ಮಲೆನಾಡು ಎಂದರೆ ತಂಬುಳಿ, ಗೊಜ್ಜು, ಸಾರು ನೆನಪಾಗುತ್ತದೆ. ಅದರಲ್ಲಿ ಸುಲಭವಾಗಿ ಮಾಡುವ ದೊಡ್ಡಪತ್ರೆ ತಂಬುಳಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ದೊಡ್ಡಪತ್ರೆ ಗಿಡವನ್ನು ಮನೆಯಲ್ಲೇ ಬೆಳೆಸಿಕೊಳ್ಳಬಹುದು ಪೋಟ್ ನಲ್ಲಿ ಮಣ್ಣು ಮತ್ತು ಗೊಬ್ಬರ ಹಾಕಿ ಚೆನ್ನಾಗಿ ಬೆಳೆಸಬಹುದು ದೊಡ್ಡಪತ್ರೆಯನ್ನು ಬಳಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಇದರ ಎಲೆಯನ್ನು ಕಾಳಮೆಣಸು ಮತ್ತು ಉಪ್ಪಿನಜೊತೆ ತಿನ್ನುವುದರಿಂದ ಗಂಟಲು ಕೆರೆತ ಕಡಿಮೆಯಾಗುತ್ತದೆ. ಕತ್ತರಿಯಿಂದ 8-10 ದೊಡ್ಡಪತ್ರೆ ಎಲೆಗಳನ್ನು ಕಟ್ ಮಾಡಿಕೊಳ್ಳಬೇಕು ಒಂದು ಬೌಲ್ ಮೊಸರು ಮೊಸರನ್ನು ಗಂಟಿರದ ಹಾಗೆ ಮಜ್ಜಿಗೆ ಮಾಡಿಕೊಳ್ಳಬೇಕು. ಒಂದುವರೆ ಟಿ ಚಮಚ ಜೀರಿಗೆ, 8-10ಕಾಳುಮೆಣಸು, ಮುಕ್ಕಾಲು ಕಪ್ ತಾಜಾ ತೆಂಗಿನತುರಿ, ಒಗ್ಗರಣೆಗೆ ಮೆಣಸು, ಕರಿಬೇವು, ಸಾಸಿವೆ ಮತ್ತು ಉಪ್ಪು.
ಮೊದಲಿಗೆ ಜೀರಿಗೆ ಮತ್ತು ಕಾಳುಮೆಣಸನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು ತಣ್ಣಗಾದ ನಂತರ ಅದಕ್ಕೆ ತೆಂಗಿನತುರಿ ಮತ್ತು ಉಪ್ಪನ್ನು ಹಾಕಿಡಬೇಕು. ಅದೇ ಪಾತ್ರೆಯಲ್ಲಿ ದೊಡ್ಡಪತ್ರೆ ಎಲೆಗಳನ್ನು ಹುರಿದುಕೊಳ್ಳಬೇಕು ಎಲೆಗಳು ಬಾಡಿದಮೇಲೆ ಪೇತ್ಯೇಕವಾಗಿ ಇಟ್ಟುಕೊಳ್ಳಬೇಕು. ಅದೇ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ಸಾಸಿವೆ, ಮೆಣಸು, ಕರಿಬೇವು ಹಾಕಿ ಒಗ್ಗರಣೆ ಮಾಡಬೇಕು ನಂತರ ಹುರಿದ ಜೀರಿಗೆ ಮತ್ತು ಕಾಳುಮೆಣಸನ್ನು ಸ್ವಲ್ಪ ಮಿಕ್ಸಿಯಲ್ಲಿ ರುಬ್ಬಬೇಕು ಅರ್ಧ ರುಬ್ಬಿದ ನಂತರ ಅದಕ್ಕೆ ಹುರಿದ ದೊಡ್ಡಪತ್ರೆಯನ್ನು ಹಾಕಿ ಪುನಃ ರುಬ್ಬಬೇಕು ಈ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ನೀರನ್ನು ಹಾಕಿ ಹದ ಮಾಡಬೇಕು ಇದಕ್ಕೆ ಒಗ್ಗರಣೆಯನ್ನು ಸೇರಿಸಬೇಕು ತಂಬುಳಿ ತಯಾರಾಗಿದೆ. ಅನ್ನದೊಂದಿಗೆ ಸವಿಯಿರಿ ಇದು ಆರೋಗ್ಯಕ್ಕೆ ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.