ಊಟಕ್ಕೆ ಪ್ರತೀ ದಿನ ಏನ್ ಮಾಡೋದು ಅನ್ನೋ ಚಿಂತೆ ಎಲ್ಲರಿಗೂ ಕಾಮನ್ ವಿಷಯ. ಈಗ ಮಾವಿನ ಸೀಜನ್ ಆಗಿರೋದರಿಂದ ಸುಲಭವಾಗಿ ಟೇಸ್ಟೀ ಆಗಿ ಹುಳಿ ಮತ್ತು ಖಾರವಾಗಿ ಇರೋ ಮಾವಿನಕಾಯಿ ಚಿತ್ರಾನ್ನ ಹೇಗೇ ಮಾಡೋದು ಅಂತ ತಿಳಕೊಳ್ಳೋಣ. ಯುಗಾಧಿ ಹಬ್ಬದ ದಿನ ಮಾವಿನಕಾಯಿಯ ಚಿತ್ರಾನ್ನ ಮಾಡೋದು ವಾಡಿಕೆ. ಹಾಗಿದ್ರೆ ತಡ ಯಾಕೆ ಫಟಾ ಫಟ್ ಅಂತ ಮಾವಿನಕಾಯಿಯ ಚಿತ್ರಾನ್ನ ಮಾಡೋಕೆ ಏನೇನು ಸಾಮಗ್ರಿಗಳು ಬೇಕು? ಮಾಡೋದು ಹೇಗೇ ಅಂತ ನೋಡಕೊಂಡು ನೀವೂ ಕೂಡ ಟ್ರೈ ಮಾಡಿ ನೋಡಿ.
ಬೇಕಾಗಿರುವ ಸಾಮಗ್ರಿಗಳು:- ೧ ತುರಿದುಕೊಂಡ ಮಾವಿನಕಾಯಿ, ೪/೫ ಟೀ ಸ್ಪೂನ್ ಎಣ್ಣೆ, ೭/೮ ಚಿಕ್ಕದಾಗಿ ಕಟ್ ಮಾಡಿದ ಹಸಿಮೆಣಸಿನ ಕಾಯಿ, ೪ ಟೀ ಸ್ಪೂನ್ ಅಷ್ಟು ಶೇಂಗಾ ಬೀಜ, ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕರಿ ಬೇವಿನ ಎಲೆ ಸ್ವಲ್ಪ
ಒಗ್ಗರಣೆಗೆ:- ಸಾಸಿವೆ, ಅರಿಶಿಣದ ಪುಡಿ, ಜೀರಿಗೆ, ೨ಟೀ ಸ್ಪೂನ್ ಅಷ್ಟು ಉದ್ದಿನ ಬೇಳೆ ಮತ್ತು ಕಡಲೇ ಬೇಳೆ ಮತ್ತೂ ರುಚಿಗೆ ತಕ್ಕಷ್ಟು ಉಪ್ಪು. ಇವಿಷ್ಟು ಮಾವಿನಕಾಯಿ ಚಿತ್ರಾನ್ನ ಮಾಡೋಕೆ ಬೇಕಾದ ಸಾಮಗ್ರಿಗಳು. ಇನ್ನೂ ಮಾಡೋದು ಹೇಗೆ ಅಂತ ನೋಡೋಣ.
ಸ್ಟೋವ್ ಮೇಲೆ ಒಂದು ಬಾಣಲೆ ಇಟ್ಟು ಸ್ವಲ್ಪ ಬಿಸಿ ಆದ ನಂತರ ೪ಸ್ಪೂನ್ ಎಣ್ಣೇ ಹಾಕಿ ಬಿಸಿ ಆದ ನಂತರ ಸಾಸಿವೆ ಕಾಳು ಹಾಕಿ ಸಿಡಿದ ನಂತರ ೨ ಸ್ಪೂನ್ ಜೀರಿಗೆ, ೨ಟೀ ಸ್ಪೂನ್ ಅಷ್ಟು ಉದ್ದಿನ ಬೇಳೆ ಮತ್ತು ಕಡಲೇ ಬೇಳೆ ಹಾಕಾ ೩೦ಸೆಕೆಂಡ್ ಕಾಲ ಫ್ರೈ ಮಾಡಿಕೊಂಡು ಸಣ್ಣದಾಗಿ ಕಟ್ ಮಾಡಿರುವ ೮ ಹಸಿಮೆಣಸಿನ ಕಾಯಿ ಹಾಕಿ ಮತ್ತೆ ೩೦ಸೆಕೆಂಡ್ ಕಾಲ ಫ್ರೈ ಮಾಡಿಕೊಂಡು ನಂತರ ಬೇವಿನ ಸೊಪ್ಪು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತುರಿದಿಟ್ಟ ಮಾವಿನಕಾಯಿ ಹಾಕಿ ೧ ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಕೊಂಡು ಅರಿಶಿಣದ ಪುಡಿ ಸೇರಿಸಿ ಮಿಕ್ಸ್ ಮಾಡಿ ಸ್ಟೋವ್ ಬಂದ್ ಮಾಡಿ, ಇನ್ನೋಂದು ಚಿಕ್ಕ ಕಡಾಯಿ ಅಲ್ಲಿ ೧ ಸ್ಪೂನ್ ಎಣ್ಣೆ ಹಾಕಿ ಬಿಸಿ ಆದಮೇಲೆ ಕಡಲೆಕಾಯಿ ಬೀಜ ಸೇರಿಸಿ ಒಂದು ನಿಮಿಶಗಳ ಕಾಲ ಫ್ರೈ ಮಾಡಕೊಂಡು ನಂತರ ಬಾಣಲೆಗೆ ಸೇರಿಸಿಕೊಳ್ಳಬೇಕು. (ಕಡಲೆಕಾಯಿ ಬೀಜ ಮಾವಿನಕಾಯಿ ಜೊತೆಗೇ ಪ್ರೈ ಮಾಡಿದ್ರೆ ಕ್ರಿಸ್ಪಿ ಆಗಿ ಇರಲ್ಲ ಹಾಗಾಗಿ ಬೇರೆ ಫ್ರೈ ಮಾಡಿಕೊಳ್ಳಬೇಕು) ನಂತರ ಕೊತ್ತಂಬರಿ ಸೊಪ್ಪು ಹಾಕಿ, ಮೊದಲೇ ಬಿಡಿ ಬಿಡಿಯಾಗಿ ಮಾಡಾಟ್ಟುಕೊಂಡ ಅನ್ನವನ್ನ ಸೇರಿಸಿ ಚೆನ್ನಾಗಿ ಕಲಸಿದ