ಕೂದಲು ಉದುರುವಿಕೆ ತಲೆ ಹೊಟ್ಟು ಬೋಕ್ಕು ತಲೆ ಕೂದಲು ಸುಕ್ಕುಗಟ್ಟುವುದು ತೆಳ್ಳನೆಯ ಕೂದಲು ಹೀಗೆ ಕೂದಲಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಎಲ್ಲಾ ಜನರಲ್ಲಿ ಹೆಚ್ಚಾಗಿ ಮಹಿಳೆಯರಲ್ಲಿ ನಾವು ಕಾಣಬಹುದಾಗಿದೆ, ಇಂತಹ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಲವಾರು ಪರಿಹಾರಗಳನ್ನೂ ಸಹ ನಾವು ಈ ಮೊದಲೇ ಮಾಡಿರುತ್ತೇವೆ ಆದರೇ ಎಷ್ಟೋ ಜನರಿಗೆ ಅದರಿಂದ ಪರಿಹಾರ ದೊರೆತಿರುವುದಿಲ್ಲ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಹರ್ಬಲ್ ಶಾಂಪುಗಳನ್ನು ಉಪಯೋಗಿಸುವುದು ಹಲವಾರು ರೀತಿಯ ಕೃತಕ ರಾಸಾಯನಿಕ ಮಿಶ್ರಿತ ಎಣ್ಣೆಗಳನ್ನು ತಲೆಗೆ ಹಚ್ಚಿಕೊಳ್ಳುವುದು ಹೀಗೆ ಮಾಡಿ ತಮ್ಮ ಕೂದಲನ್ನೂ ಸಹ ಹಾಳುಮಾಡಿಕೊಂಡವರಿದ್ದಾರೆ ಅಂತಹವರು ನಾವು ಹೇಳುವ ಈ ಒಂದು ಚಿಕ್ಕ ಮನೆ ಮದ್ಧನ್ನು ಮಾಡಿ ನೋಡಿ ನಿಮಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.
ಹಾಗಾದ್ರೆ ಕೂದಲಿನ ಸಮಸ್ಯೆಗಳನ್ನು ಕುರಿತು ನಾವು ಕೂದಲಿಗೆ ಬಳಸಬಹುದಾದ ನೈಸರ್ಗಿಕ ಮನೆಮದ್ಧನ್ನು ತಯಾರಿಸುವ ವಿಧಾನದ ಬಗ್ಗೆ ಮತ್ತು ಆ ಮನೆಮದ್ಧನ್ನು ಉಪಯೋಗಿಸುವ ಕ್ರಮಗಳ ಬಗ್ಗೆ ಮತ್ತು ಆ ಮನೆಮದ್ಧನ್ನು ಉಪಯೋಗಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ
ಮೊದಲಿಗೆ ಒಂದು ಬೌಲ್ ನಲ್ಲಿ ಕರಿ ಎಳ್ಳುಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು, ನಂತರದಲ್ಲಿ ಸಮಪ್ರಮಾಣದ ಮೆಂತ್ಯವನ್ನು ತೆಗೆದುಕೊಂಡು ಅದನ್ನೂ ಸಹ ನುಣ್ಣಗೆ ಪುಡಿ ಮಾಡಿಕೊಂಡು ಇವೆರಡನ್ನು ಬೇರೆ ಬೇರೆ ಬೌಲ್ ಗಳಿಗೆ ಹಾಕಿಕೊಂಡು ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಹುರಿದ ಎಳ್ಳನ್ನು ಮತ್ತು ಹುರಿದ ಮೆಂತ್ಯವನ್ನು ಉಪಯೋಗಿಸಬಾರದು ಮತ್ತು ಬೌಲ್ ನ ತುಂಬಾ ಇರುವ ಪುಡಿ ಅವಶ್ಯಕತೆ ಇರುವುದಿಲ್ಲ.
ಆನಂತರ ಒಂದು ಬೇರೆ ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಐದರಿಂದ ಆರು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು ನಂತರ ಅದರ ಜೊತೆಗೆ ಎರಡು ಚಮಚ ಹರಳೆಣ್ಣೆಯನ್ನು ಸೇರಿಸಿಕೊಳ್ಳಬೇಕು, ಹೀಗೆ ಸೇರಿಸಿಕೊಂಡ ಬೌಲ್ ನ ಒಳಗೆ ಎರಡು ಚಮಚ ಕರಿ ಎಳ್ಳಿನ ಪುಡಿಯನ್ನು ಮತ್ತು ಸಮ ಪ್ರಮಾಣದಲ್ಲಿ ಅಂದರೆ ಎರಡು ಚಮಚ ಮೆಂತ್ಯ ಪುಡಿಯನ್ನು ಹಾಕಿಕೊಳ್ಳಬೇಕು ಆನಂತರ ಈ ಪುಡಿಗಳ ಜೊತೆ ಹಾಕಿಕೊಂಡ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಹೀಗೆ ಮಾಡಿಕೊಂಡ ಮಿಶ್ರಣವನ್ನು ತಲೆಯಲ್ಲಿ ಪ್ರತೀ ಮೂಲೆ ಮೂಲೆಗೂ ಮತ್ತು ಕೂದಲಿನ ಬುಡಕ್ಕೆ ತಲುಪುವಂತೆ ಹಚ್ಚಿಕೊಂಡು ಅರ್ಧ ಗಂಟೆಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು, ಹೀಗೆ ಮಸಾಜ್ ಮಾಡಿಕೊಂಡ ನಂತರ ತಲೆಯನ್ನು ಎರಡು ಗಂಟೆಗಳು ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಬೇಕು ವಾರದಲ್ಲಿ ಎರಡು ಬಾರಿಯಾದರೂ ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಉದುರುವಿಕೆ ಕ್ರಮೇಣ ಕಡಿಮೆಯಾಗಿ ತಲೆ ಹೊಟ್ಟು ನಿವಾರಣೆಯಾಗುವುದಲ್ಲದೆ ನಿಮ್ಮ ಕೂದಲುಗಳು ಸೊಂಪಾಗಿ ಬೆಳೆಯಲು ಇದು ಸಹಕಾರಿಯಾಗುತ್ತದೆ.