ಸಂಧಿವಾತ, ಕೀಲು ನೋವಿನ ಸಮಸ್ಯೆಗಳಿಗೆ ಮಂಡಿ ನೋವು ಹಾಗೂ ಯಾವುದೇ ಏಲಬುಗಳ ನೋವು ಇದ್ದರೂ ಸಹ ಆ ನೋವಿಗೆ ಅಮೃತ ಬಳ್ಳಿಯ ಕಷಾಯ ರಾಮ ಬಾಣ ಇದ್ದಂತೆ. ಅಮೃತ ಬಳ್ಳಿಯ ಕಷಾಯ ಹೇಗೆ ತಯಾರಿಸುವುದು ಅನ್ನೋದರ ಬಗ್ಗೆ ಚಿಕ್ಕ ಮಾಹಿತಿ.
ಅಮೃತ ಬಳ್ಳಿಯ ಕಾಂಡ ಮತ್ತು ಒಣ ಶುಂಠಿ ಇವುಗಳನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಒಣ ಶುಂಠಿ ಮತ್ತು ಅಮೃತ ಬಳ್ಳಿಯ ಕಾಂಡ ಇವೆರಡನ್ನೂ ಬೇರೆ ಬೇರೆಯಾಗಿ ಜಜ್ಜಿಕೊಂಡು ಎರಡು ಗ್ಲಾಸ್ ಅಷ್ಟು ನೀರನ್ನು ಬಿಸಿ ಮಾಡಲು ಇಟ್ಟು ನೀರು ಸ್ವಲ್ಪ ಬಿಸಿ ಆದ ಮೇಲೆ ಜಜ್ಜಿ ಇಟ್ಟುಕೊಂಡ ಅಮೃತ ಬಳ್ಳಿಯ ಕಾಂಡ ಮತ್ತು ಒಣ ಶುಂಠಿ ಪುಡಿ ಇವೆರಡನ್ನೂ ಹಾಕಿ ಒಮ್ಮೆ ಮಿಕ್ಸ್ ಮಾಡಿ ಎರಡು ಲೋಟ ನೀರು ಒಂದು ಲೋಟಕ್ಕೆ ಇಳಿಯುವವರೆಗು ಕುದಿಸಬೇಕು. ಕುದಿಸಿ ಆದಮೇಲೆ ಅದನ್ನು ಸೋಸಿಕೊಂಡು ಬಳಸಬೇಕು. ಹೀಗೆ ಮಾಡಿ ಮೂವತ್ತು ದಿನಗಳ ಕಾಲ ದಿನಕ್ಕೆ ಒಂದು ಬಾರಿಯಂತೆ ಸೇವಿಸಿದರೆ ಎಲಬು ನೋವು ಸಂದು ನೋವು ಕಡಿಮೆ ಆಗತ್ತೆ. ಅಮೃತ ಬಳ್ಳಿ ಮತ್ತು ಶುಂಠಿ ಇವನ್ನು ಕುದಿಸಿ ಶೋಧಿಸಿ ಆರಿದ ನಂತರ ಪ್ರದಿ ದಿನ ಕುಡಿಯಬೇಕು.
ಇದನ್ನು ಮೂವತ್ತು ದಿನ ಅಂದರೆ ಸತತವಾಗಿ ಒಂದು ತಿಂಗಳು ಕಾಲ ಸೇವಿಸಿದರೆ ಸಂದಿವಾತ ಯಾವುದೇ ಕೀಲು ನೋವು ಮಂಡಿ ನೋವು ಇದ್ದರೂ ಸಹ ಕಡಿಮೆ ಆಗುತ್ತವೆ. ಹೀಗೆ ನಮ್ಮ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಉಪಯೋಗ ಆಗುತ್ತೆ ಈ ಅಮೃತ ಬಳ್ಳಿ.