ಕೆಲವೊಂದು ಚರ್ಮಕ್ಕೆ ಸಂಬಂಧಿಸಿದಂತಹ ಕಾಯಿಲೆಗಳು ಮನುಷ್ಯನನ್ನು ತುಂಬಾ ಕಾಡಿಸುತ್ತವೆ. ಚರ್ಮದ ಅಲರ್ಜಿ, ಗಜಕರ್ಣ, ಹುಳುಕಡ್ಡಿ ಅಂತಹ ಹಲವಾರು ಚರ್ಮವ್ಯಾಧಿಗಳು ನಮ್ಮನ್ನು ಕಾಡುತ್ತಿರುತ್ತವೆ. ಇವುಗಳ ಲಕ್ಷಣ ಏನಪ್ಪಾ ಅಂದ್ರೆ ಕುತ್ತಿಗೆ ಹೊಟ್ಟೆ ಹಾಗೂ ಕೈಕಾಲುಗಳ ಮೇಲೆ ಈ ಚರ್ಮವ್ಯಾಧಿ ಉಂಟಾಗಿ ಚರ್ಮದ ಮೇಲೆ ಒಂದು ರೀತಿಯ ಸಿಪ್ಪೆಗಳು ಏಳುತ್ತವೆ. ಚರ್ಮರೋಗಗಳು ನಮ್ಮ ದೇಹದ ಒಂದು ಭಾಗದಲ್ಲಿ ಆರಂಭವಾದರೆ ಬೇರೆ ಉಳಿದ ಭಾಗಗಳಿಗೆ ಸಹ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಚರ್ಮರೋಗಗಳಿಗೆ ಆರಂಭದ ಹಂತದಲ್ಲಿಯೇ ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುವುದು ಒಳ್ಳೆಯದು. ಚರ್ಮರೋಗ ಬಳಕೆಯಾಗುತ್ತೆ ಅಂತ ಪದೇಪದೇ ತೋರಿಸಿಕೊಳ್ಳುವುದು ಹಾಗೂ ಬೇರೆ ಜಾಗಗಳಲ್ಲಿ ಮುಟ್ಟುವುದರಿಂದ ಬೇಗ-ಬೇಗ ಹರಡುವ ಸಾಧ್ಯತೆ ಇರುತ್ತದೆ. ಈ ಚರ್ಮವ್ಯಾಧಿಗಳು ನನ್ನ ಮುಖವು ಮನೆಮದ್ದುಗಳನ್ನು ಮಾಡುವುದರ ಮೂಲಕ ಶಾಶ್ವತವಾಗಿ ನಿವಾರಿಸಿಕೊಳ್ಳಬಹುದು.
ಸಾಮಾನ್ಯವಾಗಿ ಚರ್ಮ ರೋಗಗಳು ಮನುಷ್ಯನಿಗೆ ಅತಿಯಾಗಿ ಬೆವರು ಬರುವಂತಹ ಜಾಗಗಳಲ್ಲಿ ಕಂಡುಬರುತ್ತವೆ. ನಾವು ತಿನ್ನುವಂತಹ ಆಹಾರಗಳು ಹಾಗೂ ಚರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು ಸಹ ಚರ್ಮರೋಗ ಬರುವುದಕ್ಕೆ ಕಾರಣವಾಗಿರುತ್ತದೆ. ನಾವು ಇದರ ಬಗ್ಗೆ ಕಾಳಜಿ ವಹಿಸದೆ ಇದ್ದಲ್ಲಿ ನಮಗೆ ಮಾತ್ರವಲ್ಲದೆ ನಮ್ಮಿಂದಾಗಿ ನಮ್ಮ ಮನೆಯಲ್ಲಿ ಇರುವವರೆಗೂ ಸಹ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ . ಇದರ ಬಗ್ಗೆ ನಾವು ಮೊದಲೇ ತಿಳಿದುಕೊಂಡು ಜಾಗೃತೆ ವಹಿಸುವುದು ಒಳ್ಳೆಯದು. ಮನೆ ಮದ್ದನ್ನು ಹೇಗೆ ಮಾಡುವುದು ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ.
ಈ ಮನೆಮದ್ದನ್ನು ಮಾಡೋದಿಕ್ಕೆ ಬೇಕಾಗಿರುವುದು ಮುಖ್ಯವಾಗಿ ಮೊದಲಿಗೆ ಬೇಕಾಗಿರುವುದು ಚರ್ಮವ್ಯಾದಿಗಳಿಗೆ ರಾಮಬಾಣ ಆಗಿರುವಂತಹ ಕಹಿಬೇವಿನ ಸೊಪ್ಪು. ಕಹಿಬೇವಿನ ಸೊಪ್ಪು ಚರ್ಮದಲ್ಲಿರುವ ಸೋಂಕನ್ನು ಕಡಿಮೆ ಮಾಡುತ್ತದೆ ಹಾಗೂ ಚರ್ಮದ ಆಳಕ್ಕೆ ಹೋಗಿ ಸ್ವಚ್ಛತೆಯನ್ನು ಕಾಪಾಡುತ್ತದೆ. ಚರ್ಮದ ಮೇಲೆ ಸೋಂಕು ಎಷ್ಟು ಇದೆ ಎನ್ನುವುದರ ಆಧಾರದ ಮೇಲೆ ಕಹಿಬೇವಿನ ಸೊಪ್ಪನ್ನು ತೆಗೆದುಕೊಂಡು ಎಲೆಯನ್ನು ತೆಗೆದಿಟ್ಟುಕೊಳ್ಳಬೇಕು. ಅದರ ಜೊತೆಗೆ ಹಾಗೆ ನಿತ್ಯಪುಷ್ಪ ಹೂವಿನ ಎಲೆಗಳನ್ನು ಸಹ ತೆಗೆದುಕೊಳ್ಳಬೇಕು. ನಿತ್ಯಪುಷ್ಪ ಹೂವಿನ ಎಲೆಗಳು ಸಹ ಕಹಿಯಾಗಿರುವುದರಿಂದ ಇವುಗಳು ಸಹ ಚರ್ಮದ ಸೋಂಕು ನಿವಾರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ. ಈ ಎಲೆಗಳನ್ನು ಏಳರಿಂದ ಎಂಟು ಎಲೆಗಳನ್ನು ತೆಗೆದುಕೊಳ್ಳಬೇಕು. ಜಾಸ್ತಿ ಸೋಂಕುಗಳು ಇದ್ದಲ್ಲಿ ಜಾಸ್ತಿ ಎಲೆಯನ್ನು ಬಳಸಬಹುದು.
ಎರಡು ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದುಕೊಂಡು ಕುಟ್ಟುವ ಕಲ್ಲಿನಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದರ ರಸವನ್ನು ತೆಗೆದುಕೊಂಡು ರಸಕ್ಕೆ ಒಂದು ಕರ್ಪೂರವನ್ನು ಪುಡಿಮಾಡಿ ಸೇರಿಸಬೇಕು. ಕರ್ಪೂರವನ್ನು ಚೆನ್ನಾಗಿ ಅರಸದ ಜೊತೆ ಮಿಕ್ಸ್ ಮಾಡಿಕೊಳ್ಳಬೇಕು. ಕರ್ಪೂರ ನಮ್ಮ ಚರ್ಮದಲ್ಲಿ ಬೇರೆ ಯಾವುದೇ ಭಾಗಗಳಿಗೂ ಸಹ ಚರ್ಮರೋಗದ ಗಾಯಗಳು ಹರಡದಂತೆ ನೋಡಿಕೊಳ್ಳುತ್ತದೆ. ಎಲ್ಲಿ ಚರ್ಮ ವ್ಯಾಧಿ ಆಗಿದೆಯೋ ಆ ಜಾಗವನ್ನು ತೊಳೆದುಕೊಂಡು ನೀರು ಇರದ ಹಾಗೇ ಒರೆಸಿಕೊಳ್ಳಬೇಕು. ನಂತರ ರೆಡಿ ಮಾಡಿಟ್ಟುಕೊಂಡು ಇರುವಂತಹ ಬೇವಿನಸೊಪ್ಪು ನಿತ್ಯಪುಷ್ಪ ಹೂವಿನ ಎಲೆ ರಸ ಹಾಗೂ ಕರ್ಪೂರ ಸೇರಿಸಿದ ಹಿಮೇಶ್ ರಣವನ್ನು ನಿಧಾನವಾಗಿ ಚರ್ಮವ್ಯಾಧಿ ಇರುವಂತಹ ಜಾಗಕ್ಕೆ ಹಚ್ಚಬೇಕು. ಇದೇ ರೀತಿ ಎರಡು ದಿನ ಮಾಡಿದರೂ ಸಹ ಚರ್ಮವ್ಯಾಧಿ ನಿವಾರಣೆ ಆಗುತ್ತದೆ ಕ್ರಮೇಣವಾಗಿ ಈ ರೀತಿಯಾಗಿ ಮಾಡುವುದರಿಂದ ಪೂರ್ತಿಯಾಗಿ ನಿವಾರಣೆ ಪಡೆಯಬಹುದು. ಸಾಮಾನ್ಯವಾಗಿ ಯಾವುದೇ ರೋಗವಾದರೂ ಆರಂಭದ ಹಂತದಲ್ಲಿಯೇ ಇದ್ದಾಗ ನಾವು ಅದನ್ನು ಮನೆಮದ್ದನ್ನು ಮಾಡುವ ಮೂಲಕವೇ ಕಡಿಮೆ ಮಾಡಿಕೊಂಡರೆ ಮುಂದೆ ಭಯ ಬೀಳುವ ಸಂದರ್ಭ ಬರುವುದಿಲ್ಲ.