ತುಪ್ಪ ಮನುಷ್ಯನಿಗೆ ಅತಿ ಉಪಯುಕ್ತವಾದದ್ದು ಇದನ್ನು ಹಲವು ಬಗೆಗಳಲ್ಲಿ ಬಳಸಲಾಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೆಸರುಗಳಿಂದ ತುಪ್ಪ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಡುಗೆಗೆ ಹಾಗು ಆಹಾರದೊಂದಿಗೆ ತುಪವನ್ನು ಸೇವಿಸಲು ತುಪ್ಪ ಬೇಕೇ ಬೇಕಾಗುತ್ತದೆ ಹಾಗಾಗಿ ನೀವು ಬಳಸುವಂತ ತುಪ್ಪ ನಿಜಕ್ಕೂ ಶುದ್ಧ ತುಪ್ಪವೇ ಅನ್ನೋದು ನಿಮಗೆ ತಿಳಿಯಬೇಕಾ? ಹಾಗಾದರೆ ಈ ವಿಧಾನವನ್ನೊಮ್ಮೆ ಮಾಡಿ ನೋಡಿ ತುಪ್ಪ ಶುದ್ಧವಾದದ್ದು ಅಥವಾ ಕಳಪೆ ಅನ್ನೋದು ನಿಮಗೆ ತಿಳಿಯುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಸಿಗುವಂತ ನಾಟಿ ಹಸು ಮುಂತಾದ ತೂಪಗಳು ಶುದ್ಧವಾಗಿರುತ್ತವೆ ಆದ್ರೆ ಮಾರುಕಟ್ಟೆಯಲ್ಲಿ ಬರುತ್ತಿರುವ ತುಪ್ಪಗಳು ಕಳಪೆಯಾಗಿರುತ್ತವೆ ಅನ್ನೋದನ್ನ ಹೇಳಲಾಗುತ್ತದೆ ಆದ್ರೆ ಇದರಿಂದ ನಿಮಗೆ ಗೊಂದಲ ಬೇಡ ನೀವು ಬಳಸುವ ತುಪ್ಪ ಶುದ್ಧವಾಗಿದ್ದರೆ ತೊಂದರೆ ಇಲ್ಲ ಬನ್ನಿ ತುಪ್ಪದ ಶುದ್ಧತೆಯನ್ನು ಪರೀಕ್ಷಿಸೋಣ.
ಮೊದಲನೆಯದಾಗಿ ಹೇಳುವುದಾದರೆ ತುಪ್ಪದ ಶುದ್ಧತೆಯನ್ನು ಕಂಡುಹಿಡಿಯಲು ಹೀಗೆ ಮಾಡಿ ಒಂದು ಚಮಚ ತುಪ್ಪವನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ ಅದು ಬೇಗ ಕರಗಿ ಡಾರ್ಕ್ ಬ್ರೌನ್ ಬಣ್ಣಕ್ಕೆ ಬಂದರೆ ಅದು ಶುದ್ಧವಾದ ಹಸುವಿನ ತುಪ್ಪ ಎಂದು ಕರೆಸಿಕೊಳ್ಳುತ್ತದೆ. ಅದು ನಿದಾನಕ್ಕೆ ಲೇಟಾಗಿ ಕಂದುಬಣ್ಣಕ್ಕೆ ಅಂದ್ರೆ ಡಾರ್ಕ್ ಬ್ರೌನ್ ಬಣ್ಣಕ್ಕೆ ಬಂದರೆ ಅದು ಶುದ್ಧವಾದ ತುಪ್ಪ ಅಲ್ಲ ಅನಿಸುತ್ತದೆ.
ಮತ್ತೊಂದು ವಿಧಾನ: ನಿಮ್ಮ ಕೈಯಲ್ಲಿ ಅಂದ್ರೆ ಹಸ್ತದ ಮೇಲೆ ತುಪ್ಪ ಹಾಕಿಕೊಳ್ಳಿ ಅದು ತಕ್ಷಣ ಕರಗಿದರೆ ಶುದ್ಧ ತುಪ್ಪ ಎಂದು ಅರ್ಥ ಅದು ಬೇಗನೆ ಕರಗದಿದ್ದರೆ ಅಶುದ್ಧತೆಯಿಂದ ಕೂಡಿದೆ ಅನ್ನೋದನ್ನ ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ.