ನಮಗೆ ದಿನನಿತ್ಯದಲ್ಲಿ ಕಾಡುವ ಕೆಲವು ಪ್ರಶ್ನೆಗಳಿರುತ್ತವೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬರುತ್ತದೆ, ಎಲೆಗಳಿಲ್ಲದೆ ಮರಗಳು ಹೇಗೆ ಆಹಾರ ತಯಾರಿಸುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಕೆಲವರಿಗೆ ಬಸ್ ನಲ್ಲಿ, ಕಾರಿನಲ್ಲಿ ಪ್ರಯಾಣ ಮಾಡುವಾಗ ವಾಂತಿ ಬರುತ್ತದೆ, ವಿಮಾನದಲ್ಲಿ ಪ್ರಯಾಣ ಮಾಡಿದರೂ ವಾಂತಿ ಬರುತ್ತದೆ ಇದನ್ನು ಮೋಷನ್ ಸಿಕ್ ನೆಸ್ ಎನ್ನುವರು. ನಾವು ಆರಾಮಾಗಿ ನಡೆಯಬೇಕು ಅಂದರೆ ಅದಕ್ಕೆ ಕಾರಣ ನಮ್ಮ ಕಿವಿಗಳು. ಕಿವಿಗಳ ಒಳಗೆ ಮೂರು ರಿಂಗ್ ಟೈಪ್ ಇರುತ್ತದೆ. ಇವುಗಳನ್ನು ಸೆಮಿ ಸರ್ಕಲ್ ಕೆನಾಲ್ ಎನ್ನುವರು. ಇವುಗಳು ಬೇರೆ ಬೇರೆ ದಿಕ್ಕುಗಳಲ್ಲಿ ಇರುತ್ತವೆ. ಕೆನಾಲ್ ಸರ್ಕಲ್ ಒಳಗೆ ಇಂಡಾಲಿನ್ ಎನ್ನುವ ಲಿಕ್ವಿಡ್ ಇರುತ್ತದೆ. ಇವುಗಳ ಕೆಳಗೆ ಸಿಲಿಯಾ ಎನ್ನುವ ಕೂದಲಿನ ರೀತಿಯ ನಿರ್ಮಾಣ ಇರುತ್ತದೆ. ನಾವು ಆ ಕಡೆ ಈ ಕಡೆ ಕದಲಿದಾಗ ಕೆನಾಲ್ ನಲ್ಲಿರುವ ಲಿಕ್ವಿಡ್ ಕೂಡ ಕದಲುವುದರಿಂದ ಕೆಳಗಡೆ ಇರುವ ಸಿಲಿಯಾ ಕೂಡ ಕದಲಿ ನಾವು ಯಾವ ದಿಕ್ಕಿನಲ್ಲಿ ಕದಲುತ್ತೇವೆಯೋ ಅದನ್ನು ನಮ್ಮ ಬ್ರೇನ್ ಗೆ ಸಿಗ್ನಲ್ ಕಳಿಸುವುದರಿಂದ ನಮ್ಮ ಬ್ರೇನ್ ಬ್ಯಾಲೆನ್ಸ್ ಆಗಿ ಇರೋ ರೀತಿ ಮಾಡುತ್ತದೆ.
ನಾವು ಜೋರಾಗಿ ತಿರುಗಿ ನಿಂತರೆ ಕೂಡಲೆ ಕೆಲ ಸಮಯ ತೂರಾಡುತ್ತೀವಿ. ಇದಕ್ಕೆ ಕಾರಣ ನಾವು ಸುತ್ತಿದಾಗ ಇಂಡಾಲಿನ್ ಲಿಕ್ವಿಡ್ ಕದಲುತ್ತದೆ ನಾವು ನಿಂತುಕೊಂಡಾಗಲೂ ಲಿಕ್ವಿಡ್ ಕದಲುವುದು ಮುಂದುವರೆಯುತ್ತದೆ. ಆದ್ದರಿಂದ ಬ್ರೇನ್ ಗೆ ಕದಲುವ ಸಂದೇಶ ನೀಡುತ್ತಿರುತ್ತದೆ ಹಾಗಾಗಿ ನಿಂತಮೇಲೂ ಕೆಲ ಸಮಯ ತಲೆ ತಿರುಗಿದಂತಾಗುತ್ತದೆ. ಪ್ರಯಾಣ ಮಾಡುವಾಗ ವಾಂತಿ ಬರುವುದು ಏಕೆಂದರೆ ನಮ್ಮ ಬ್ರೇನ್ ದೇಹದ ಭಾಗಗಳ ಬಗ್ಗೆ ಸಂದೇಶವನ್ನು ಪಡೆಯುತ್ತಿರುತ್ತದೆ. ನಾವು ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುವಾಗ ಬಸ್ಸಿನ ಅಥವಾ ಕಾರಿನಲ್ಲಿ ಅಲುಗಾಟ ಇಲ್ಲವೆಂದರೆ ನಮ್ಮ ಕಣ್ಣು ಬ್ರೇನ್ ಗೆ ನಾವು ಕದಲುತ್ತಿಲ್ಲ ಎಂಬ ಸಂದೇಶ ಕೊಡುತ್ತದೆ ಆದರೆ ಬಸ್ಸಿನ ಅಥವಾ ಕಾರಿನ ಸ್ಪೀಡ್ ಜಾಸ್ತಿ ಅಥವಾ ಕಡಿಮೆ ಆದಾಗ, ತಿರುವುಗಳಲ್ಲಿ ಹೋಗುವಾಗ ದೇಹ ಕದಲುತ್ತದೆ ಆಗ ಕೆನಾಲ್ ನಲ್ಲಿರುವ ಲಿಕ್ವಿಡ್ ಕದಲಿ ನಮ್ಮ ದೇಹ ಕದಲುತ್ತಿದೆ ಎಂದು ಬ್ರೇನ್ ಸಂದೇಶ ಪಡೆಯುತ್ತದೆ. ಒಂದೆ ಸಲ ಕಣ್ಣಿನಿಂದ ಕದಲುತ್ತಿಲ್ಲ ಎಂದು, ಕೆನಾಲ್ ಲಿಕ್ವಿಡ್ ನಿಂದ ಕದಲುತ್ತಿದೆ ಎಂದು ಸಂದೇಶ ಬರುತ್ತದೆ ಇದರಿಂದ ಮೆದುಳು ಗೊಂದಲಗೊಳ್ಳುತ್ತದೆ.
ಇದೇ ಮೋಷನ್ ಸಿಕ್ ನೆಸ್ ಎನ್ನುವರು ಇದರಿಂದ ಆಯಾಸ, ವಾಂತಿಯಾಗುವುದು ಆಗುತ್ತದೆ. ಹೇಗೆಂದರೆ ನಾವು ವಿಷಪೂರಿತ ಆಹಾರ ಸೇವಿಸಿದಾಗ ನಮ್ಮ ಬ್ರೆನ್ ಗೆ ಸಿಗ್ನಲ್ ಸಿಗುತ್ತದೆ ಆದ್ದರಿಂದ ವಿಷಪೂರಿತ ಆಹಾರ ವಾಂತಿಯ ರೂಪದಲ್ಲಿ ಹೊರಹಾಕುತ್ತದೆ. ಬಸ್ಸಿನಲ್ಲಿ ಕಣ್ಣು ಮತ್ತು ಕೆನಾಲ್ ನ ಸಂದೇಶಗಳಿಂದ ಮೆದುಳು ವಿಷಪೂರಿತ ಆಹಾರ ದೇಹಕ್ಕೆ ಸೇರಿದೆ ಎಂದು ತಿಳಿದುಕೊಂಡು ಹೊರಹಾಕಲು ಹೊಟ್ಟೆತೊಳೆಸುವುದು, ತಲೆ ಸುತ್ತುವುದು ಹೀಗೆ ಆಗಿ ವಾಂತಿ ಬರುತ್ತದೆ ಈ ರೀತಿ ಕೆಲವರಿಗೆ ಜಾಸ್ತಿ ಆಗುತ್ತದೆ ಅವರು ತಮ್ಮ ದೇಹದ ಸಮತೋಲನಕ್ಕೆ ಕೆನಾಲ್ ನಲ್ಲಿರುವ ಲಿಕ್ವಿಡ್ ಮೇಲೆ ಅವಲಂಬಿತರಾಗಿರುತ್ತಾರೆ ಇದಕ್ಕೆ ಪರಿಹಾರವೆಂದರೆ ಮುಂದಿನ ಸೀಟಿನಲ್ಲಿ ಕುಳಿತು ರೋಡ್ ನೋಡುವುದರಿಂದ ಕಣ್ಣು ಕದಲುವ ಸಂದೇಶ ಮತ್ತು ಕೆನಾಲ್ ನಲ್ಲಿರುವ ಲಿಕ್ವಿಡ್ ಕೂಡ ಅದೆ ಸಂದೇಶ ನೀಡುತ್ತದೆ ಇದರಿಂದ ಮೆದುಳು ಗೊಂದಲಗೊಳ್ಳುವುದಿಲ್ಲ.
ಮನೆಯಲ್ಲಿ ಸಿಹಿ ತಿಂಡಿ ಬಿದ್ದರೆ ಇರುವೆಗಳು ಬರುತ್ತವೆ ಎಲ್ಲೋ ಇರುವ ಸಿಹಿತಿಂಡಿಗೆ ಎಲ್ಲೋ ಇರುವ ಇರುವೆಗಳು ಬರುತ್ತವೆ ಅಂದರೆ ಅದಕ್ಕೆ ಕಾರಣ ಇರುವೆಗಳು ಗುಂಪಿನಲ್ಲಿ ಇರುತ್ತವೆ ಇದರಲ್ಲಿ ಮೂರು ವರ್ಗದ ಇರುವೆಗಳಿರುತ್ತದೆ. ರಾಣಿ ಇರುವೆ, ಹೆಣ್ಣಿರುವೆ, ಗಂಡಿರುವೆ ಇದರಲ್ಲಿ ಹೆಣ್ಣಿರುವೆ ಶ್ರಮಿಕ ಗುಂಪಿಗೆ ಸೇರುತ್ತವೆ. ಇವು ಯಾವಾಗಲೂ ಆಹಾರ ಹುಡುಕುತ್ತಿರುತ್ತವೆ. ಸಿಕ್ಕಿದ ಆಹಾರದ ಸ್ವಲ್ಪ ಭಾಗವನ್ನು ಕಚ್ಚಿಕೊಂಡು ಗೂಡಿಗೆ ಹೋಗುತ್ತದೆ. ಹೀಗೆ ಹೋಗುವಾಗ ಪ್ಯಾರಾಮೌನ್ಸ್ ಎನ್ನುವ ಕೆಮಿಕಲ್ ಬಿಡುಗಡೆಗೊಳಿಸುತ್ತಾ ತನ್ನ ಹೊಟ್ಟೆಯನ್ನು ನೆಲಕ್ಕೆ ತಾಕಿಸುತ್ತಾ ಹೋಗುತ್ತದೆ. ಪ್ರತಿ ಗುಂಪಿನ ಇರುವೆಗಳಿಗೆ ಬೇರೆ ಬೇರೆ ರೀತಿಯ ಸ್ಮೆಲ್ ಇರುವ ಯುನಿಕ್ ಪ್ಯಾರಾಮೌನ್ಸ್ ಕೆಮಿಕಲ್ ಇರುತ್ತದೆ. ಒಂದು ಇರುವೆ ಕೆಮಿಕಲ್ ಬಿಟ್ಟಾಗ ಉಳಿದ ಅದೇ ಗುಂಪಿನ ಇರುವೆಗಳು ಆ ಕೆಮಿಕಲ್ ಆಧಾರವಾಗಿ ಆಹಾರ ಇರುವ ಜಾಗವನ್ನು ಕಂಡುಹಿಡಿಯುತ್ತದೆ. ಎರಡು ಇರುವೆಗಳು ಎದುರು ಆದಾಗ ಸ್ವಲ್ಪ ಸಮಯ ನಿಲ್ಲುತ್ತದೆ ಕಾರಣ ಬೇರೆ ಬೇರೆ ಗುಂಪಿನ ಪ್ಯಾರಾಮೌನ್ಸ್ ಕೆಮಿಕಲ್ ಬೇರೆ ಬೇರೆ ಸ್ಮೆಲ್ ಇರುವುದರಿಂದ ತಮ್ಮ ಗುಂಪಿನದಾ ಎಂದು ನೋಡುತ್ತದೆ ತಮ್ಮ ಗುಂಪಿನದಲ್ಲವಾದರೆ ಜಗಳವಾಡಿ ಗುಂಪಿನಿಂದ ಹೊರಹಾಕುತ್ತದೆ.
ಹೀಗೆ ಇರುವೆಗಳು ಆಹಾರ ಹುಡುಕುತ್ತವೆ. ಎಲೆಗಳಿರದಿದ್ದರು ಮರಗಳು ಆಹಾರ ಹೇಗೆ ಉತ್ಪಾದಿಸುತ್ತವೆ ಎಂದರೆ ಸಸ್ಯಗಳಲ್ಲಿ ಪತ್ರಹರಿತ್ತು ಗಿಡಗಳ ಎಲೆಗಳಲ್ಲಿ, ಹಸಿರು ಕಾಂಡಗಳಲ್ಲಿ ಕಂಡುಬರುತ್ತದೆ. ಬೆಳಕಿನ ಸಹಾಯದಿಂದ ಹರಿತ್ತಿನ ಗ್ರಾನಾ ಭಾಗದಲ್ಲಿ ಆಹಾರ ತಯಾರಾಗುತ್ತದೆ. ಮತ್ತು ಇರುಳಿನಲ್ಲಿ ಹರಿತ್ತಿನ ಸ್ಟ್ರೋಮಾ ಭಾಗದಲ್ಲಿ ನಡೆಯುತ್ತದೆ ಇದು ಗಿಡಗಳ ಹಸಿರು ಭಾಗ, ಕಾಂಡಗಳಲ್ಲಿ ನಡೆಯುತ್ತದೆ ಆದ್ದರಿಂದ ಎಲೆಗಳಿಲ್ಲದೆ ಮರಗಳು ಬೆಳೆಯುತ್ತದೆ.