ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಇಳುವರಿಯನ್ನು ಹೆಚ್ಚು ಮಾಡಲು ಮತ್ತು ಕೃಷಿಯ ಆಧುನಿಕರಣಗೊಳಿಸಲು ರೈತರಿಗೆ ಸಬ್ಸಿಡಿ ಅಂದರೆ ಸಹಾಯಧನದ ರೂಪದಲ್ಲಿ ಸರಕಾರವು ಕೃಷಿಗೆ ಅಗತ್ಯವಿರುವಂತಹ ಯಂತ್ರಗಳು ಮತ್ತು ಉಪಕರಣಗಳನ್ನು ಸಬ್ಸಿಡಿಯಲ್ಲಿ ಸರ್ಕಾರದ ಕಡೆಯಿಂದ ನೀಡಲಾಗುತ್ತಿದೆ. ಯಾವ ಯಾವ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ರೈತರಿಗೆ ನೀಡಲಾಗುತ್ತಿದೆ ಹಾಗೂ ಯಂತ್ರೋಪಕರಣಗಳ ಬೆಲೆ ಎಷ್ಟು? ರೈತರಿಗೆ ಸಬ್ಸಿಡಿ ಎಷ್ಟು ದೊರೆಯುತ್ತದೆ? ಹಾಗೂ ಯಂತ್ರಗಳನ್ನು ಖರೀದಿಸಲು ರೈತರು ನೀಡಬೇಕಾದ ಮೊತ್ತ ಎಷ್ಟು? ಎನ್ನುವ ಈ ಎಲ್ಲ ಮಾಹಿತಿಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ರಿಪರ್ ಅಥವಾ ಬೆಳೆಗಳನ್ನು ಕಟಾವು ಮಾಡುವ ಯಂತ್ರ. ಯಂತ್ರದ ಬೆಲೆ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಆಗಿದ್ದು ಸರ್ಕಾರದ ಕಡೆಯಿಂದ ರೈತರಿಗೆ ದೊರೆಯುವ ಸಬ್ಸಿಡಿ ಹಣ 50,000 ರೂಪಾಯಿ ಹಾಗೂ ರೈತರು ಕೊಂಡುಕೊಳ್ಳಲು ಕೊಡಬೇಕಾದ ಹಣ 65,000 ರೂಪಾಯಿ.
ನೇಗಿಲು. ಇದರ ಮೊತ್ತ 41 ಸಾವಿರ ರೂಪಾಯಿ ಆಗಿದ್ದು ಸರಕಾರದ ಕಡೆಯಿಂದ ದೊರೆಯುವ ಸಬ್ಸಿಡಿ ಹಣ 18 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 23 ಸಾವಿರ ರೂಪಾಯಿ.
ಚಾಪ್ ಕಟರ್ ಇದರ ಮೊತ್ತಹುಟ್ಟು rs.25000 ಇದ್ದು ಸರ್ಕಾರದ ಕಡೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಹಣ 11,000 ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 14 ಸಾವಿರ ರೂಪಾಯಿ ಆಗಿರುತ್ತದೆ.
2hp ಚಾಪ್ ಕಟರ್, ಹಿಟ್ಟಿನ ಗಿರಣಿ. ಈ ಯಂತ್ರದ ಒಟ್ಟು ಬೆಲೆ 46 ಸಾವಿರ ರೂಪಾಯಿ ಆಗಿದ್ದು ಸರ್ಕಾರದ ಕಡೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಹಣ 20,000 ರೂಪಾಯಿ ಆಗಿದ್ದು ರೈತರು ಯಂತ್ರವನ್ನು ಕೊಂಡುಕೊಳ್ಳಲು 26 ಸಾವಿರ ರೂಪಾಯಿ ಕೊಡಬೇಕಾಗುತ್ತದೆ.
6hp ಕಳೆ ಕೀಳುವ ಯಂತ್ರ. ಈ ಯಂತ್ರವನ್ನೂ ಕೊಂಡುಕೊಳ್ಳಲು ಸಬ್ಸಿಡಿಯನ್ನು ಹೊರತುಪಡಿಸಿ ರೈತರು ತಮ್ಮ ಕೈಯಿಂದ 35,000 ರೂಪಾಯಿ ಹಣವನ್ನು ಹಾಕಿಕೊಳ್ಳಬೇಕಾಗುತ್ತದೆ. ಮತ್ತೆ ಇದೇ ಕಳೆಕೀಳುವ ಯಂತ್ರ 9hp ಆಗಿದ್ದರೆ ಇದರ ಸಬ್ಸಿಡಿಯನ್ನು ಹೊರತುಪಡಿಸಿ ರೈತರು ನೀಡಬೇಕಾಗಿರುವ ಹಣ 65 ಸಾವಿರ ರೂಪಾಯಿ ಆಗಿರುತ್ತದೆ.
6 ಫೀಟ್ ಲೇವೆಲ್ಲರ್ ಬ್ಲೇಡ್.. ಯಂತ್ರದ ಮೊತ್ತ ಮೊತ್ತ 22 ಸಾವಿರ ರೂಪಾಯಿ ಆಗಿದ್ದು ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ ಹನ್ನೊಂದು ಸಾವಿರ ರೂಪಾಯಿ ಹಾಗೂ ರೈತರು ಹಾಕಿಕೊಳ್ಳಬೇಕಾದ ಹಣ 11 ಸಾವಿರ ರೂಪಾಯಿ ಆಗಿರುತ್ತದೆ.
5 ಟೈನ್ ಡಕ್ ಫುಟ್ ಕಲ್ಟಿವೆಟರ್. ಈ ಯಂತ್ರದ ಒಟ್ಟು ಬೆಲೆ 32,000 ರೂಪಾಯಿ ಆಗಿದ್ದು , ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 14 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 10ಸಾವಿರ ರೂಪಾಯಿ ಆಗಿರುತ್ತದೆ.
42 ಬ್ಲೇಡ್ ರೋಟವೆಟರ್. ಈ ಯಂತ್ರದ ಒಟ್ಟು ಬೆಲೆ 1,09,000 ರೂಪಾಯಿ ಆಗಿದ್ದು , ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 47 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 61 ಸಾವಿರ ರೂಪಾಯಿ ಆಗಿರುತ್ತದೆ.
ಬೆಳೆಗಳನ್ನು ಕತ್ತರಿಸುವ ಯಂತ್ರ.. ಈ ಯಂತ್ರದ ಒಟ್ಟು ಬೆಲೆ 1,10,000 ರೂಪಾಯಿ ಆಗಿದ್ದು , ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 42 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 68 ಸಾವಿರ ರೂಪಾಯಿ ಆಗಿರುತ್ತದೆ.
3 ಡಿಸ್ಕ್ ಹ್ಯಾರೋ ಈ ಯಂತ್ರದ ಒಟ್ಟು ಬೆಲೆ 63,000 ರೂಪಾಯಿ ಆಗಿದ್ದು , ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 36 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 27 ಸಾವಿರ ರೂಪಾಯಿ ಆಗಿರುತ್ತದೆ.
ಪವರ್ ಟಿಲ್ಲರ್ ಈ ಯಂತ್ರದ ಒಟ್ಟು ಬೆಲೆ 1,83,000 ರೂಪಾಯಿ ಆಗಿದ್ದು , ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 60 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 1ಲಕ್ಷದ 23 ಸಾವಿರ ರೂಪಾಯಿ ಆಗಿರುತ್ತದೆ.
ಬೀಜ ಮತ್ತು ಗೊಬ್ಬರವನ್ನು ಬಿತ್ತುವ ಯಂತ್ರ ಈ ಯಂತ್ರದ ಒಟ್ಟು ಬೆಲೆ 61,100 ರೂಪಾಯಿ ಆಗಿದ್ದು, ಸರ್ಕಾರದ ಕಡೆಯಿಂದ ಇದಕ್ಕೆ ನೀಡುವ ಸಬ್ಸಿಡಿ ಮೊತ್ತ 35 ಸಾವಿರ ರೂಪಾಯಿ ಹಾಗೂ ರೈತರು ನೀಡಬೇಕಾದ ಮೊತ್ತ 25 ಸಾವಿರ ರೂಪಾಯಿ ಆಗಿರುತ್ತದೆ.