ನಿಮ್ಮ ಸಂಗಾತಿಯನ್ನು ಖುಷಿ ಪಡಿಸೋದು ಹೇಗೆ? ಸಿಂಪಲ್ ಟಿಪ್ಸ್

0 29

Health tips: ಕೆಲವರಲ್ಲಿ ಬೇಕಾದಷ್ಟು ಹಣವಿರುತ್ತದೆ. (Money) ಹಣದಿಂದ ಎಲ್ಲಾ ಸಿಗುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಸಂಗಾತಿಯನ್ನು (Spouse) ಖುಷಿಯಾಗಿ ಇಡಲು ಹಣ ಇದ್ದರೆ ಸಾಕಾಗುವುದಿಲ್ಲ. ಪ್ರೀತಿ ಇರಬೇಕಾಗುತ್ತದೆ. ಮನಸ್ಸಿನಲ್ಲಿ ತನ್ನ ಸಂಗಾತಿಗೆ ಸ್ಥಾನ ಕೊಟ್ಟಿರಬೇಕಾಗುತ್ತದೆ. ಆದ್ದರಿಂದ ನಾವು ಇಲ್ಲಿ ಸಂಗಾತಿಯನ್ನು ಖುಷಿಯಾಗಿ ಇಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲನೆಯದಾಗಿ ಮೊಬೈಲ್ ನ್ನು ದೂರವಿಡಬೇಕು. ಈಗಿನ ದಿನಗಳಲ್ಲಿ ಮೊಬೈಲ್ ನೋಡದೇ ಇದ್ದರೆ ದಿನವೇ ಕಳೆಯುವುದಿಲ್ಲ. ಸಂಗಾತಿಯ ಜೊತೆ ಇರುವಾಗ ಮೊಬೈಲ್ ನ ಬಳಕೆ ಕಡಿಮೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಕೆಲಸಗಳಿದ್ದರೂ ಸಂಗಾತಿಯ ಜೊತೆ ಇರುವಾಗ ಮೊಬೈಲ್ ನ್ನು ದೂರವಿಡುವುದು ಒಳ್ಳೆಯದು. ಜೀವನದಲ್ಲಿ ಸಂಗಾತಿಗಿಂತ ಯಾವುದೂ ಮುಖ್ಯವಲ್ಲ ಎಂದು ತಿಳಿಯುವಂತೆ ಮಾಡಬೇಕು. ಏಕೆಂದರೆ ಒಂದು ಹೆಣ್ಣು ತನ್ನ ಗಂಡನ ಜೊತೆ ಬದುಕಲು ತಾನು ಹುಟ್ಟಿ ಬೆಳೆದ ತವರುಮನೆ, ತಂದೆತಾಯಿ ಎಲ್ಲಾ ಸಂಬಂಧವನ್ನು ಬಿಟ್ಟು ಬಂದಿರುತ್ತಾಳೆ.

ಹಾಗೆಯೇ ನಂತರದಲ್ಲಿ ಎಲ್ಲಾದರೂ ಹೊರಗಡೆ ಹೋಗುವ ಪ್ಲಾನ್ ಮಾಡಬೇಕು. ಏಕೆಂದರೆ ಯಾವಾಗಲೂ ಮನೆಯಲ್ಲಿ ಇದ್ದು ಸಂಗಾತಿಗೆ ಬೇಸರ ಬಂದಿರುತ್ತದೆ. ಅವಳೇ ಎಲ್ಲಾದರೂ ಹೋಗುವ ಪ್ಲಾನ್ ಮಾಡಲಿ ಎಂದು ಬಯಸಬಾರದು. ಒಂದು ಒಳ್ಳೆಯ ಪ್ಲಾನ್ ಮಾಡಿ ನೀವೇ ಹೊರಗಡೆ ಕರೆದುಕೊಂಡು ಹೋಗಬೇಕು. ಸಂಗಾತಿಗೆ ತುಂಬಾ ಆಶ್ಚರ್ಯ ಆಗಬೇಕು. ಅಂತಹ ಸ್ಥಳಕ್ಕೆ ಕರೆದುಕೊಂಡು ಹೋಗಬೇಕು.

ಹಾಗೆಯೇ ಏನಾದರೂ ಜಗಳ ಆದಾಗ ಸಂಗಾತಿ ಸುಮ್ಮನಿದ್ದಾಳೆ ಎಂದು ಸುಮ್ಮನಿರಬಾರದು. ಹೋಗಿ ಸಮಾಧಾನ ಮಾಡಿ ಖುಷಿಯಾಗಿ ಇರುವಂತೆ ಮಾಡಬೇಕು. ಹಾಗೆಯೇ ಅವಳಿಗೆ ಇಷ್ಟ ಆಗುವ ಅಡುಗೆಗಳನ್ನು ಮಾಡಿ ಕೊಡಬೇಕು. ಇದರಿಂದ ಸಂಗಾತಿಗೆ ಬಹಳ ಸಂತೋಷವಾಗುತ್ತದೆ. ಕೊನೆಯದಾಗಿ ಹೇಳುವುದೇನೆಂದರೆ ಜೀವನವನ್ನು ಸಂಗಾತಿಯೊಂದಿಗೆ ಕೊನೆಯ ತನಕ ಖುಷಿಯಿಂದ ಬಾಳಬೇಕು.

Leave A Reply

Your email address will not be published.