ರಾಜ್ಯ ಸರ್ಕಾರದ ದಿಂದ ರೈತರಿಗೆ ಪಶುಭಾಗ್ಯ ಯೋಜನೆಯ ಅಡಿಯಲ್ಲಿ ಎರಡು ಪಶುಗಳನ್ನು ಖರೀದಿಸಿಕೊಳ್ಳಲು ಸಹಾಯ ಧನವನ್ನು ನೀಡಲಾಗುತ್ತಿದೆ. ಈಗಾಗಲೇ ಕರ್ನಾಟಕದಾದ್ಯಂತ ಪಶು ಭಾಗ್ಯ ಯೋಜನೆಯು ಯಶಸ್ಸನ್ನು ಕಂಡಿದ್ದು ಶೇಕಡಾ 100 ರಷ್ಟು ಅನುಷ್ಠಾನ ಕೂಡಾ ಕಂಡಿದೆ. ಪಶು ಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯದಾದ್ಯಂತ ರೈತರಿಗೆ ವಾಣಿಜ್ಯ ಬ್ಯಾಂಕ್ ಗಳಿಗೆ ಒಂದು ಪಶುವಿಗೆ 60 ಸಾವಿರ ರೂಪಾಯಿ ಅಂತೆ ತಲಾ ಒಬ್ಬರಿಗೆ ಎರಡು ಹಸುಗಳಿಗೆ 1,20,000 ರೂಪಾಯಿಯನ್ನು ಪಶು ಭಾಗ್ಯ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಾಕಲಾಗಿದೆ. ಪಶು ಭಾಗ್ಯ ಯೋಜನೆಯ ಅಡಿಯಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಹಸು ಖರೀದಿಗೆ, ಕುರಿಗಳನ್ನು ಖರೀದಿಸಲು ಹಾಗೂ ಆಡುಗಳನ್ನು ಮತ್ತು ಹಂದಿ ಘಟಕಗಳನ್ನು ಸ್ಥಾಪಿಸಲು 1,20,000 ರೂಪಾಯಿಗಳನ್ನು ನೇರವಾಗಿ ರೈತರ ಬ್ಯಾಂಕಿನ ಖಾತೆಗೆ ಬಂದು ತಲುಪಲಿವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿವೆ ಶೇಕಡಾ 50 ರಷ್ಟು ಹಾಗೂ ಇತರೆ ಜನಾಂಗದವರಿಗೆ ಶೇಕಡಾ 25 ರಷ್ಟು ಧನ ಸಹಾಯವನ್ನು ಒದಗಿಸಲಾಗುತ್ತದೆ.
ಇನ್ನು ಹೈನುಗಾರಿಕೆ ಘಟಕ ಸ್ಥಾಪನೆಗೆ ತಲಾ ಒಬ್ಬರಿಗೆ ವರ್ಷಕ್ಕೆ ಎರಡು ಪಶುಗಳಿಗೆ ತಲಾ 60,000 ದಂತೆ ಒಟ್ಟೂ 1,20,000 ರೂಪಾಯಿಗಳನ್ನು ಸಹ ನೀಡಲಾಗುತ್ತದೆ. ಅನುದಾನದಲ್ಲಿ ಸಾಗಾಟ ವೆಚ್ಚ, ವಿಮೆ ಹಾಗೂ 6 ಟಿ ಗಳುಗಳ ಕಾಲ ಮೇವಿನ ವೆಚ್ಚವನ್ನು ಸಹ ಒಳಗೊಂಡಿರುತ್ತದೆ. ಈ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ಮಹಿಳೆಯರಿಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಕಾಡು ಬಡವರಿಗೂ ಸಹ ಕೈ ಸೇರಲಿದೆ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡಾ 60 ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದೆ. ಅಲ್ಲದೆ ಅದೇ ರೀತಿಯಲ್ಲಿ ಮೇಕೆ ಮತ್ತು ಕುರಿ ಘಟಕಕ್ಕೆ 11 ಕುರಿ ಖರೀದಿ ಮಾಡಲಿ 67,440 ರೂಪಾಯಿಗಳನ್ನು ಹಂದಿ ಘಟಕಕ್ಕೆ 4 ಹಂದಿ ಖರೀದಿಗೆ 1,00,000 ರೂಪಾಯಿ, ಕರು ಘಟಕಕ್ಕೆ 1 ಕರುವಿಗೆ 18,000 ರೂಪಾಯಿಗಳನ್ನು ಅನುದಾನ ನೀಡಲಾಗುತ್ತದೆ.
ಆದರೆ ಈ ಮೇಲಿನ ಯಾವುದೇ ಒಂದು ಸೌಲಭ್ಯವನ್ನು ಪಡೆದರೆ ಮತ್ತೆ ಅದೇ ಕುಟುಂಬದವರು ಇನ್ಯಾವುದೇ ಸಹಾಯ ಧನವನ್ನು ಪಡೆಯುವಂತಿಲ್ಲ. ಒಂದು ಕುಟುಂಬಕ್ಕೆ ಇವುಗಳಲ್ಲಿ ಯಾವುದೇ ಒಂದು ಯೋಜನೆಯನ್ನು ಮಾತ್ರ ಆಯ್ದುಕೊಳ್ಳಬಹುದು. ಹಾಗಾಗಿ ಈ ಹಿಂದೆ ಪಶು ವೈದ್ಯಕೀಯ ಇಲಾಖೆ ಹಾಗೂ ಪಶು ಸಂಘೋಪನಾ ಇಲಾಖೆಯಿಂದ ಕರೆಯಲಾಗಿದ್ದ ಅರ್ಜಿಯ ಫಲಾನುಭವಿಗಳಿಗೆ ಹಾಗೂ ಅರ್ಜಿಯ ಆಸಕ್ತ ರೈತರಿಗೆ ಈ ಎಲ್ಲಾ ಯೋಜನೆಗಳು ರಾಜ್ಯ ಸರ್ಕಾರದಿಂದ ಪಶು ಪಾಲನಾ ಮತ್ತು ಪಶು ಸಂಗೋಪನ ಇಲಾಖೆಯಿಂದ ಪ್ರಕಟಗೊಂಡಿರುತ್ತದೆ. ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲೂಕಿನ ಅಥವಾ ನಿಮ್ಮ ಜಿಲ್ಲೆಯ ಪಶು ಸಂಘೋಪನಾ ಕಚೇರಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ.