೊಂಡ್ರೆ ಲಕ್ಷ್ಮೀ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂದರ್ಥ. ಶೀಘ್ರವೇ ನಿಮ್ಮ ಆರ್ಥಿಕ ಜೀವನದಲ್ಲಿ ವೃದ್ಧಿಯಾಗಲಿದೆ .