ಕಬ್ಬು ಅಂದ್ರೆ ಕೆಲವರಿಗೆ ಅಚ್ಚು ಮೆಚ್ಚು ಅದರಲ್ಲೂ ಇದರ ಜ್ಯುಸ್ ಸೇವನೆ ಮಾಡುವುದು ಅಂದ್ರೆ ಇನ್ನು ಕೇವರಿಗೆ ಬಲು ಇಷ್ಟವಾಗುತ್ತದೆ, ಇದು ರುಚಿಯಲ್ಲಿ ಮಾತ್ರವಲ್ಲದೆ ದೇಹಕ್ಕೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ನೀಡುವಂತ ಕೆಲಸ ಮಾಡುತ್ತದೆ. ನೀವು ಕೂಡ ಕಬ್ಬಿನ ಜ್ಯುಸ್ ಸೇವನೆ ಮಾಡುತ್ತಿದ್ದರೆ ಅಥವಾ ಮಾಡದೇ ಇದ್ರೂ ಕೂಡ ಇದರಲ್ಲಿ ಇರುವಂತ ಆರೋಗ್ಯಕಾರಿ ಪ್ರಯೋಜನಗಳನ್ನು ಒಮ್ಮೆ ತಿಳಿದುಕೊಳ್ಳಿ, ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ದೇಹಕ್ಕೆ ತಂಪು ನೀಡುವಂತ ಕಬ್ಬಿನ ರಸ ಉರಿ ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತಹೀನತೆಯಿಂದ ದೂರ ಮಾಡುತ್ತದೆ. ಹೌದು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಶುದ್ಧವಾದ ಕಬ್ಬಿನ ರಸದಲ್ಲಿ ಹುರಿದ ಗೋಧಿಹಿಟ್ಟನ್ನು ಸೇರಿಸಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವದು.
ಉರಿಮೂತ್ರ ನಿವಾರಣೆಗೆ: ಉರಿ ಮೂತ್ರ ಕಾಣಿಸಿಕೊಂಡಾಗ ಕಬ್ಬಿನ ರಸದಲ್ಲಿ ನೆಲ್ಲಿಕಾಯಿ ರಸ ಹಾಗು ಜೇನುತುಪ್ಪ ಬೆರಸಿ ಕುಡಿದರೆ ಶಮನವಾಗುವುದು ಅಷ್ಟೇ ಅಲ್ಲದೆ ದೇಹಕ್ಕೆ ತಂಪು ನೀಡುವಂತ ಕೆಲಸವನ್ನು ಈ ಕಬ್ಬಿನ ರಸ ಅಂದರೆ ಜ್ಯುಸ್ ಸಹಕರಿಸುತ್ತದೆ.
ಇನ್ನು ಧ್ವನಿ ಒಡೆಯುವ ಸಮಸ್ಯೆಗೆ: ಕಬ್ಬಿನ ರಸವನ್ನು ಸ್ವಲ್ಪ ಕಾಯಿಸಿ ಜಾಡಿಯಲ್ಲಿಡಬೇಕು. ಎಂಟು ದಿನಗಳ ನಂತರ ಗಂಟಲು ಕಟ್ಟಿಕೊಂಡಿದ್ದರೆ ಅಥವಾ ಧ್ವನಿ ಒಡೆದಿದ್ದರೆ ಈ ರಸದಿಂದ ಬಾಯಿ ಮುಕ್ಕಳಿಸಿದರೆ ಪರಿಹಾರ ಕಾಣಬಹದು. ಹೀಗೆ ಕಬ್ಬು ಹತ್ತಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ.