ಕಡಲೇ ಹಿಟ್ಟು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ನಾವು ಪ್ರತಿನಿತ್ಯ ಬಳಕೆಮಾಡುವ ಸೋಪಿ ಗಿಂತಲೂ ಕಡಲೆಹಿಟ್ಟು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಕಡಲೆ ಹಿಟ್ಟಿನಲ್ಲಿ ನಮ್ಮ ಚರ್ಮಕ್ಕೆ ಹಾನಿಕಾರಕವಾಗಿರುವ ಅಂತಹ ಯಾವುದೇ ಅಂಶಗಳು ಕೂಡ ಇರುವುದಿಲ್ಲ. ಇದನ್ನು ಬಳಕೆ ಮಾಡುವುದರಿಂದ ನಾವು ಚರ್ಮದ ಮೇಲೆ ಆಗಿರುವಂತಹ ಕಲೆಗಳನ್ನು ಗುಣಪಡಿಸಿಕೊಳ್ಳಬಹುದು. ನಿಯಮಿತವಾಗಿ ಕಡಲೆಹಿಟ್ಟನ್ನು ಬಳಕೆ ಮಾಡುವುದರಿಂದ ನಮ್ಮ ದೇಹದ ತ್ವಚೆಗಳು ಕಾಂತಿಯುತವಾಗಿ ಇರುತ್ತದೆ. ನಮ್ಮ ಚರ್ಮದ ಮೇಲೆ ಉಂಟಾಗುವಂತಹ ಹಲವು ಸಮಸ್ಯೆಗಳನ್ನು ನಾವು ಕಡಲೆಹಿಟ್ಟಿನ ಮೂಲಕ ಗುಣಪಡಿಸಿಕೊಳ್ಳಬಹುದು. ಈಗಿನ ಜೀವನಶೈಲಿ ಧೂಳು ಪ್ರದೂಷಣೆಯಿಂದ ಆಗಿ ನಮ್ಮ ಚರ್ಮದ ಮೇಲೆ ತುಂಬಾನೇ ಪರಿಣಾಮವನ್ನು ಬೀರುತ್ತದೆ. ನಮ್ಮ ಚರ್ಮದ ಸಂರಕ್ಷಣೆಗಾಗಿ ನಾವು ಹಲವಾರು ರೀತಿಯ ಕ್ರೀಮ್ ಗಳನ್ನು ಬಳಸುತ್ತೇವೆ ಆದರೆ ಇದರಿಂದ ಇನ್ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮ ಕೂಡ ಕೆಲವರಿಗೆ ಉಂಟಾಗುತ್ತದೆ. ಆದರೆ ನಾವು ಕಡಲೆಹಿಟ್ಟನ್ನು ಬಳಕೆ ಮಾಡುವುದರಿಂದ ನಮ್ಮ ಚರ್ಮಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಈ ಲೇಖನದ ಮೂಲಕ ನಾವು ನಮ್ಮ ಚರ್ಮದ ಕೆಲವು ಸಮಸ್ಯೆಗಳಿಗೆ ಕಡಲೆ ಹಿಟ್ಟಿನಿಂದ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.
ಮುಖದ ಮೇಲೆ ಉಂಟಾಗಿರುವ ಮೊಡವೆಗಳ ಕಲೆಗಳು ಕೆಲವೊಮ್ಮೆ ಹೋಗದೆ ಹಾಗೇ ಉಳಿದುಕೊಂಡಿರುತ್ತದೆ. ಮೊಡವೆಗಳ ಕಲೆಗಳನ್ನು ನಿವಾರಿಸುವುದರಲ್ಲಿ ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ ಎನ್ನಬಹುದು. ಮೊಡವೆಗಳಿಂದ ಉಂಟಾದ ಕಲೆಗಳನ್ನು ನಿವಾರಿಸಿಕೊಳ್ಳಲು ಕಡಲೆಹಿಟ್ಟು ನಮಗೆ ಹೇಗೆ ಪ್ರಯೋಜನಕಾರಿಯಾಗಿದೆ ಹಾಗೂ ಅದನ್ನು ನಾವು ಹೇಗೆ ಬಳಸಿಕೊಳ್ಳುವುದು ಅಂತ ನೋಡುವುದಾದರೆ ಎರಡು ಚಮಚ ಕಡಲೆಹಿಟ್ಟು ತೆಗೆದುಕೊಂಡು ಅದಕ್ಕೆ ಅರ್ಧ ಟೀ ಸ್ಪೂನ್ ನಷ್ಟು ಅರಿಶಿಣ , ಕೆಲವು ಹನಿಗಳಷ್ಟು ನಿಂಬೆರಸ ಹಾಗೂ ಸ್ವಲ್ಪ ಮೊಸರನ್ನು ಸೇರಿಸಿ ಪೇಸ್ಟ್ ಮಾಡಿಕೊಂಡು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯುವುದರಿಂದ ಮುಖದ ಮೇಲೆ ಆಗಿರುವಂತಹ ಮೊಡವೆಗಳ ಕಲೆಗಳು ನಿವಾರಣೆಯಾಗುತ್ತದೆ. ಈ ರೀತಿಯಾಗಿ ಕೆಲವು ದಿನಗಳ ಕಾಲ ಮಾಡುವುದರಿಂದ ಸಂಪೂರ್ಣವಾಗಿ ನಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಕಲೆಗಳು ಇಲ್ಲದೆ ಇರುವ ಹಾಗೆ ನಮ್ಮ ಧರ್ಮವನ್ನು ನಾವು ರಕ್ಷಿಸಿಕೊಳ್ಳಬಹುದು.
ಮುಖದಲ್ಲಿ ಎಣ್ಣೆಯ ಅಂಶ ಇರುವ ಚರ್ಮಕ್ಕೆ ಕಡಲೆಹಿಟ್ಟು ತುಂಬಾ ಪ್ರಯೋಜನಕಾರಿಯಾಗಿದೆ. ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ರೋಜ್ ವಾಟರ್ ಜೊತೆ ಮಿಕ್ಸ್ ಮಾಡಿ ಇದನ್ನು ಎರಡು ದಿನಕ್ಕೆ ಒಮ್ಮೆ ಹಚ್ಚಿಕೊಳ್ಳುವುದರಿಂದ ಮುಖದಲ್ಲಿ ಎಣ್ಣೆಯಂಶ ನಿವಾರಣೆಯಾಗುತ್ತದೆ. ಈ ರೀತಿಯಾಗಿ ಕೆಲವು ದಿನಗಳ ಕಾಲ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ನಮ್ಮ ಮುಖದ ಮೇಲೆ ಆಗಿರುವಂತಹ ಮೊಡವೆಗಳ ನಿವಾರಣೆ ಮಾಡಲು ಕೂಡ ಕಡಲೆಹಿಟ್ಟು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನಬಹುದು. ಒಂದು ಬೌಲ್ ನಲ್ಲಿ ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಗಂಧದ ಪುಡಿ ಹಾಗೂ ಹಾಲನ್ನು ಸೇರಿಸಿ ಹಾಗೆ ಇದಕ್ಕೆ ಸ್ವಲ್ಪ ಅರಿಶಿನ ಹಾಗೂ ನೀರನ್ನು ಸೇರಿಸಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಮೇಲೆ ಆಗಿರುವಂತಹ ಮೊಡವೆಗಳು ನಿವಾರಣೆಯಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ನಿಯಮಿತವಾಗಿ ಇದನ್ನು ಬಳಕೆ ಮಾಡಬಹುದು.
ಆರೋಗ್ಯಕರವಾದ ಹಾಗೂ ಉತ್ತಮ ಕೂದಲು ಬೇಕು ಎಂದು ಬಯಸುವವರು ಒಂದು ಬೌಲಿನಲ್ಲಿ ಎರಡು ಟೀ ಚಮಚದಷ್ಟು ಕಡಲೆಹಿಟ್ಟು, ಒಂದು ಮೊಟ್ಟೆಯ ಬಿಳಿ ಭಾಗ, ಒಂದು ಟೀ ಚಮಚ ಮೊಸರು ಹಾಗೂ ಅರ್ಧ ಟೀ ಚಮಚ ನಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿಕೊಂಡು ಕೂದಲಿನ ಪ್ಯಾಕ್ ರೀತಿ ತಯಾರಿಸಿಕೊಳ್ಳಬೇಕು. ಈ ಪ್ಯಾಕನ್ನು ಕೂದಲಿನ ಬುಡದಿಂದ ಹಿಡಿದು ಎಲ್ಲಾ ಕಡೆಯೂ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಲ್ಲಿ ಕೂದಲನ್ನು ತೊಳೆಯಬೇಕು. ಈ ರೀತಿ ಮಾಡುವುದರಿಂದ ನಾವು ಕೂದಲು ಉದುರುವ ಸಮಸ್ಯೆ ಡ್ಯಾಂಡ್ರಫ್ ಸಮಸ್ಯೆಯಿಂದ ಪಾರಾಗಿ ಆರೋಗ್ಯಕರವಾದ ಕೂದಲನ್ನು ಹೊಂದಬಹುದು. ಇವಿಷ್ಟು ಕಡಲೆ ಹಿಟ್ಟಿನಿಂದ ನಮಗಾಗುವ ಪ್ರಯೋಜನಕಾರಿ ಅಂಶಗಳು.