ಸುಲಭವಾಗಿ ಮನೆಯಲ್ಲಿಯೇ ಹೇಗೆ ವೈನ್ ತಯಾರಿಸುವುದು ಅಂತ ನೋಡೋಣ. ವೈನ್ ಅನ್ನು ದ್ರಾಕ್ಷಾರಸ ಅಂತ ಕರೆಯುತ್ತಾರೆ ಇದು ತುಂಬಾ ರುಚಿಯಾಗಿ ಇರತ್ತೆ ಹಾಗೂ ಮಕ್ಕಳಿಗೂ ಒಳ್ಳೆಯದು. ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ವೈನ್ ತಯಾರಿಸುವ ಸುಲಭವಾದ ವಿಧಾನ ಯಾವುದು ಹೇಗೆ ಅಂತ ನೋಡಿ.
ಕಪ್ಪು ದ್ರಾಕ್ಷಿಯನ್ನು ಚೆನ್ನಾಗಿ ಸರಿಯಾಗಿ ಉಪ್ಪು ನೀರಿನಲ್ಲಿ ನೆನೆಸಿ ತೊಳೆದುಕೊಳ್ಳಬೇಕು. ನಂತರ ಬೇರೆ ನೀರಿನಲ್ಲಿ ಮತ್ತೊಮ್ಮೆ ತೊಳೆದುಕೊಳ್ಳಬೇಕು. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ನೀರು ಸ್ವಲ್ಪ ಬಿಸಿ ಆದಮೇಲೆ ತೊಳೆದಿಟ್ಟ ದ್ರಾಕ್ಷಿಯನ್ನು ಬಿಸಿ ನೀರಿಗೆ ಹಾಕಿ, ಮೊದಲೇ ನೀರು ಎಷ್ಟು ಬೇಕು ಅಷ್ಟನ್ನು ಹಾಕಿಕೊಳ್ಳಬೇಕು ನಂತರ ಹಾಕಬಾರದು. ಹದಿನೈದರಿಂದ ಇಪ್ಪತ್ತು ನಿಮಿಷ ದ್ರಾಕ್ಷಿ ಹಣ್ಣನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ದ್ರಾಕ್ಷಿ ಹಣ್ಣು ಬೆಂದು ಸರಿಯಾಗಿ ಅದರ ಫ್ಲೇವರ್ ಬರುವವರೆಗೂ ಕುದಿಸಬೇಕು. ಗ್ಯಾಸ್ ಬಂದ್ ಮಾಡಿ ಇಡೀ ರಾತ್ರಿ ಅದನ್ನು ಹಾಗೆ ಬಿಡಬೇಕು. ಇಲ್ಲವಾದರೆ ೪/೫ ಗಂಟೆಗಳ ಕಾಲ ವಾದರು ಬೇಯಿಸಿದ ನಂತರ ಹಾಗೆಯೇ ಬಿಡಬೇಕು. ನಂತರ ಜ್ಯೂಸ್ ಮಾಡಿಕೊಳ್ಳಬಹುದು. ಇಡೀ ರಾತ್ರಿ ಹಾಗೆ ನೆನೆಸಿ ಇಡುವುದರಿಂದ ದ್ರಾಕ್ಷಾರಸ ಒಳ್ಳೆಯ ಬಣ್ಣ ಬರತ್ತೆ.
ಅದಕ್ಕೆ ಸಿಹಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ ಸ್ಮಾಷ್ ಮಾಡಬಹುದು ಅಥವಾ ಮಿಕ್ಸಿ ಅಲ್ಲಿ ಕೂಡ ಪೇಸ್ಟ್ ಮಾಡಿ ಸೋಸಿಕೊಳ್ಳಬಹುದು. ಯಾವುದೇ ಕೆಮಿಕಲ್ ಹಾಗೂ ಕಲರ್ ಗಳು ಇಲ್ಲದೆ ನೈಸರ್ಗಿಕ ಬಣ್ಣದ ದ್ರಾಕ್ಷರಸ ರೆಡಿ ಆಗತ್ತೆ. ಇದು ಮಕ್ಕಳಿಗೆ ಸಹ ಒಳ್ಳೆಯದು. ಮಕ್ಕಳಿಗೆ ಎಲ್ಲಾದರೂ ಬಿದ್ದು ಗಾಯ ಆಗಿದ್ದಾರೆ ಆ ಗಾಯದ ಮೇಲೆ ಈ ವೈನ್ ಅನ್ನು ಹಾಕಿದ್ರೆ ಗಾಯ ಬೇಗ ಒಣಗತ್ತೆ. ಇದನ್ನ ಇಂದು ತಿಂಗಳವರೆಗೂ ಸಹ ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಬಹುದು. ಸ್ವಲ್ಪ ತೆಳ್ಳಗಿನ ವೈನ್ ಬೇಕಿದ್ರೆ ಅದನ್ನೇ ಸ್ವಲ್ಪ ಬೇರೆ ಪಾತ್ರೆಗೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಹಾಗೂ ಸಕ್ಕರೆ ಸೇರಿಸಿ ವೈನ್ ಮಾಡಿಕೊಳ್ಳಬಹುದು.